ರೋಡ್ ಡಿವೈಡರ್ ಗೆ ಕಾರು ಡಿಕ್ಕಿ – ಪತಿ ಸಾವು, ಪತ್ನಿಗೆ ಗಾಯ.

ಕೂಡ್ಲಿಗಿ. ಡಿ. 7 :- ಚಳ್ಳಕರೆ ಕಡೆಯಿಂದ ಕಂಪ್ಲಿ ಕಡೆಗೆ ಕಾರಿನಲ್ಲಿ ಹೋಗುತಿದ್ದ ಪತಿ ಪತ್ನಿ ಇರುವ ಕಾರೊಂದು ರಸ್ತೆವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲನೆ ಮಾಡುತಿದ್ದ ಪತಿ ಸ್ಥಳದಲ್ಲೇ ಮೃತಪಟ್ಟರೆ ಪತ್ನಿ ತೀವ್ರ ಗಾಯಗೊಂಡ ಘಟನೆ ತಾಲೂಕಿನ ಕ್ಯಾಸನಕೆರೆ ಸಮೀಪದ ಹೈವೇ 50ರ ರಸ್ತೆಯಲ್ಲಿ ಇಂದು ಸಂಜೆ ಜರುಗಿದೆ. ಕಂಪ್ಲಿ ಮಂಜುನಾಥ (66) ಕಾರು ಡಿಕ್ಕಿಯಿಂದ ಸ್ಥಳದಲ್ಲೇ ಮೃತಪಟ್ಟವರಾಗಿದ್ದು ಪತ್ನಿ ನಾಗರತ್ನ (53) ತೀವ್ರಗಾಯಗೊಂಡು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಗೆ ಕಳುಹಿಸಲಾಗಿದೆ ಎಂದು ತಿಳಿದಿದೆ. ಘಟನೆ ವಿವರ : ಚಳ್ಳಕೆರೆ ತಾಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮದಲ್ಲಿದ್ದ ಪೂಜೆ ಮುಗಿಸಿಕೊಂಡು ಕಂಪ್ಲಿಗೆ ಹೋಗಲು ಕಾರೊಂದರಲ್ಲಿ ಪತ್ನಿಯನ್ನು ಕರೆದುಕೊಂಡು ಚಾಲನೆ ಮಾಡಿಕೊಂಡು ಮಂಜುನಾಥ ಹೋಗುತ್ತಿರುವಾಗ್ಗೆ ಕೂಡ್ಲಿಗಿ ತಾಲೂಕಿನ ಕ್ಯಾಸನಕೆರೆ ಸಮೀಪದ ಬ್ರಿಡ್ಜ್ ಬಳಿ ನಿರ್ಮಿಸುವ ಹೈವೇ 50ರ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಕಾರಿನಲ್ಲಿ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದು ಅದರಲ್ಲಿದ್ದ ಮಂಜುನಾಥ ಪತ್ನಿ ನಾಗರತ್ನಗೆ ತಲೆ ಕೈ ಕಾಲುಗಳಿಗೆ ತೀವ್ರಗಾಯವಾಗಿದ್ದರಿಂದ ತಕ್ಷಣ ಪೊಲೀಸ್ ಹೈವೇ ಪೆಟ್ರೋಲಿಂಗ್ ವಾಹನದಲ್ಲಿ ತಕ್ಷಣ ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಗೆ ಕಳುಹಿಸಲಾಯಿತು ಸ್ಥಳದಲ್ಲೇ ಮೃತಪಟ್ಟ ಕಾರಿನಲ್ಲೇ ಸಿಲುಕಿದ ಮಂಜುನಾಥನ ಮೃತದೇಹ ಹೊರತೆಗೆಯುವಲ್ಲಿ ಹೈವೇ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕ್ಯಾಸನಕೆರೆ ಗ್ರಾಮದ ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಮೃತ ಮಂಜುನಾಥ ಅವರ ಮಗ ಧಾರವಾಡದ ಜೆಎಂಎಫ್ ಸಿ ಯ ನ್ಯಾಯಾಧೀಶರೆಂದು ತಿಳಿದಿದ್ದು ಇನ್ನೊಬ್ಬ ಮಗ ಜಿಂದಾಲ್ ಉದ್ಯೋಗಿಯಾಗಿದ್ದರೆಂದು ತಿಳಿದಿದೆ ಹಾಗೂ ಕೂಡ್ಲಿಗಿ ತಾಲೂಕಿನ ಜರ್ಮಲಿ ಸಾಹುಕಾರರ ಸಂಬಂದಿಕರು ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಕೂಡ್ಲಿಗಿ ಡಿವೈಎಸ್ ಪಿ ಹರೀಶರೆಡ್ಡಿ, ಕೂಡ್ಲಿಗಿ ಸಿಪಿಐ ವಸಂತ ವಿ ಅಸೋದೆ ಹಾಗೂ ಪಿಎಸ್ಐ ತಿಮ್ಮಣ್ಣ ಚಾಮನೂರ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆಂದು ತಿಳಿದಿದೆ.