ರೋಡ್ ಶೋ ವೇಳೆ 3 ಲಕ್ಷಕ್ಕೂ ಅಧಿಕಮಂದಿ ಪಾಲ್ಗೊಳ್ಳುವ ಸಾಧ್ಯತೆಖರ್ಗೆ ತವರಲ್ಲಿ ಇಂದು ಸಂಜೆ ಪ್ರಧಾನಿ ಮೋದಿ ಹವಾ

ಮಹೇಶ್ ಕುಲಕರ್ಣಿ
ಕಲಬುರಗಿ,ಮೇ 2: ಎಐಸಿಸಿ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನಖರ್ಗೆಯವರ ತವರು ನೆಲವಾಗಿರುವ ಕಲಬುರಗಿ ನಗರದಲ್ಲಿ ಇಂದು ಸಂಜೆಪ್ರಧಾನಿ ನರೇಂದ್ರ ಮೋದಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಸುಮಾರುಮೂರು ಲಕ್ಷಕ್ಕೂ ಅಧಿಕ ಮಂದಿ ರೋಡ್ ಶೋಗೆ ಸಾಕ್ಷಿಯಾಗಲಿದ್ದಾರೆ ಎಂದುಬಿಜೆಪಿ ಮೂಲಗಳು ತಿಳಿಸಿವೆ.
ಕಲಬುರಗಿ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ
ಅಭ್ಯರ್ಥಿಗಳಾದ ಚಂದು ಪಾಟೀಲ್ ಹಾಗೂ ದತ್ತಾತ್ರೇಯ ಸಿ.ಪಾಟೀಲ್ ರೇವೂರ್‍ಪರವಾಗಿ ಪ್ರಧಾನಿ ಮೋದಿ ಈ ರೋಡ್ ಶೋ ಮೂಲಕ ಮತ ಯಾಚನೆಮಾಡಲಿದ್ದರೂ, ಕಲಬುರಗಿ ಜಿಲ್ಲೆಯ ಎಲ್ಲ ಒಂಬತ್ತು ವಿಧಾನಸಭಾಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಜಯಭೇರಿಗೆ ಪೂರಕವಾಗಿ ಮೋದಿ ಈರೋಡ್ ಶೋ ಬಳಸಿಕೊಳ್ಳಲಿದ್ದಾರೆ. ಆ ಮೂಲಕ ಎಐಸಿಸಿ ಅಧ್ಯಕ್ಷ ಖರ್ಗೆಯವರತವರು ಜಿಲ್ಲೆಯಲ್ಲಿಯೇ ಅವರಿಗೆ ತೀವ್ರ ಹಿನ್ನಡೆಯಾಗುವಂತೆ
ನೋಡಿಕೊಳ್ಳುವ ಮಾಸ್ಟರ್ ಪ್ಲಾನ್ ಭಾಗವಾಗಿ ಇಂಥದ್ದೊಂದು ರೋಡ್ ಶೋಹಮ್ಮಿಕೊಳ್ಳಲಾಗುತ್ತಿದೆ.
ವಿವಿಧ ಸುದ್ದಿ ಸಂಸ್ಥೆಗಳು ಹಾಗೂ ಚುನಾವಣಾ ಸಮೀಕ್ಷಾ ಏಜೆನ್ಸಿಗಳು ಭಿನ್ನಭಿನ್ನ ಚುನಾವಣಾ ಪೂರ್ವ ಫಲಿತಾಂಶಗಳನ್ನು ಬಿಂಬಿಸುತ್ತಿವೆ. ಕೆಲವುಸಂಸ್ಥೆಗಳು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬರುವುದಾಗಿ
ಹೇಳುತ್ತಿದ್ದರೂ, ಒಂದಷ್ಟು ಸಂಸ್ಥೆಗಳ ಚುನಾವಣಾ ಪೂರ್ವ
ಸಮೀಕ್ಷೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಭವಿಷ್ಯ ನುಡಿದಿವೆ.ಹಾಗಾಗಿ, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಈ ಬಾರಿ ರಾಜ್ಯದಲ್ಲಿ ತಮ್ಮದೇಸರಕಾರ ರಚನೆಗೆ ಅಗತ್ಯವಿರುವ ಬಹುಮತ ಒಟ್ಟುಗೂಡಿಸಲು ಇನ್ನಿಲ್ಲದ ಸಾಹಸ ಮಾಡುತ್ತಿದ್ದಾರೆ.
ನಾಳೆ ನಗರಕ್ಕೆ ಪ್ರಿಯಾಂಕಾ ಗಾಂಧಿ:
ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಬೆನ್ನಲ್ಲೇಕಾಂಗ್ರೆಸ್ ಸಹ ತನ್ನ ವರ್ಚಸ್ಸು ಸಾಬೀತುಪಡಿಸಲು ಮುಂದಾಗಿದ್ದು, ಇದರಭಾಗವಾಗಿ ನಾಳೆ ಕಲಬುರಗಿ ನಗರದಲ್ಲಿ ಪ್ರಿಯಾಂಕಾ ಗಾಂಧಿ ಅವರು ರೋಡ್‍ಶೋ ಹಮ್ಮಿಕೊಳ್ಳಲಿದ್ದಾರೆ. ಪ್ರಿಯಾಂಕ್ ರೋಡ್ ಶೋಗೆ ಎಐಸಿಸಿ ಅಧ್ಯಕ್ಷಮಲ್ಲಿಕಾರ್ಜುನ ಖರ್ಗೆಯವರು ಸಾಥ್ ನೀಡುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್
ಮೂಲಗಳು ತಿಳಿಸಿವೆ.ಕಲಬುರಗಿಯ ನಗರೇಶ್ವರ ಶಾಲೆ ಎದುರಿನಿಂದ ಆರಂಭಗೊಳ್ಳುವಪ್ರಿಯಾಂಕಾ ರೋಡ್ ಶೋ ನ್ಯೂ ಜೇವರ್ಗಿ ರಸ್ತೆಯ ಮೇಲ್ಸೇತುವೆ ಮೂಲಕರಾಮಮಂದಿರದವರೆಗೆ ನಡೆಯಲಿದೆ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.


ವಾಹನಗಳ ಮಾರ್ಗ ಬದಲಾವಣೆ
ಪ್ರಧಾನಿ ನರೇಂದ್ರ ಮೋದಿಯವರು ಕಲಬುರಗಿ ನಗರದ ಕೆಎಂಎಫ್ ಎದುರಿನರಸ್ತೆಯಿಂದ ಎಸ್‍ವಿಪಿ ವೃತ್ತದವರೆಗೆ ಇಂದು ಸಂಜೆ ಬೃಹತ್ ರೋಡ್ ಶೋನಡೆಸುತ್ತಿರುವ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ತೊಂದರೆ ಆಗದಂತೆ ಪೊಲೀಸ್‍ಇಲಾಖೆ ವಾಹನಗಳ ಮಾರ್ಗ ಬದಲಾವಣೆಗಾಗಿ ವ್ಯಾಪಕ ಮಾರ್ಪಾಡು ಮಾಡಿದೆ.
ಹುಮನಾಬಾದ್ ಕಡೆಯಿಂದ ಬರುವ ಭಾರಿ ಮತ್ತು ಲಘು ವಾಹನ ಸವಾರರು ತಾವರಗೇರಾಕ್ರಾಸ್‍ದಿಂದ ಎಡಕ್ಕೆ ತಿರುಗಿ ತಾವರಗೇರಾ, ಕೆರೂರ್, ಹರಸೂರ್, ಸಾಥಖೇಡ, ಟೆಂಗಳಿಕ್ರಾಸ್ ಮುಖಾಂತರ ಸೇಡಂ ರಸ್ತೆಗೆ ಸಾಗುವುದು.ಸೇಡಂ ಕಡೆಯಿಂದ ಬರುವ ಭಾರಿ ವಾಹನಗಳು ಸಣ್ಣೂರ್ ಕ್ರಾಸ್ ಮುಖಾಂತರ ಶಹಾಬಾದ್
ರೋಡ್ ಭಂಕೂರು ಕ್ರಾಸ್ ಮಾರ್ಗವಾಗಿ ಸಾಗುವುದು ಮತ್ತು ಲಘು ವಾಹನಗಳುವಿಶ್ವವಿದ್ಯಾಲಯ ಚಾಲುಕ್ಯ ಗೇಟ್‍ನಿಂದ ವಿವಿ ಹಿಂಭಾಗದ ಕುಸನೂರ ರಸ್ತೆ ಕಡೆಯಿಂದ
ನ್ಯೂ ಆರ.ಟಿ.ಓ ಕ್ರಾಸ್ ಶಹಾಬಾದ್ ರೋಡ್ ಮುಖಾಂತರ ಸಾಗುವುದು.ಜೇವರ್ಗಿ, ಅಫಜಲಪುರ ಕಡೆಯಿಂದ ಬರುವ ವಾಹನಗಳು ಹೀರಾಪುರ ವೃತ್ತಮುಖಾಂತರ ಆಳಂದ ರಿಂಗ್ ರೋಡ್‍ಗೆ ಬರುವುದು.ಆಳಂದ ಕಡೆಯಿಂದ ಬರುವ ವಾಹನಗಳು ಹೀರಾಪುರ ವೃತ್ತ ಹೈಕೋರ್ಟ್‍ಮಾರ್ಗವಾಗಿ ಸಾಗುವಂತೆ ಪೊಲೀಸ್ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.


ಪಾರ್ಕಿಂಗ್ ವ್ಯವಸ್ಥೆಗೆ ಸ್ಥಳ ನಿಯೋಜನೆ
ಅಫಜಲಪುರ ಕಡೆಯಿಂದ ಬರುವ ವಾಹನ ಸವಾರರು ರಾಮಮಂದಿರ ವೃತ್ತ,ಆರ್.ಪಿ.ರ್ಸಕಲ್, ಎಸ್.ಬಿ.ಕಾಲೇಜು, ಆನಂದ ಹೊಟೇಲ್ ಔಟ್‍ಪೋಸ್ಟ್ ಮೂಲಕ ಎನ್.ವಿ.ಮೈದಾನ, ಪಬ್ಲಿಕ್ ಗಾರ್ಡನ್ ವೀರಶೈವ ಕಲ್ಯಾಣ ಮಂಟಪ, ಖೂಬಾ ಕಲ್ಯಾಣ ಮಂಟಪ
ಆವರಣದಲ್ಲಿ ಪಾರ್ಕ್ ಮಾಡಬೇಕಾಗುತ್ತದೆ.ಆಳಂದ ಕಡೆಯಿಂದ ವಾಹನಗಳು ಆಳಂದ್ ಚೆಕ್‍ಪೋಸ್ಟ್ ಸಮೀಪದ ರಾಮತೀರ್ಥ
ಮೈದಾನ ಅಥವಾ ಶಹಾಬಜಾರ್ ನಾಕಾ, ಲಾಲ್‍ಗೇರಿ ಮೂಲಕ ಬಂಧುಶ್ರೀ, ಶರಣಬಸವೇಶ್ವರಜಾತ್ರಾ ಮೈದಾನ, ಕೋಟೆ ಮುಂಭಾಗದ ಮತ್ತು ಟ್ಯಾಕ್ಸಿ ನಿಲ್ದಾಣದಲ್ಲಿ ಪಾರ್ಕ್‍ಮಾಡಬೇಕಾಗುತ್ತದೆ.
ಜೇವರ್ಗಿ ಮತ್ತು ಅಫಜಲಪುರ ಕಡೆಯಿಂದ ಬರುವ ವಾಹನ ಸವಾರರು ಹೈಕೋರ್ಟ್‍ಕ್ರಾಸ್ ಮೂಲಕ ಹೀರಾಪುರ ವೃತ್ತ ಮಾರ್ಗವಾಗಿ ಎಂ.ಎಸ್.ಕೆ ಮಿಲ್ ಮೈದಾನ ಮತ್ತು ಜಿಡಿಎ
ಲೇಔಟ್‍ನಲ್ಲಿ ಪಾರ್ಕ್ ಮಾಡಬೇಕಾಗುತ್ತದೆ.
ಸೇಡಂ ಮತ್ತು ಶಹಾಬಾದ್ ಕಡೆಯಿಂದ ಬರುವ ವಾಹನಗಳನ್ನು ವಿಶ್ವವಿದ್ಯಾಲಯಮುಖಾಂತರ ಕುಸನೂರ್ ರಸ್ತೆಗೆ ಬಂದು ನ್ಯೂ ಆರ್‍ಟಿಒ ಕ್ರಾಸ್ ಮೂಲಕ ಶಹಾಬಾದ್‍ರಿಂಗ್‍ರೋಡ್, ರಾಮಮಂದಿರ ವೃತ್ತ, ಆರ್.ಪಿ.ಸರ್ಕಲ್ ಮುಖಾಂತರ ಬಂದು ಕೊಠಾರಿ ಭವನಆವರಣ, ಸರಕಾರಿ ಐಟಿಐ ಕಾಲೇಜು ಆವರಣ, ಇಂಡಸ್ಟ್ರಿಯಲ್ ಏರಿಯಾದಲ್ಲಿ ಪಾರ್ಕ್‍ಮಾಡಬೇಕಾಗುತ್ತದೆ.ಹುಮನಾಬಾದ್ ಕಡೆಯಿಂದ ಬರುವ ವಾಹನ ಸವಾರರು ಅಮಿತ್ ಪಾಟೀಲ್ ಶಾಲೆ ಮುಂದಿನ
ಬಯಲು ಸ್ಥಳ, ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯಾ, ಟೆಂಗಳಿ ಲೇಔಟ್, ರೇವಣಸಿದ್ದೇಶ್ವರಕಾಲೊನಿ ಹತ್ತಿರ ಇರುವ ಡಿಸಿ ಸೆಂಟ್ರಲ್ ಅಬಕಾರಿ ಕಚೇರಿ ಮುಂದೆ ಪಾರ್ಕ್‍ಮಾಡಬೇಕಾಗುತ್ತದೆ.
ಸುಲ್ತಾನ್‍ಪುರ ಕಡೆಯಿಂದ ಬರುವ ವಾಹನ ಸವಾರರು ಎಪಿಎಂಸಿ ತರಕಾರಿ ಮಾರ್ಕೆಟ್, ಲಾರಿತಂಗುದಾಣ ಆವರಣದಲ್ಲಿ ಪಾರ್ಕ್ ಮಾಡಬೇಕೆಂದು ಪೊಲೀಸ್ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.