ರೋಟರಿ ಸದಸ್ಯರು ಸಂಬಳಕ್ಕಾಗಿ ಕೆಲಸ ಮಾಡುತ್ತಿಲ್ಲ. – ಆರ್. ಗೋಪಿನಾಥ


ಸಂಜೆವಾಣಿ ವಾರ್ತೆ
ಸಂಡೂರು :ಜು:18: ಸಂಡೂರಿನ ಬಹಳ ಕಂಪನಿಗಳು ಕಾರ್ಪೋರೇಟ್ ಕಂಪನಿಗಳಾಗಿದ್ದು, ಅಲ್ಲಿ ಪಗಾರಕ್ಕಾಗಿ ಕೆಲಸ ಮಾಡುತ್ತಾರೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬೆಳದಿರುವ ಸೇವಾ ಮನೋಭಾವನೆಯಿಂದ ಕರ್ತವ್ಯ ನಿರ್ವಹುಸುತ್ತಿದ್ದು, ರೋಟರಿ ಸದಸ್ಯರು ಪಗಾರಕ್ಕಾಗಿ ಕೆಲಸ ಮಾಡುತ್ತಿಲ್ಲ. ರೋಟರಿ ಸಂಸ್ಥೆಯಲ್ಲಿ ಸಿ.ಕೆ. ವಿಶ್ವನಾಥ, ಮಾರುತಿ ರಾವ್ ಎಂ. ಭೋಸ್ಲೆ ಸೇವಾ ಭಾವನೆಯಿಂದ ಅದ್ಬುತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದು ವರ್ಷದಲ್ಲಿ ಸಿ. ಗೌರೀಶ ಹಾಗೂ ಟಿ.ಜಿ. ಸುರೇಶ ಗೌಡರು ಉತ್ತಮ ಸೇವೆ ಸಲ್ಲಿಸಿದ್ದು, ಈಗಿನ ಅಧ್ಯಕ್ಷ ಎಂ. ಫಾರುಕ್ ಅಹ್ಮದ್ ಹಾಗೂ ಕಾರ್ಯದರ್ಶಿ ಅಂಕಮನಾಳ್ ಕೊಟ್ರೇಶಿಯವರು ಅವರ ಮರ್ಗದಶದಲ್ಲಿ ಉತ್ತಮ ಸೇವೆ ಸಲ್ಲಿಸಬೇಕಾಗಿದೆ ಎಂದು 31 -60 ಹಾರ್ಲಿ ಫಾಸ್ಟ್ ಜಿಲ್ಲಾ ಗವರ್‍ನರ್ ಪಿ.ಎಚ್.ಎಫ್. ಪಿ.ಡಿ.ಜಿ. ಗೋಪಿನಾಥ ಆರ್ ರವರು ತಿಳಿಸಿದರು.
ಅವರು ಪಟ್ಟಣದ ಕೆ.ಇ.ಬಿ. ವೃತ್ತದ ಬಳಿ ಇರುವ ವಾಲ್ಮಿಕಿ ಭವನದಲ್ಲಿ ರೋಟರಿ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಫಾರೂಕ್ ಅಹ್ಮದ್ ರವರಿಗೆ ಅಧ್ಯಕ್ಷ ಸ್ಥಾನ ಅಂಕಮನಾಳ್ ಕೊಟ್ರೇಶಿರವರಿಗೆ ಕಾರ್ಯದರ್ಶಿ ಸ್ಥಾನವನ್ನು ಸಿ. ಗಿರಿಶ್ ಟಿ.ಜಿ. ಸುರೇಶ್ ಗೌಡರಿಮದ ಹಸ್ತಾಂತರಿಸಿ ಮಾತನಾಡಿರು.
ಅಧಿಕಾರವಹಿಸಿಕೊಂಡ ಫಾರುಕ್ ಅಹ್ಮದ್ ಮಾತನಾಡಿ, ಜನಸೇವೆಯೇ ನನ್ನ ಗುರಿ ಖರ್ಚಿಗೆ ಅಂಟಿಕೊಳ್ಳುವ ಜಾಯಮಾನ ನಮ್ಮದಲ್ಲ ಸಂಸ್ಥೆಗೆ ದಾನಿಗಳಾಗಿ ಬೆಳೆಸಿದ ದಿ.ಕೆ.ಎಸ್. ವೀರಭದ್ರಪ್ಪನವರು, ದಿ. ಹನುಮಂತರಾವ್ ಭೋಸ್ಲೆ, ಮಾರುತಿ ರಾವ್ ಎಂ. ಭೋಸ್ಲೆಯವರ ಸಹಕಾರ ಮುಖ್ಯ. ನಮ್ಮ ಸಂಸ್ಥೆಗೆ ಉತ್ತಮ ಸಹಕಾರ ನೀಡುತ್ತಿರುವ ಸಂಡೂರಿನ ಶಾಸಕರಾದ ಈ. ತುಕರಾಂ ಅವರಿಗೆ ನಾನು ಅಭಿನಂದನೆ ಸಲ್ಲಿಸಬೆಕಾಗಿದೆ ಎಂದು ತಿಳಿಸಿದರು. ಪುರಸಭೆಯ ಅಧ್ಯಕ್ಷ ಅನಿತಾ ವಸಂತಕುಮಾರ್ ಮಾತನಾಡಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸೇವಾ ಮನೋಭಾವನೆ ಮುಖ್ಯ. ಎಂದು ತಿಳಿಸಿದರು. ರೋಟರಿ ಶಾಲೆಯ ಮಕ್ಕಳಾದ ಎಂ.ಜೆ. ವರ್ಶಿಣಿ ರಾಧಿಕಾ ಪ್ರಾರ್ಥನೆ ನೆರವೇರಿಸಿದರು. ಬಳೆಗಾರ ಶಿವಕುಮಾರ ನಿರೂಪಿಸಿದರು. ಸಿ. ಗೌರೀಶ ಸ್ವಾಗತಿಸಿದರು. ಟಿ.ಜಿ. ಸುರೇಶ ಗೌಡರು 2021ರ ವರದಿಯನ್ನ ನೀಡಿದರು. ರೋಟರಿ ಸದಸ್ಯ ಕೊಟ್ರಯ್ಯನವರು ಆರ್. ಗೋಪಿನಾಥರ ಪರಿಚಯಿಸಿದರೆ, ಬಸವರಜ ಮಸೂತಿಯವರು ಪುರಸಭೆಯ ಅಧ್ಯಕ್ಷರನ್ನ ಪರಿಚಿಯಿಸಿದರು. ಹೊಸದಾಗಿ ಸೇರ್ಪಡೆಯಾದ ಪ್ರೋ|| ಶರತ್ ಐಕಲ್ ಅರಣುಕುಮಾರ ಅವರ ಪರಿಚಯವನ್ನು ಕ್ರಮವಗಿ ಎಸ್.ಜೆ. ಗೋಪಾಕೃಷ್ಣ ಜೆ.ಎಂ. ಅನ್ನದಾನಸ್ವಾಮಿಯವರು ನಡೆಸಿಕೊಟ್ಟರು. ಅನಿವಾರ್ಯಕಾರಣಗಳಿಂದ ಸಂಡೂರಿನ ಶಾಸಕರು ಬೆಂಗಳೂರಿಗೆ ತೆರಳಿದ ಪ್ರಯುಕ್ತ ಅವರು ಕಳುಹಿಸಿದ ಸಂದೇಶವನ್ನು ಜೆ.ಎಂ. ಬಸವರಾಜರವರು ಸಭೆಯಲ್ಲಿ ಮಂಡಿಸಿದರು. ಅಂಕಮಾಳ್ ಕೊಟ್ರೇಶ್ ರವರು ವಂದಿಸಿದರು. ಸಮಾರಂಭದಲ್ಲಿ ಎಚ್. ಈರಣ್ಣ ಡಿ. ಕೃಷ್ಣಪ್ಪ ಬಂಡೇ ಮ್ಯಾಗಳ ಕುಮಾರಸ್ವಾಮಿ ಅಂಕಮಾಳ್ ಸಿದ್ದಪ್ಪ ಜಯಣ್ಣ ಮಾಬುನ್ನಿ ಬೇಗಂ ಅಂಕಮಾಳ್ ಶಾಂತಮ್ಮ ಅಲ್ಲದೇ ಹಲವಾರು ಸದಸ್ಯರು ಉಪಸ್ಥಿತರಿದ್ದರು. ಪುರಸಭೆಯ ಮುಖ್ಯಾಧಿಕಾರಿ ಖಾಜಾ ಮೈನುದ್ದಿನ್ ಅವರು ಉಪಸ್ಥಿತರಿದ್ದರು.

Attachments area