
ಸಂಜೆವಾಣಿ ವಾರ್ತೆ
ಸಂಡೂರು:ಸೆ: 7: ರೋಟರಿ ಸಂಸ್ಥೆ ಶಿಕ್ಷಕರ ದಿನಾಚರಣೆಯನ್ನ ಸರ್ವಪಲ್ಲಿ ರಾಧಾಕೃಷ್ಣನ್ ರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸಿ ಆಚರಿಸಲಾಯಿತು.ಜೊತೆಗೆ ರೋಟರಿ ಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು.
ರೋ. ಡಾ. ಶರತ್ ಕುಮಾರ್ ಮತ್ತು ರೋ. ಎಒ ಬಸವರಾಜ ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕರು ಹೇಗಿರಬೇಕು, ಹೇಗೆ ಇವತ್ತಿನ ದಿನಮಾನಗಳಿಗೆ ಬದಲಾವಣೆ ಮಾಡಿಕೊಂಡು ಪಾಠ ಮಾಡಬೇಕೆಂದು ತಿಳಿದರು.
ರೋ. ಏ. ನಾಗರಾಜ ಸ್ವಾಗತಿಸಿದರು, ರೋ. ಶಿವಮೂರ್ತಿ ವಂದನಾರ್ಪಣೆ ಮಾಡಿದರು, ರೋ. ಃ. ಶಿವಕುಮಾರ್ ನಿರೂಪಣೆ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ರೂಪ ಲಾಡ್, ರೋ. ಸಿ.ಕೆ. ವಿಶ್ವನಾಥ, ರೋ. ಒ. ಮಾರುತಿ ರಾವ್, ರೋ. ಡಾ. ಶರತ್ ಕುಮಾರ್, ರೋ. ಬಿ. ಸೋಮನಗೌಡ, ರೋ. ಏಒ ಕೊಟ್ರಯ್ಯ, ರೋ. ಸುರೇಶಗೌಡ, ರೋ. ಕೊಟ್ರೇಶ್. ಶಾಲಾ ಮುಖ್ಯಸ್ಥರಾದ ಸರಸ್ವತಿ ಜಾಧವ, ಪರಶುರಾಮ್ ಮತ್ತು ಇತರ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.