ರೋಟರಿ ಸೇವೆಯಲ್ಲಿ ಸಾರ್ಥಕತೆ ಕಾಣಲು ಸಲಹೆ

ಮಧುಗಿರಿ, ಜು. ೧೪- ರೋಟರಿ ಸದಸ್ಯರುಗಳು ದುಡಿಮೆಯ ಶೇ. ೧೦ ರಷ್ಟು ಹಣವನ್ನು ಸಮಾಜ ಸೇವೆಗೆ ಬಳಸಬೇಕು ಎಂದು ರೋಟರಿ ರಾಜ್ಯಪಾಲ ಕೆ.ಪಿ. ನಾಗೇಶ್ ಹೇಳಿದರು.
ಪಟ್ಟಣದ ಎಮ್‌ಎನ್‌ಕೆ ಸಮುದಾಯ ಭವನದಲ್ಲಿ ೨೦೨೨-೨೩ ನೇ ಸಾಲಿನ ರೋಟರಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೋಟರಿ ಸೇವೆಯಲ್ಲಿ ಸಾರ್ಥಕತೆ ಕಾಣಬೇಕು. ಮಧುಗಿರಿ ರೋಟರಿ ಪ್ರಾರಂಭವಾಗಿ ೫೫ ವರ್ಷಗಳಾಗಿದ್ದು, ೫೫ ಸದಸ್ಯರನ್ನು ಹೊಂದಿರಬೇಕಾಗಿತ್ತು. ಆದರೆ ಕೇವಲ ೨೮ರಿಂದ ೩೦ ಸದಸ್ಯರಿದ್ದಾರೆ. ಮುಂದಿನ ದಿನಗಳಲ್ಲಿ ಸದಸ್ಯತ್ವದ ಬಗ್ಗೆ ಕಾಳಜಿವಹಿಸಿ ಕನಿಷ್ಠ ೫೫ ಮಂದಿ ಸದಸ್ಯರನ್ನು ಹೊಂದಬೇಕಾಗಿದೆ. ಅದರಲ್ಲೂ ೧೦ರಿಂದ ೧೫ ಮಂದಿ ಮಹಿಳಾ ಸದಸ್ಯರನ್ನು ಹೊಂದಿರಬೇಕು ಎಂದರು.
ಮತ್ತೊಬ್ಬ ರಾಜ್ಯಪಾಲರಾದ ಮಹಾದೇವಪ್ರಸಾದ್ ಮಾತನಾಡಿ, ಮುಂದಿನ ದಿನಗಳಲ್ಲಿ ರೋಟರಿ ವತಿಯಿಂದ ಮೈದನಹಳ್ಳಿ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರೇವಣಸಿದ್ದಯ್ಯ ಮಾತನಾಡಿ, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಶಾಲೆಗಳ ದುರಸ್ತಿಗೆ ೯೦ ಕೋಟಿ ರೂ.ಗಳ ಅವಶ್ಯಕತೆಯಿದೆ ಸರ್ಕಾರದಿಂದ ಇಷ್ಟೊಂದು ಹಣ ಪಡೆದು ದುರಸ್ತಿ ಮಾಡುವುದು ಅಸಾಧ್ಯ. ಆದ್ದರಿಂದ ಶಾಲೆಗಳ ದುರಸ್ತಿಗೆ ರೋಟರಿ ಸಂಸ್ಥೆ ಸರ್ಕಾರದ ಜತೆ ಕೈಜೋಡಿಸಬೇಕು ಎಂದರು.
ನೂತನ ರೋಟರಿ ಅಧ್ಯಕ್ಷ ಎಂ.ಇ. ಕರಿಯಣ್ಣ ಮಾತನಾಡಿ, ಮಧುಗಿರಿ ರೋಟರಿ ವತಿಯಿಂದ ಮುಂದಿನ ದಿನಗಳಲ್ಲಿ ನೋಟ್‌ಬುಕ್ ವಿತರಣೆ, ವಿಕಲಚೇತನರಿಗೆ ಬೈಸಿಕಲ್ ವಿತರಣೆ, ಆರೋಗ್ಯ ತಪಾಸಣೆ ಉಚಿತ ಶಿಬಿರ, ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ ಮುಂತಾದ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.
ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ .ಜಿ.ಜೆ.ರಾಜಣ್ಣ ,ಪುರಸಭಾ ಮಾಜಿ ಅಧ್ಯಕ್ಷರಾದ ಎಂ.ಕೆ. ನಂಜುಂಡಯ್ಯ, ಡಿ.ಜಿ.ಶಂಕರನಾರಾಯಣ ಶೆಟ್ಟಿ ,ರೋಟರಿ ಪದಾಧಿಕಾರಿಗಳಾದ ಬಿಳಿಗೆರೆ ಶಿವಕುಮಾರ್, ಮಂಜುನಾಥ ಪಾಟೀಲ್ ,ಶ್ರೀನಿವಾಸಮೂರ್ತಿ,ಎಚ್. ಕೆ .ವಿ .ರೆಡ್ಡಿ, ತಾಲ್ಲೂಕು ರೋಟರಿ ನಿಕಟಪೂರ್ವ ಅಧ್ಯಕ್ಷ ಜಯರಾಮಯ್ಯ, ನೂತನ ಕಾರ್ಯದರ್ಶಿ ಸಿದ್ದಲಿಂಗಪ್ಪ, ತಾಲ್ಲೂಕು ರೋಟರಿ ಪದಾಧಿಕಾರಿಗಳಾದ ವೆಂಕಟರಾಮು, ವಾಸಿಮ್‌ಅಹಮದ್, ಪೂಲಾ ವೆಂಕಟೇಶ್, ಲತಾ ನಾರಾಯಣ್, ಕೆ.ಎಂ.ಮಧು, ಮಲ್ಲಿಕಾರ್ಜುನಯ್ಯ, ಶಿವಕುಮಾರ್, ಹನುಮಪ್ಪ, ಟಿ. ಸುನಂದಾ, ಪ್ರಕಾಶ್‌ಬಾಬು, ರೇಣುಕಾಪ್ರಸಾದ್, ನೂತನ ಸದಸ್ಯರುಗಳಾದ ಪುರಸಭೆ ಮಾಜಿ ಸದಸ್ಯ ಚಿಕ್ಕಣ್ಣ, ಪಿಡಿಒ ರಂಗನಾಥ್, ಉಪನ್ಯಾಸಕ ರಾಮಚಂದ್ರಪ್ಪ, .ಕೀರ್ತಿಶ್ರೀ ಮತ್ತಿತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಚಿರೆಕ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ, ಪಿಯುಸಿಯಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕಾರಿಸಲಾಯಿತು.