ರೋಟರಿ, ಫಿನೋಲೆಕ್ಸ್ ಕಂಪನಿಯಿಂದ ಬಡವರಿಗೆ ಆಹಾರ ಕಿಟ್ ವಿತರಣೆ

ಚಾಮರಾಜನಗರ, ನ. 11- ಚಾ.ನಗರ ರೋಟರಿ ಸಂಸ್ಥೆ, ಮೈಸೂರು ಜೆಪಿ.ನಗರ ರೋಟರಿ ಸಂಸ್ಥೆ ಮತ್ತು ಫಿನೋಲೆಕ್ಸ್ ಪೈಪ್ಸ್ ಕಂಪನಿಯ ಸಹಯೋಗದಲ್ಲಿ ಕೋರೊನಾ ವೈರಸ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ನೂರಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಆಹಾರ ಪದಾರ್ಥ ಮತ್ತು ಹೈಜಿನ್ ಕಿಟ್‍ಗÀಳನ್ನು ವಿತರಣೆ ಮಾಡಲಾಯಿತು.
ನಗರದ ರೋಟರಿ ಭವನದಲ್ಲಿ ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಚಾಮರಾಜನಗರ ಡಿವೈಎಸ್ಪಿ ಅನ್ಸರ್‍ಆಲಿ ಅವರು ಆಹಾರ ಕಿಟ್‍ಗಳನ್ನು ವಿತರಣೆ ಮಾಡಿ ಮಾತನಾಡಿ, ಇದೊಂದು ಪವಿತ್ರ ಕಾರ್ಯವಾಗಿದೆ. ಕಳೆದ ಒಂಭತ್ತು ತಿಂಗಳಿಂದ ಕೋರೊನಾ ವೈರಸ್ ಕಾರಣದಿಂದ ಜನರು ಸಂಕಷ್ಟದಲ್ಲಿದ್ದಾರೆ. ದುಡಿಮೆ ಇಲ್ಲದೇ, ಅರ್ಥಿಕ ಸಂಕಷ್ಟಕ್ಕೆ ಸಿಲುಕಿ, ಸಂಸಾರ ನಿರ್ವಹಣೆ ಮಾಡಲು ಪರಿತಪಿಸುವಂತಾಗಿತ್ತು. ಇದನ್ನು ಮನಗಂಡು ಮೈಸೂರಿನ ರೋಟರಿ ಸಂಸ್ಥೆಯವರು ಫಿನೋಲೆಕ್ಸ್ ಕಂಪನಿಯ ಮೂಲಕ ಬಡವರಿಗೆ ಆಹಾರ ಕಿಟ್‍ಗಳನ್ನು ವಿತರಿಸಿ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಚಾಮರಾಜನಗರ ರೋಟರಿ ಸಂಸ್ಥೆಯ ಮುಖಾಂತರ 100ಕ್ಕೂ ಹೆಚ್ಚು ಬಡವರನ್ನು ಗುರುತಿಸಿ, ಆಹಾರ ಕಿಟ್ ವಿತರಣೆ ಮಾಡುತ್ತಿರುವುದು ಸಂತಸ ಎಂದಿದೆ ಎಂದರು.
ರೋಟರಿ ಅಧ್ಯಕ್ಷ ಆರ್. ಪ್ರಕಾಶ್ ಮಾತನಾಡಿ, ಮೈಸೂರಿನ ಜೆಪಿ ನಗರ ರೋಟರಿ ಸಂಸ್ಥೆಯ ಪಧಾಧಿಕಾರಿಗಳು ಫಿನೋಲೆಕ್ಸ್ ಕಂಪನಿಯ ಮುಖಾಂತರ ಬಡವರಿಗೆ ಆಹಾರ ಕಿಟ್‍ಗಳನ್ನು ವಿತರಣೆ ಮಾಡುತ್ತಿದ್ದರು. ಚಾಮರಾಜನಗರ ರೋಟರಿ ಸಂಸ್ಥೆಯ ಮೂಲಕ ನೂರಕ್ಕೂ ಹೆಚ್ಚು ಬಡವರಿಗೆ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಸೇವಾ ಕಾರ್ಯದಲ್ಲಿ ಚಾಮರಾಜನಗರ ರೋಟರಿಯನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಚಾಮರಾಜನಗರ ತಾಲೂಕಿನ ಬಡವರಿಗೂ ಸಹ ರೋಟರಿ ಸಂಸ್ಥೆ ಹಾಗೂ ಫಿನೋಲೆಕ್ಸ್ ಕಂಪನಿಯವರು ಆಹಾರ ಕಿಟ್ ವಿತರಣೆ ಮಾಡಿರುವುದಕ್ಕೆ ತುಂಬಾ ಅಭಾರಿಯಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಕಾರ್ಯದರ್ಶಿ ಚಂದ್ರಪ್ರಭಜೈನ್, ರೋಟರಿ ಜಿಲ್ಲಾ ಸಹಾಯಕ ರಾಜ್ಯಪಾಲ ಸುಭಾಷ್, ಮಾಜಿ ಅಧ್ಯಕ್ಷ ಆರ್.ಎಂ. ಸ್ವಾಮಿ, ಮಾಜಿ ಕಾರ್ಯದರ್ಶಿ ಕೆಂಪನಪುರ ಮಹದೇವಸ್ವಾಮಿ, ಖಜಾಂಚಿ ಯು. ರಾಜೇಂದ್ರ, ಮೈಸೂರಿನ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಚೆಲುವಯ್ಯ, ಡಾ||ಸಿ.ವೆಂಕಟೇಶ್, ಸ್ಥಾಪಕ ಸದಸ್ಯರಾದ ಶ್ರೀನಿವಾಸ್‍ಶೆಟ್ಟಿ, ಜಿ.ಆರ್. ಅಶ್ವಥ್‍ನಾರಾಯಣ್, ಸದಸ್ಯರುಗಳಾದ ನೀಲಕಂಠಮೂರ್ತಿ, ಬಿ.ಎಸ್. ಪ್ರಕಾಶ್, ವಿಶ್ವಾಸ್, ಉಲ್ಲಾಸ್, ಸುರೇಶ್, ನಾಗರಾಜು, ಸಿ.ಎನ್. ಸುರೇಶ್‍ಕುಮಾರ್, ಮಹಮದ್ ಅಜೀಜ್, ಕಮಲ್‍ರಾಜ್, ಎಂ. ವೆಂಕಟೇಶ್, ಅಂಕಶೆಟ್ಟಿ, ಪಿನೋಲೆಕ್ಸ್ ಕಂಪನಿಯ ಮೈಸೂರು ವಲಯದ ವ್ಯವಸ್ಥಾಪಕ ಮಹಾಂತೇಶ್ ಮೊದಲಾದವರು ಇದ್ದರು.