`ರೋಡ್ ಕಿಂಗ್’ ಬಿಡುಗಡೆಗೆ ಸಜ್ಜು

ಮತೀನ್ ಹುಸೇನ್ ಅಭಿನಯದ `ರೋಡ್ ಕಿಂಗ್’ ಬಿಡುಗಡೆಗೆ ಸಜ್ಜಾಗಿದೆ.` ನಾಯಕ ಮತ್ತು ನಿರ್ಮಾಪಕರೂ ಆಗಿದ್ದಾರೆ. ಬೆಂಗಳೂರಿನವರಾದರೂ ಬೆಳೆದಿದ್ದೆಲ್ಲಾ ಅಮೇರಿಕಾದಲ್ಲಿ.

ಕೋಲಾರದಲ್ಲಿ ನಡೆದ ನೈಜ ಘಟನೆ ಆಧರಿಸಿ ಮಾಡಿದ ಚಿತ್ರ ಇದು. ರಾಂಡಿ ಕೆಂಟ್ ನಿರ್ದೇಶನ ಮಾಡಿದ್ದಾರೆ. ಮತೀನ್ ಮತ್ತು ರಾಂಡಿ ಹಳೆಯ ಸ್ನೇಹಿತರು. ಕನ್ನಡ ಭಾಷೆ ಗೊತ್ತಿಲ್ಲದಿರುವುದು. ಒಪ್ಪಿ ನಿರ್ದೇಶನ ಮಾಡಿದ್ದಾರೆ.

ಚಿತ್ರದ ನಿರ್ದೇಶನವನ್ನು  ಅಮೇರಿಕಾದಲ್ಲಿದ್ದುಕೊಂಡು ಸ್ಕೈಪ್ ಮೂಲಕವೇ ಮಾಡಿದ್ದಾರೆ. ರಾಂಡಿಗೆ ವೀಸಾ ಸಿಗದೆ ಹಿನ್ನೆಲೆಯಲ್ಲಿ ಈರೀತಿ ನಿರ್ದೇಶನ ಮಾಡಿದ್ಧಾರೆ ಎಂದು ಮತೀನ್ ಹೇಳಿದ್ಧಾರೆ.

ನಾಯಕಿಯಾಗಿ `ರನ್ ಆಂಟೋನಿ’ ಖ್ಯಾತಿಯ ರುಕ್ಸರ್ ನಟಿಸಿದ್ದು, ಲೀಲಾ ಮೋಹನ್, ಹರೀಶ್ ಸೆಜೆಕೆನ್, ನಯನಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ.ಆರಿಫ್ ಲಲಾನಿ ಛಾಯಾಗ್ರಹಣವಿದೆ, `ರೋಡ್ ಕಿಂಗ್’ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತವಿದೆ.