ರೋಟರಿ ಸಮಾಜ ಸೇವೆ ಅನುಕರಣೀಯ

ಬೀದರ್: ಜು.18:ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ಸಮಾಜ ಸೇವಾ ಚಟುವಟಿಕೆಗಳು ಅನುಕರಣೀಯವಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಲ್ ಹೇಳಿದರು.

ನಗರದ ಚಿಕ್ಕಪೇಟೆ ರಸ್ತೆಯಲ್ಲಿ ಇರುವ ಇನ್‍ಸ್ಪೈರ್ ರೆಸಾರ್ಟ್‍ನಲ್ಲಿ ನಡೆದ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ವಿವಿಧ ವೃತ್ತಿಯಲ್ಲಿ ತೊಡಗಿಸಿಕೊಂಡವರು ರೋಟರಿ ಮೂಲಕ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ ಎಂದರು.

ಬೀದರ್ ಉಪ ವಿಭಾಗಾಧಿಕಾರಿ ಲವಿಶ್ ಓರ್ಡಿಯಾ ಮಾತನಾಡಿ, ರೋಟರಿ ಸಂಸ್ಥೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಥೆಯ ಚಟುವಟಿಕೆಗಳಿಗೆ ತಮ್ಮ ಸಹಕಾರ ಇರಲಿದೆ ಎಂದು ತಿಳಿಸಿದರು.

ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ನೂತನ ಅಧ್ಯಕ್ಷ ಡಾ. ಕಪಿಲ್ ಪಾಟೀಲ ಮಾತನಾಡಿ, ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯ ಕಾಯ್ದುಕೊಳ್ಳುವುದು ಕೂಡ ಬಹಳ ಅವಶ್ಯಕವಾಗಿದೆ. ಹೀಗಾಗಿ ಕ್ಲಬ್ ಈ ವರ್ಷ ಮಾನಸಿಕ ಆರೋಗ್ಯ, ಶಾಂತಿ ಹಾಗೂ ಪರಿಸರದ ಬಗೆಗೆ ಜನಜಾಗೃತಿ ಮೂಡಿಸಲಿದೆ ಎಂದು ತಿಳಿಸಿದರು.

ಆರೋಗ್ಯ ತಪಾಸಣೆ ಶಿಬಿರ, ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜನರಿಗೆ ಅನುಕೂಲ ಆಗುವ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ನಿಕಟಪೂರ್ವ ಗವರ್ನರ್ ಚಿನ್ನಪ್ಪ ರೆಡ್ಡಿ, ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ವಸಂತ ಪವಾರ್, ಜಿಲ್ಲಾ ಸಂಯೋಜಕ ಡಾ. ರಘು ಕೃಷ್ಣಮೂರ್ತಿ, ಪದಗ್ರಹಣ ಅಧಿಕಾರಿ ಡಾ. ನಿತೇಶಕುಮಾರ ಬಿರಾದಾರ, ಕ್ಲಬ್ ಮಾಜಿ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ, ಕ್ಲಬ್ ಉಪಾಧ್ಯಕ್ಷ ಡಾ. ರಿತೇಶ ಸುಲೆಗಾಂವ್ ಮೊದಲಾದವರು ಇದ್ದರು.

ಚೇತನ್ ಮೇಗೂರ ಹಾಗೂ ದತ್ತಾತ್ರಿ ಪಾಟೀಲ ನಿರೂಪಿಸಿದರು. ಕ್ಲಬ್ ನಿಕಟಪೂರ್ವ ಅಧ್ಯಕ್ಷ ನಿತಿನ್ ಕರ್ಪೂರ ಸ್ವಾಗತಿಸಿದರು. ಕ್ಲಬ್ ಕಾರ್ಯದರ್ಶಿ ಶಿವಕುಮಾರ ಪಾಖಾಲ್ ವಂದಿಸಿದರು.


ಕ್ಲಬ್ ನೂತನ ಪದಾಧಿಕಾರಿಗಳು

ಡಾ. ಕಪಿಲ್ ಪಾಟೀಲ (ಅಧ್ಯಕ್ಷ), ಡಾ. ರಿತೇಶ ಸುಲೆಗಾಂವ್ (ಉಪಾಧ್ಯಕ್ಷ), ಶಿವಕುಮಾರ ಪಾಖಾಲ್ (ಕಾರ್ಯದರ್ಶಿ), ಡಾ. ಲೋಕೇಶ ಹಿರೇಮಠ (ಜಂಟಿ ಕಾರ್ಯದರ್ಶಿ), ಜಯೇಶ್ ಪಟೇಲ್ (ಖಜಾಂಚಿ).