ರೋಟರಿ ಕ್ಲಬ್ ಸೇವೆಯೇ ಮೊದಲ ಮತ್ತು ಕೊನೆಯ ಧ್ಯೇಯ:ಡಾ ಶಿವಾನಂದ ಮಹಾಸ್ವಾಮಿ

ಬೀದರ:ಜು.26:ಜಗತ್ತಿನ ಅತಿ ದೊಡ್ಡ ಸಂಸ್ಥೆಯಾದ ರೋಟರಿ ಕ್ಲಬ್ ಸೇವೆಯೇ ಮೊದಲ ಮತ್ತು ಕೊನೆಯ ಧ್ಯೇಯವಾಗಿಟ್ಟುಕೊಂಡು ಮನುಕುಲದ ಏಳಿಗೆಗಾಗಿ ಶ್ರಮಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಪೂಜ್ಯ ಶ್ರೀ ಡಾ ಶಿವಾನಂದ ಮಹಾಸ್ವಾಮಿಗಳವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೋಟರಿ ಕ್ಲಬ್ , ಇನ್ನರ್ ವ್ಹೀಲ್ ಕ್ಲಬ್ ಬೀದರ ವತಿಯಿಂದ ಆಯೋಜಿಸಿರುವ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಹತ್ತನೆ ಮತ್ತು ಪಿಯುಸಿಯಲ್ಲಿ ಶಾಲಾ ಕಾಲೇಜಿಗೆ ಪ್ರಥಮ ಬಂದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು

ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ ಶೈಲೇಂದ್ರ ಬೆಲ್ದಾಳೆ ಅವರು ಸಮಾರಂಭ ಉದ್ಘಾಟಿಸಿ ಶತಮಾನ ಕಂಡ ರೋಟರಿ ಸಂಸ್ಥೆ ಕಳೆದ 50 ವರ್ಷಗಳಿಂದ ಶಿಕ್ಷಣ, ಆರೋಗ್ಯ, ಪರಿಸರ, ಮಹಿಳಾ ಸಬಲೀಕರಣ, ಮಕ್ಕಳ ಅಭಿವೃದ್ಧಿ, ಸೇರಿದಂತೆ ನೂರಾರು ಜನಹಿತ ಕಾರ್ಯಮಾಡುತ್ತಿದೆ ಬರುವ ದಿನಗಳಲ್ಲಿ ಸಂಸ್ಥೆಯ ಎಲ್ಲಾ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರೋಟರಿ ಕ್ಲಬ್ ನ ಜಿಲ್ಲಾ ಗವರ್ನರ್ ಡಾ ಮಾಣಿಕ ಪವಾರ ಅವರು ಮಾತನಾಡಿ ಕ್ಲಬ್ ನ ಮೂಲ ಆಶಯದಂತೆ ಬೀದರ ರೋಟರಿ ಕ್ಲಬ್ ನವರು ಸಹ ಕಾರ್ಯ ಪ್ರವೃತ್ತರಾಗಿ ಒಂದು ಹೆಜ್ಜೆ ಮುಂದೆ ಇಟ್ಟು ಉತ್ತಮ ಶಿಕ್ಷಕರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ನಿರ್ಗತಿಕರಿಗೆ ಹೊಲಿಗೆ ಯಂತ್ರ, ಪೆÇ್ರತ್ಸಾಹಧನ, ರಕ್ತದಾನ ಶಿಬಿರ, ಶೌಚಾಲಯ ನಿರ್ಮಾಣ, ನೆರೆ ಪರಿಹಾರ, ಕೋವಿಡ್ ಒಳಗಾದವರಿಗೆ ಆಕ್ಸಿಜನ್ ಸಾಂದ್ರಕ ಪೂರೈಕೆ, ಬಡವರಿಗೆ ಆಹಾರ ಕಿಟ್ ವಿತರಣೆ ಹೀಗೆ ಹಲವಾರು ಸಮಾಜಮುಖಿ ನಿರಂತರವಾಗಿ ಮಾಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಎಚ್ ಕೆ ಇ ಸಂಸ್ಥೆಯ ನಿರ್ದೇಶಕ ಶ್ರೀ ಬಸವರಾಜ ಖಂಡೆರಾವ ಕಲಬುರಗಿ ,ಪಿಡಿಜಿ ಕೆಸಿ ಸೇನನ್, ರೋಟರಿ ಸಂಸ್ಥೆಯ ಮಾಜಿ ಜಿಲ್ಲಾ ಗವರ್ನರ್ ಡಾ ಚಿನ್ನಪ್ಪರೆಡ್ಡಿ , ರೊಟರಿಯ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಯಲಾಲ ಎಜಿ ಡಾ ವಸಂತ ಪವಾರ,ಮಾತನಾಡಿದರು ಇದೆ ಸಂಧರ್ಭದಲ್ಲಿ ಕ್ಕಬ್ ನ ನೂತನ ಅಧ್ಯಕ್ಷರಾದ ಚಂದ್ರಕಾಂತ ಕಾಡಾದಿ ಕಾರ್ಯದರ್ಶಿಗಳಾಗಿ ಸೋಮಶೇಖರ ಪಾಟೀಲ ಕೋಶಾಧ್ಯಕ್ಷರಾಗಿ ಅನೀಲಕುಮಾರ ಮಸೂದಿ ಹಾಗೂ ಇನ್ನರ್ ವ್ಹೀಲ್ ಕ್ಲಬ್ ನ ಅಧ್ಯಕ್ಷರಾಗಿ ಅನಿತಾ ಚಿಂತಾಮಣಿ ಕಾರ್ಯದರ್ಶಿಯಾಗಿ ಕವಿತಾ ಪ್ರಭಾ ಅವರು ಜವಾಬ್ದಾರಿ ಸ್ವೀಕರಿಸಿದರು ವೇದಿಕೆಯಲ್ಲಿ ರೋಟರಿ ಕ್ಲಬ್ ಮಾಜಿ ಅದ್ಯಕ್ಷ ಪ್ರಕಾಶ ಟೊಣ್ಣೆ, ಕಾರ್ಯದರ್ಶಿ ಅಮರನಾಥ ಡೊಳ್ಳಿ ರೋಟರಿ ಕ್ಲಬ್ ನ ಹಿರಿಯ ಸದಸ್ಯರಾದ ಹಾವಶೆಟ್ಟಿ ಪಾಟೀಲ, ರವಿ ಮೂಲಗೆ, ಪ್ರೆಮಿಳಾ ಗುತ್ತಿ , ಮಂಜುಳಾ ಮೂಲಗೆ, ಸುರೇಖಾ ಶೇರಿಕಾರ ಉಮಾ ಗಾದಗೆ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಆರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು ಅನೀಲಕುಮಾರ ಔರಾದೆ ಸ್ವಾಗತಿಸಿದರು ಶಿವಶಂಕರ ಕಾಮಶೆಟ್ಟಿ ಅವರು ನಿರೂಪಿಸಿದರೆ ಶಿವಶಂಕರ ಟೋಕರೆ ಅವರು ವಂದಿಸಿದರು ಸ್ಪೂರ್ತಿ ಮೆಲೊಡಿಸ್ ನ ನಾಗರಾಜ ಜೋಗಿ , ದತ್ತು ಹಾಗೂ ಮಹೇಶ್ವರಿ ಪಾಂಚಾಳ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು ಕು ಸ್ವಾತಿ ಸಂತೋಷ ಮಾನಶೆಟ್ಟಿ ಅವರಿಂದ ವಚನ ನೃತ್ಯ ಜರುಗಿತು. ಇದೆ ಸಂಧರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜೊತೆಗೆ ಕಾಲೇಜಿನ ಪ್ರಾಚಾರ್ಯರು ಮತ್ತು ಮುಖ್ಯ ಗುರುಗಳಿಗೆ ಸನ್ಮಾನಿಸಲಾಯಿತು