ಮತೀನ್ ಹುಸೇನ್ ನಾಯಕರಾಗಿ ನಟಿಸಿರುವ `ರೋಡ್ ಕಿಂಗ್’ ಚಿತ್ರದ ಮೂರು ಹಾಡುಗಳು ಬಿಡುಗಡೆಯಾಗಿ ಸದ್ದು ಮಾಡಿವೆ. ಪ್ರಭು ಎಸ್ ಆರ್ ಸಂಗೀತ ನೀಡಿರುವ ಚಿತ್ರದ ಹಾಡುಗಳನ್ನು ಚಂದನ್ ಶೆಟ್ಟಿ ಮಾಧುರಿ ಹಾಗೂ ವಿಶಾಲ್ ಹಾಡಿದ್ದಾರೆ. ಡಾ.ವಿ.ನಾಗೇಂದ್ರ ಪ್ರಸಾದ್, ಮತೀನ್ ಹುಸೇನ್ ಹಾಗೂ ಸಾಯಿ ನವೀನ್ ಹಾಡುಗಳನ್ನು ಬರೆದಿದ್ದಾರೆ.
ಟ್ರೇಲರ್ ಗೂ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಜೂನ್ 23 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ದಿಲೀಪ್ ಕುಮಾರ್ ನಿರ್ಮಾಣದ ಚಿತ್ರಕ್ಕೆ ರಾಂಡಿ ಕೆಂಟ್ ನಿರ್ದೇಶನ ಮಾಡಿದ್ದಾರೆ. ಅಮೇರಿಕಾದಲ್ಲಿರುವ ರಾಂಡಿ ಅಲ್ಲಿಂದಲೇ ಸ್ಕೈಪ್ ಮೂಲಕ ನಿರ್ದೇಶನ ಮಾಡಿರುವುದು ವಿಶೇಷ.
ನಾಯಕಿಯಾಗಿ `ರನ್ ಆಂಟೋನಿ’ ಖ್ಯಾತಿಯ ರುಕ್ಸರ್ ನಟಿಸಿದ್ದಾರೆ. ಲೀಲಾ ಮೋಹನ್, ಹರೀಶ್ ಕುಮಾರ್, ಸುಮಾ ರಾವ್, ನಯನಾ ಶೆಟ್ಟಿ, ಭುವನ್ ರಾಜ್, ರಿಜ್ವಾನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಆರಿಫ್ ಲಲಾನಿ ಛಾಯಾಗ್ರಹಣ ಹಾಗೂ ಶ್ರೀ ಕ್ರೇಜಿ ಮೈಂಡ್ಸ್ ಸಂಕಲನವಿದೆ.