ರೋಟರಿ ಸಮೂಹ ಸಂಸ್ಥೆಗಳಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

ದಾವಣಗೆರೆ.ಜು.೨೮ : ರೋಟರಿ ಕ್ಲಬ್ ಆಫ್ ದಾವಣಗೆರೆ ದಕ್ಷಿಣ ಹಾಗೂ ರೋಟರಿ ಸಮೂಹ ಸಂಸ್ಥೆಗಳಿಂದ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು.ಈ ಸಂದರ್ಭದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಅಂತರಾಷ್ಟ್ರೀಯ ಕ್ರೀಡಾಪಟುಗಳಿಂದ ಸಮಾಜದ ಸ್ವಾಸ್ಥ್ಯ ಕಾಪಾಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು 20 ದಿನಗಳ ಅವಧಿಯಲ್ಲಿ 2500 ಕೀ.ಮೀ. ಸೈಕ್ಲಿಂಗ್ ಅಭಿಯಾನವನ್ನು ಹಮ್ಮಿಕೊಂಡಿರುವ ಬರಾಳು ಪ್ರಕಾಶ್ ಅವರು ಮಾತನಾಡಿ ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಿ ಎಂದು ಕರೆ ನೀಡಿದರು.ಮತ್ತೋರ್ವ ಕ್ರೀಡಾಪಟುಗಳಾದ  ಡಾ. ಬಿ.ಎಂ. ಶ್ರೀನಿವಾಸ್ ಸೈಕಲ್ ಬಳಸಿ, ಆರೋಗ್ಯ ವೃದ್ಧಿಸಿ ಹಾಗೂ ಪರಿಸರವನ್ನು ಮಾಲಿನ್ಯ ರಹಿತವಾಗಿಸಿ ಎಂದ ಅವರು ಸೈಕಲ್ ಬಳಸುವುದರಿಂದ ದೇಹಕ್ಕೆ ವ್ಯಾಯಾವಾದಂತಾಗುತ್ತದೆ ಎಂದು ತಿಳಿಸಿದ ಅವರು ಇದರಿಂದ ಆರೋಗ್ಯ ವೃದ್ಧಿಸುತ್ತದೆ ಎಂದರು.ಈ ಸಂದರ್ಭದಲ್ಲಿ ರೋಟರಿ ಸಂಸ್ಥೆ ಚನ್ನರಾಯಪಟ್ಟಣ ಮಿಷನ್ ವಲಯ ರೋಟರಿ ಜಿಲ್ಲೆ-3182, ಬರಾಳು ಪ್ರಕಾಶ್ ಹಾಗೂ ಡಾ.ಬಿ.ಎಂ. ಶ್ರೀನಿವಾಸ್ ಬಿರುಮಾನಹಳ್ಳಿ ಅಂತರಾಷ್ಟ್ರೀಯ ಕ್ರೀಡಾಪಟುಗಳು ಇವರಿಗೆ ಸನ್ಮಾನ ಹಾಗೂ ಸಂಸ್ಥೆಯ ಪ್ಲಾಗ್ ವಿನಿಮಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಅಸಿಸ್ಟೆಂಟ್ ಗವರ್ನರ್ ಮೃತ್ಯುಂಜಯ ಎಂ.ಬಿ., ಪಿ.ಹೆಚ್.ಎಫ್. ರೋಷನ್ ಕೆ.ಆರ್., ಸೋಮಶೇಖರ್, ಶೇಖರ್ ಬಿ. ಮಳ್ಳೂರು, ಜಯಸಿಂಹ, ರೋಟರಿ ಕ್ಲಬ್ ದಕ್ಷಿಣದ ಅಧ್ಯಕ್ಷರಾದ ಪಿ.ಹೆಚ್.ಎಫ್. ರಂಗಪ್ಪ ಸಿ.ಕೆ., ಕಾರ್ಯದರ್ಶಿ ಪುಟ್ಟೇಶಿ ಎಂ.ಆರ್.,  ಸಿ.ಕೆ. ಸಿದ್ದಪ್ಪ, ಎಸ್.ಎನ್. ಮಳವಳ್ಳಿ,  ಗಜಾನನ ಭೂತೆ, ಐ.ಪಿ.ಡಿ.ಆರ್.ಆರ್. ಎಂ.ಡಿ. ಗೌಸ್, ಚೇತನ್, ಹಾಗೂ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು.