ರೋಟರಿ ಶಾಲೆಯ ವಿದ್ಯಾರ್ಥಿಗಳ ಕ್ರೀಡಾಸಾಧನೆ

ವಿಜಯಪುರ, ಜು. ೨೪: ಪಟ್ಟಣದ ರೋಟರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ವಿಜಯಪುರ ಸರ್ಕಾರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆದ ಹೋಬಳಿಮಟ್ಟದ ಕ್ರೀಡಾಸ್ಪರ್ಧೆಗಳಲ್ಲಿ ಸಾಧನೆ ಮಾಡಿದ್ದಾರೆ.
ರೋಟರಿ ಪ್ರಾಥಮಿಕಶಾಲೆಯ ವಿದ್ಯಾರ್ಥಿಗಳು ಗಂಡುಮಕ್ಕಳ ಪ್ರಾಥಮಿಕ ವಿಭಾಗದಲ್ಲಿ ಶಟಲ್‌ಕಾಕ್-ಪ್ರಥಮ, ಹೆಣ್ಣುಮಕ್ಕಳ ವಿಭಾಗದಲ್ಲಿ ಶಟಲ್‌ಕಾಕ್- ದ್ವಿತೀಯ, ಪ್ರೌಢಶಾಲಾ ವಿಭಾಗದಲ್ಲಿ ರೋಟರಿ ಪ್ರೌಢಶಾಲೆಯ ಗಂಡುಮಕ್ಕಳ ಶಟಲ್‌ಕಾಕ್- ಪ್ರಥಮ, ಹೆಣ್ಣುಮಕ್ಕಳ ಶಟಲ್‌ಕಾಕ್-ಪ್ರಥಮ, ೪೦೦ ಮೀ ರಿಲೇ- ಪ್ರಥಮ, ೨೦೦ಮೀ ಓಟ-ಪ್ರಥಮ, ಗಂಡುಮಕ್ಕಳ ಖೋಖೋ-ದ್ವಿತೀಯ, ಹೆಣ್ಣುಮಕ್ಕಳ ಖೋಖೋ-ದ್ವಿತೀಯ, ಪ್ರಾಥಮಿಕ ಶಾಲಾ ವಿಭಾಗದ ೨೦೦ಮೀ-ಪ್ರಥಮ ಸ್ಥಾನ ಪಡೆದಿದ್ದಾರೆ. ಶಟಲ್‌ಕಾಕ್, ರಿಲೇ, ೨೦೦ ಮೀ ಓಟದಲ್ಲಿ ವಿದ್ಯಾರ್ಥಿಗಳು ತಾಲ್ಲೂಕುಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕ್ರೀಡಾಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ರೋಟರಿ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಸಿ.ಬಸಪ್ಪ, ಕಾರ್ಯದರ್ಶಿ ಬಿ.ಸಿ.ಸಿದ್ಧರಾಜು, ಮುಖ್ಯಶಿಕ್ಷಕಿ ಎ.ಎಂ.ಮಂಜುಳಾ, ರೋಟರಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಅಭಿನಂದಿಸಿದ್ದಾರೆ.