ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ

ಬ್ಯಾಡಗಿ,ಜು.21: ರೋಟರಿ ಸಂಸ್ಥೆಯು ನೊಂದವರು,ನಿರ್ಗತಿಕರು, ಬಡವರು ಹಾಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹಾಯ ಮಾಡುವ ಸಂಸ್ಥೆಯಾಗಿದೆ. ವಿಶ್ವದೆಲ್ಲೆಡೆ ತನ್ನ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಗಳಿಸಿದೆ ಎಂದು ರಾಣೆಬೆನ್ನೂರಿನ ಪಿಐಜ ರೋ.ಡಾ.ಬಸವರಾಜ ಕೆಲಗಾರ ಹೇಳಿದರು.
ಪಟ್ಟಣದ ಬಿಇಎಸ್’ಎಂ ಡಿಗ್ರಿ ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ನಡೆದ ರೋಟರಿ ಸಂಸ್ಥೆಯ 14ನೇ ವರ್ಷದ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿಯೂ ಸರ್ಕಾರದ ಜೊತೆಗೂಡಿ ಸಾಮಾಜಿಕ ಸೇವೆಯನ್ನು ನೀಡುತ್ತಿದ್ದು, ಬ್ಯಾಡಗಿ ತಾಲೂಕಿನಲ್ಲೂ ಸಹ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆ ಹಮ್ಮಿಕೊಂಡು ಸೇವೆ ಸಲ್ಲಿಸುತ್ತಿದೆ ಎಂದರು.
ಕೊಲ್ಲಾಪುರದ ಡಿಜಿಐ ರೋ.ನಾಸೀರ್ ಬೋರ್ಸಡ್’ವಾಲಾ ಮಾತನಾಡಿ, ಪ್ರತಿವರ್ಷ ಆರೋಗ್ಯ ಇಲಾಖೆ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ರೋಟರಿ ಸಂಸ್ಥೆಯು ಕೈಜೋಡಿಸುತ್ತಿದೆ. ಕೋವಿಡ್ ಲಸಿಕಾ ಅಭಿಯಾನ, ಶಾಲಾ ಮಕ್ಕಳಿಗೆ ಉಚಿತವಾಗಿ ಮಾಸ್ಕ್ ವಿತರಣೆ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಘಟಕಗಳು, ಗಿಡ ನೆಡುವ ಕಾರ್ಯಕ್ರಮ, ಸ್ವಚ್ಚತಾ ಅಭಿಯಾನ ಸೇರಿದಂತೆ ಸೇವೆಗಳನ್ನು ಒದಗಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಲಿ ಎಂದು ಹಾರೈಸಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ನೂತನ ಅಧ್ಯಕ್ಷ ಮಂಜುನಾಥ ಉಪ್ಪಾರ ಮಾತನಾಡಿ, ರೋಟರಿ ಸಂಸ್ಥೆಯು ವಿಶ್ವಾದಾಧ್ಯಂತ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಕಟ್ಟಕಡೆಯ ವ್ಯಕ್ತಿಗೂ ಅನುಕೂಲ ಕಲ್ಪಿಸುತ್ತಿದೆ. ಸಂಸ್ಥೆಯು ನನ್ನ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮೆಚ್ಚಿ ನನಗೆ ಮಹತ್ವದ ಜವಾಬ್ದಾರಿಯನ್ನು ನೀಡಿದ್ದು, ಸಂಸ್ಥೆಗೆ ಯಾವುದೇ ರೀತಿಯ ಚ್ಯುತಿ ಬರದಂತೆ ಕೆಲಸ ಮಾಡುವುದಾಗಿ ತಿಳಿಸಿದರಲ್ಲದೇ ನನ್ನ ಅವಧಿಯಲ್ಲಿ ಸಂಸ್ಥೆ ವತಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಾಲೂಕಿನ ಜನರ ಸೇವೆಗೆ ಪ್ರಾಮಾಣಿಕವಾಗಿ ಕಾರ್ಯ ವಹಿಸುತ್ತೇನೆ ಎಂದು ಭರವಸೆ ನೀಡಿದರು.
ರೋಟರಿ ಸಂಸ್ಥೆಯ 2022-23ನೇ ಸಾಲಿನ ನೂತನ ಅಧ್ಯಕ್ಷರಾಗಿ ಮಂಜುನಾಥ ಉಪ್ಪಾರ, ಉಪಾಧ್ಯಕ್ಷರಾಗಿ ಪವಾಡೆಪ್ಪ ಆಚನೂರ, ಕಾರ್ಯದರ್ಶಿಯಾಗಿ ಮಹಾಂತೇಶ ಸುಂಕದ, ಜಂಟಿ ಕಾರ್ಯದರ್ಶಿಯಾಗಿ ರಮೇಶ ಬನ್ನಿಗಿಡದ ಹಾಗೂ ಖಚಾಂಚಿಯಾಗಿ ಮಾಲತೇಶ ಉಪ್ಪಾರ ಅಧಿಕಾರವನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಾಗೂ ಸೇವೆ ಸಲ್ಲಿಸಿದವರನ್ನು ಗೌರವಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಚಿತ್ರಕಲಾವಿದ ಶಿಕ್ಷಕ ಸುಭಾಸ ಕುರುಕುಂದಿ ಅವರಿಂದ ಪಂಚ ಕುಂಚಕಲೆ ವಿಶೇಷ ಚಿತ್ರಕಲಾ ಪ್ರದರ್ಶನ ನಡೆಯಿತು.

ವೇದಿಕೆಯಲ್ಲಿ ಹಾವೇರಿಯ ಎಜಿ ರೋ.ಎಸ್.ಎ.ವಜ್ರಕುಮಾರ, ಹುಬ್ಬಳ್ಳಿಯ ಡಿಸ್ಟಿಕ್ ಸೆಕ್ರೆಟರಿ ರೋ.ವಾಸುಕಿ ಸಂಜಿ, ನಿಕಟಪೂರ್ವ ಅಧ್ಯಕ್ಷ ಬಸವರಾಜ ಸುಂಕಾಪುರ, ಎಚ್.ಬಿ.ಲಿಂಗಯ್ಯ, ಪರಶುರಾಮ ಮೇಲಗಿರಿ, ಮಹಾಂತೇಶ ಮೇಲ್ಮುರಿ, ಡಾ.ಎಸ್.ಎನ್.ನಿಡಗುಂದಿ, ಮಾಲತೇಶ ಅರಳಿಮಟ್ಟಿ, ಡಾ.ಎ.ಎಂ.ಸೌದಾಗರ, ಮಹೇಶ್ವರಿ ಪಸಾರದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.