ರೋಡ್ ಬ್ರೇಕರ್ ಅಳವಡಿಕೆ ಆಗ್ರಹ

ರಾಯಚೂರು.ಜ.೩೧- ನಗರದ ಗೋಶಾಲೆ ರಸ್ತೆಗೆ ಹೋಗುವ ದಾರಿಯಲ್ಲಿ ಹೊಸ ರಾಜ್‌ಮಲ್ ಹೋಟೆಲ್ ಎದುರುಗಡೆ ರೋಡ್ ಬ್ರೇಕರ್ ಅಳವಡಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಗರದ ಗೋಶಾಲ್ ರಸ್ತೆ ಮಾರ್ಗವಾಗಿ ಹೊಗುವು ಹೊಸ ರಾಜ್ ಕಮಲ್ ಹೋಟಲ್ ಎದುರುಗಡೆ ಸಿಯಾತಲಾಬ್ ಕ್ರಾಸ್‌ನಲ್ಲಿ ಬ್ರೇಕ್ ಸ್ಟಾಪರ್ ಹಾಕಬೇಕು. ಈ ಹಿಂದೆ ಅನೇಕ ದ್ವಿಚಕ್ರ ವಾಹನ ಹಾಗೂ ಶಾಲಾ ವಿದ್ಯಾರ್ಥಿಗಳು ಹೋಗುವ ಆಟೋಗಳ ಅಪಘಾತ ಸಂಭವಿಸಿ ಪ್ರಾಣಪಾಯದಿಂದ ಪಾರಗಿದ್ದು ಮತ್ತು ಮೃ ತಪಟ್ಟಿದ್ದು ಕಂಡುಬಂದಿರುತ್ತದೆ. ಆದರೂ ಇದುವರೆಗೂ ಯಾವ ಅಧಿಕಾರಿಗಳು ಗಮನಹರಿಸದೆ ನಿರ್ಲಕ್ಷ್ಯ ಭಾವನೆ ತೋರುತ್ತಿದ್ದಾರೆ.
ನಮ್ಮ ಮನವಿ ಅಲಿಸಿ ಕೂಡಲೇ ರೋಡ್ ಬ್ರೇಕರ್ ಹಾಕಬೇಕು. ಒಂದು ವೇಳೆ ನಿರ್ಲಕ್ಷ ತೊರಿದ್ದಲ್ಲಿ ಸಾರ್ವಜನಿಕರಿಗೆ ಅಪಘಾತವುಂಟಾಗಿ ಮರಣ ಹೊಂದಿದರೆ ಅದಕ್ಕೆ ನೇರ ಹೊಣೆಗಾರರು ನೀವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಜು, ಎಸ್.ವೆಂಕಟೇಶ, ನರಸಿಂಹಲು, ರಾಜು ಬೊಮ್ಮನಹಳ ಸೇರಿದಂತೆ ಉಪಸ್ಥಿತರಿದ್ದರು.