ರೋಟರಿ ಶಕ್ತಿನಗರ ಪದಗ್ರಹಣ ಸಮಾರಂಭ

ರಾಯಚೂರು,ಜು.೧೭-
ಶಕ್ತಿನಗರದ ಬಸವ ಕಲ್ಯಾಣ ಮಂಟಪ ದಲ್ಲಿ ನಡೆದ ಶಕ್ತಿನಗರ ರೋಟರಿ ಕಬ್ಲ್ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಗೌರ್ನರ ಶ್ರೀ ಓಂಮಿನಿ ಸತೀಶಬಾಬು ” ಸಮಾಜ ಪ್ರತಿಯೊಬ್ಬ ವ್ಯಕ್ತಿಯು ಅರ್ಥಿಕ ಸಂಕಷ್ಟದಲ್ಲಿರುವರಿಗೆ ಸಹಾಯ ಮಾಡುವ ಮೂಲಕ ಮಾನವೀಯ ಮೌಲ್ಯಗಳು ಎತ್ತಿ ಹಿಡಿಯಬಹುದು ಇದೆ ಕೆಲಸ ರೋಟರಿ ಕಬ್ಲ್ ಸದಸ್ಯರು ಮಾಡುತ್ತಿದ್ದಾರೆ ಆಧುನಿಕ ತಂತ್ರಜ್ಞಾನ ಶಿಕ್ಷಣವನ್ನು ಸಮಾಜಿಕ ಕೆಳಮಟ್ಟದಲ್ಲಿರುವರಿಗೆ ನೀಡುವ ಕಾರ್ಯ ರೋಟರಿ ಮಾಡಲಿದೆ ಎಂದರು.
ರೋಟರಿ ನೂತನ ಅಸ್ವಿಟೆಂಟ್ ಗೌವರ್ನರ ಎನ್ ಶಿವಶಂಕರ ವಕೀಲರಿ ಮಾತನಾಡಿ ರೋಟರಿ ಸಂಸ್ಥೆಯ ಬೆಳೆದಿದ್ದು ಸಮಾಜಮುಖೀ ಕಾರ್ಯಕ್ಕಾಗಿ ರೋಟರಿಯ ಉದ್ದೇಶ ಸಮಾಜದಲ್ಲಿ ಎಲ್ಲರಿಗೂ ಶಿಕ್ಷಣ ಆರೋಗ್ಯ ಅರ್ಥಿಕತೆ ಸಿಗಲು ಕೆಲಸ ಮಾಡುತ್ತಿದೆ ಎಂದರು.
ನೂತನ ರೋಟರಿ ಅಧ್ಯಕ್ಷರಾದ ಮಂಜುನಾಥ ಸಂದು ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಪೋಲಿಯೋ ನಿರ್ಮಲನೆ ಮಾಡುವ ಕಾರ್ಯ ದಲ್ಲಿ ರೋಟರಿ ಕಬ್ಲ್ ಶ್ರಮಿಸಿದೆ ಮತ್ತು ನಿರ್ಗತಿಕರಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಇದರ ಕೀರ್ತಿ ರೋಟರಿ ಕಬ್ಲ್‌ಗೆ ಸೇರುತ್ತದೆ ರೋಟರಿ ಕಬ್ಲ್ ಶಕ್ತಿನಗರ ನಗರದಲ್ಲಿ ಅನೇಕ ಸಮಾಜಿಕ ಕಾರ್ಯ ಮಾಡುತ್ತಿದ್ದು ಮುಂದೆ ನನ್ನ ಅಧ್ಯಕ್ಷ ಅವಧಿಯಲ್ಲಿ ಇನ್ನೂ ಅನೇಕ ಸಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳತ್ತನೆ ಎಂದರು.
ವೇದಿಕೆಯ ಮೇಲೆ ಡಾ. ಶಂಕರಯಾವಡ್, ಜಿಲ್ಲಾ ಕಾರ್ಯದರ್ಶಿ ಯಶವಂತ ಗೌರವ
ರೋಟರಿ ಕಾರ್ಯದರ್ಶಿಯಾದ ಡಾ. ಮಲ್ಲಿಕಾರ್ಜುನ ನಿರ್ದೇಶಕರುಗಳಾದ ಸುನೀಲ, ಶಿವನಗೌಡ, ವಿನೋದ, ಆದೇಶ, ಸಂಜೀವಕುಮಾರ ಫಂಡಿಸ್ ಬಿಂದುದಾಸ್, ಡಾ. ಚಂದ್ರಕಲಾ, ಶರಣಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.