ರೋಡಗಿ ಪ್ರೌಢ ಶಾಲೆಯಲ್ಲಿ ವಿವೇಕಾನಂದ ಜಯಂತಿ

ಇಂಡಿ : ಜ.14:ತಾಲೂಕಿನ ರೋಡಗಿ ಗ್ರಾಮದ ಶಿವಯೋಗೆಪ್ಪ . ಎಸ್ .ಅಲಗೊಂಡ ಸರಕಾರಿ ಪ್ರೌಢಶಾಲೆಯಲ್ಲಿ ಭಾರತದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ರವರ 161 ನೇ ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು 8 ನೇ ತರಗತಿ ವಿದ್ಯಾರ್ಥಿನಿಯರಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು.ಭೂಧಾನಿ ಪ್ರಶಾಂತ ಎಸ್ . ಅಲಗೊಂಡ ಇವರು ಸ್ವಾಮಿ ವಿವೇಕಾನಂದರ ಭಾವಚಿತ್ರದ ಪೂಜೆ ನೆರವೇರಿಸಿದರು. ಶಿಕ್ಷಣ ಪ್ರೇಮಿಗಳಾದ ಶ್ರೀ ಶಂಕರಗೌಡ .ಜ. ಬಂಡಿ ಇವರು ಸ್ವಾಮಿ ವಿವೇಕಾನಂದರ ಕುರಿತು ಉಪನ್ಯಾಸ ಮಾಡಿದರು. ನಮ್ಮ ಶಾಲೆಯ ಎಸ ಡಿ ಎಂ ಸಿ ಅಧ್ಯಕ್ಷರಾಗಿ ಶ್ರೀ ಶಿವಲಿಂಗಪ್ಪ. ಕ. ಶಾಬಾದಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಮ್ಮ ಶಾಲೆಯ ಮುಖ್ಯ ಗುರುಗಳಾದ ಶ್ರೀ ಎಂ. ಐ. ಮಕಾಂದರ್ ಇವರು ಅಧ್ಯಕ್ಷೀಯ ಭಾಷಣ ಮಾಡಿದರು. ಶಿಕ್ಷಕ ಎಸ್.ಜಿ.ಬಾಣಿಕೋಲ ಇವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಅತಿಥಿ ಶಿಕ್ಷಕರಾದ ಎನ್.ಎಸ್.ಕಂಬಾರ ಹಾಗೂ ಶಾಲಾ ಸಿಬ್ಬಂದಿಯವರಾದ ಪ್ರೇಮಾ . ಪಂ ಮಾಳಗೆ , ಅಂಬಿಕಾ . ಅ. ಕೊಟೇನ್ನವರ ಉಪಸ್ಥಿತರಿದ್ದರು.
ಹಿರಿಯ ಸುನಿಲ ವ್ಹಿ ಅಂಬಲಿ ಸ್ವಾಗತಿಸಿದರು.ಸಹ ಶಿಕ್ಷಕ ಪ್ರಭು . ಎಸ್. ವಾಲಿ ನಿರೂಪಿಸಿದರು.