ರೋಟರಿ ಸೇವೆ ಸ್ಮರಣೀಯ : ಪ್ರಥ್ವೀಕ ಶಂಕರ

ಭಾಲ್ಕಿ:ಜು.19: ರೋಟರಿ ಕ್ಲಬ್ ನವರ ಸಾಮಾಜಿಕ ಸೇವೆ ಸ್ಮರಣೀಯವಾಗಿದೆ ಎಂದು ಎ.ಎಸ್.ಪಿ ಪ್ರಥ್ವೀಕ ಶಂಕರ ಅಭಿಪ್ರಾಯಪಟ್ಟರು.

ಪಟ್ಟಣದ ಪುರಭವನದಲ್ಲಿ ನಡೆದ ರೋಟರಿ ಕ್ಲಬ್ ಆಫ್ ಭಾಲ್ಕಿ ಮಾಂಜರಾ ಸಂಘದ ಅಧಿಕಾರ ಪ್ರಸ್ತುತಿ ಸಮಾರಂಭ (ಚಾರಟರ್ ಪ್ರಜೆಂಟೇಶನ್ ಸೆರೆಮನಿ) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವದಲ್ಲಿಯೇ ಸಂಘಟನಾತ್ಮಕ ವ್ಯವಹಾರಗಳನ್ನೊಂಡ ರೋಟರಿ ಕ್ಲಬ್ ನವರು ಸಾಮಾಜಿಕ ಕಾರ್ಯಗಳನ್ನು ಸುಸಜ್ಜಿತವಾಗಿ ನಿರ್ವಹಿಸುತ್ತಾರೆ. ತಾಲೂಕಿನಲ್ಲಿ ಶಾಲಾ ವಿದ್ಯಾರ್ಥಿಗಳ ಪ್ರೇರಣಾ ಕಾರ್ಯ ಸೇರಿದಂತೆ ಆಸನ ವ್ಯವಸ್ಥೆ, ಮೂಲ ಸೌಕರ್ಯಗಳ ವ್ಯವಸ್ಥೆ ಸಮಾಜಕ್ಕೆ ನೀಡುತ್ತಿರುವುದು ಪ್ರಶಂಶನೀಯ ಕಾರ್ಯವಾಗಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಜಿಲ್ಲಾ ಕನ್ವೆನರ್ ರೋಟರಿಯನ್ ಮಾಣಿಕ ಪವಾರ, ರೋಟರಿ ಕ್ಲಬ್ ಸಂಸ್ಥಾಪನೆಯಲ್ಲಿ ಹಲವಾರು ಮಜಲುಗಳಿವೆ. ಈ ಎಲ್ಲಾ ಮಜಲುಗಳು ರೋಟರಿಯನ್ ಸದಸ್ಯರು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಸಾಮಾಜಿಕ ಸೇವೆಯೇ ನಮ್ಮ ಮೂಲ ಗುರಿಯಾಗಿರಬೇಕು ಎಂದು ಹೇಳಿದರು.

ಮಾಜಿ ಜಿಲ್ಲಾ ಕನ್ವೆನರ್ ವೊಮಿನ್ನಾ ಸತೀಶ ಬಾಬು, ಕಲ್ಯಾಣ ಝೋನ್ ಸಹಾಯಕ ಕನ್ವೆನರ್ ಡಾ| ವಸಂತ ಪವಾರ, ರೋಟರಿ ಕ್ಲಬ್‍ನ ಧೇಯೋದ್ದೇಶಗಳ ಬಗ್ಗೆ ಮಾತನಾಡಿದರು.

ಇದೇವೇಳೆ ರೋಟರಿ ಕ್ಲಬ್ ಆಫ್ ಭಾಲ್ಕಿ ಮಾಂಜರಾದ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಎಮ್ಮೆ ಮತ್ತು ಕಾರ್ಯಾದರ್ಶಿಯಾಗಿ ಜಗದೀಶ ಖಂಡ್ರೆಯವರಿಗೆ ನೇಮಿಸಿ ಘೋಷಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಅಕ್ಷಯ ಮುದ್ದಾ, ಚಂದ್ರಕಾಂತ.ಎನ್.ಸಿ, ರಾಜಕುಮಾರ ಹೊಸದೊಡ್ಡೆ, ಡಾ| ಪ್ರಭುಲಿಂಗ ಸ್ವಾಮಿ, ವಿಜಯಕುಮಾರ ಹುಣಸನಾಳೆ, ಯಶವಂತ ಭೊಸಲೆ, ಶ್ರೀನಾಥ ಹೆಡಾ, ಪ್ರಭುಲಿಂಗ ತುಗಾವೆ, ನ್ಯಾಯವಾದಿ ಶಿವಕುಮಾರ ಕೆರೂರ, ಡಾ| ಗಿರಿಧರ ತಿವಾರಿ, ಡಾ| ಸಂಗಶೆಟ್ಟಿ ಕಲ್ಯಾಣೆ, ಪ್ರೊ| ಜೈಕಾಂತ ಗಂಗೋಜಿ, ಡಾ| ಮಲ್ಲಿಕಾರ್ಜುನ ಎಮ್ಮೆ, ಡಾ| ಸ್ನೇಹಾ ಎಮ್ಮೆ, ರಾಜಕುಮಾರ ಮಾಶೆಟ್ಟೆ, ಜ್ಯೋತಿ ಎಮ್ಮೆ, ನಿರ್ಮಲಾ ತಿವಾರಿ, ನಿರಮಲಾ ಮಹಾಗಾವ, ನಿರ್ಮಲಾ ಹೆಡೆ, ಸವಿತಾ ದಿಗಂಬರ ಪಾಟೀಲ, ಚಿನ್ನಾ ಪಾರೆಡ್ಡಿ ಭುಜುತಿ, ಶಿವಶಂಕರ ಕಾಮಶೆಟ್ಟಿ, ರವೀಂದ್ರ ಮೂಲಗೆ, ಶಿವಕುಮಾರ ಎಲಾಲ, ಹಾವಶೆಟ್ಟಿ ಪಾಟೀಲ, ಮಾಣಿಕ ಪವಾರ, ಶ್ರೀರಾಮ ಮೂರ್ತಿ, ಮುನಿಗಿರಿಶ ಕೊನಿಡಾಲಾ, ವಿಜಯಲಕ್ಷ್ಮಿ ಗಂಗೋಜಿ ಉಪಸ್ಥಿತರಿದ್ದರು.

ಚಂದ್ರಶೇಖರ ಎಮ್ಮೆ ಸ್ವಾಗತಿಸಿದರು. ಡಾ| ಸ್ನೇಹಾ ಎಮ್ಮೆ ನಿರೂಪಿಸಿದರು. ಜಗದೀಶ ಖಂಡ್ರೆ ವಂದಿಸಿದರು.