ರೋಟರಿ ಕ್ಲಬ್ ನಿಂದ ವಿ.ರಾಮಿರೆಡ್ಡಿ ಆಂಬ್ಯೂಲೇನ್ಸ್ ಸೇವೆ ಲೋಕಾರ್ಪಣೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಫೆ26: ರೋಟರಿ ಸಂಸ್ಥೆ ವಿ.ರಾಮಿರೆಡ್ಡಿ ಸ್ಮಾರಕ ನಿಧಿಯಿಂದ ಸಾರ್ವಜನಿಕರಿಗೆ ಆತ್ಯಾಧುನಿಕ ಸೌಕರ್ಯಗಳನ್ನು ಹೊಂದಿದ ಆಂಬ್ಯೂಲೇನ್ಸ್ ಸೇವೆಯನ್ನು ನಾಳೆ ಲೋಕಾರ್ಪಣೆ ಮಾಡಲಿದೆ ಎಂದು ರೋಟರಿ ಅಧ್ಯಕ್ಷ ಆರ್.ಸತ್ಯನಾರಾಯಣ ತಿಳಿಸಿದರು.
ಈ ಕುರಿತು ಹೊಸಪೇಟೆಯ ಪತ್ರಿಕಾಭವನದಲ್ಲಿ ಸೋಮವಾರ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮತನಾಡಿದ ಅವರು ನಾಳೆ ನಮ್ಮ ರೋಟರಿ ಸಂಸ್ಥೆಯ ಹಿರಿಯ ಸದಸ್ಯರಾದ ವಿ.ತಿರುಪತಿನಾಯ್ಡು ಅವರು ತಮ್ಮ ತಂದೆಯ ಸ್ಮಾರಣಾರ್ಥವಾಗಿ ಅಂದಾಜು 35 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದ ಸಂಪೂರ್ಣ ಹವಾನಿಯಂತ್ರಿತ ಐಸಿಯು ಸೌಲಭ್ಯವನ್ನು ಹೊಂದಿದ ಆಂಬ್ಯೂಲೇನ್ಸ್‍ನ್ನು ದೇಣಿಗೆಯಾಗಿ ನೀಡಿದ್ದು ನಾಳೆಯಿಂದ ಸಾರ್ವಜನಿಕ ಬಳಕೆ ಮುಕ್ತಗೊಳಿಸಲಾಗುವುದು ಎಂದರು.
ದೈನಂದಿನ ನಿರ್ವಹಣೆಗೆ ಒಂದು ಸಮಿತಿಯನ್ನು ರಚಿಸಲಾಗಿದ್ದು ಸಮಿತಿ ಎಲ್ಲಾ ಹಂತದ ರೋಗಿಗಳಿಗೆ ಅನುಕೂಲವಾಗುವಂತೆ ವ್ಯವಸ್ಥೆ ನೀಡಲಿದೆ ಎಂದರು.  ಪಿ.ಜಿ.ಚಂದ್ರಶೇಖರ ಅಧ್ಯಕ್ಷರಾಗಿ, ಸೈಯದ್ ನಾಜೀಮುದ್ದೀನ್ ಸಹ ಅಧ್ಯಕ್ಷರಾಗಿ ಹಾಗೂ ರಾಜೇಶ್ ಕೋರಿಶೆಟ್ಟರ್ ಕಾರ್ಯದರ್ಶಿಯಾಗಿ ಯೋಜನೆ ನಿರ್ವಹಣೆ ಮಾಡಲಿದ್ದಾರೆ.
ನಾಳೆ ಉದ್ಘಾಟನೆ:
ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಡೆಯುವ ಲೋಕಾಪರ್ಣೆ ಕಾರ್ಯಕ್ರಮವನ್ನು ರೋಟರಿ ಜಿಲ್ಲೆ 3160 ಗೌರರ್ನ್ ಮಾಣಿಕ್ ಪವಾರ್ ಉದ್ಘಾಟಿಸಲಿದ್ದಾರೆ, ಶಾಸಕ ಹೆಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ  ಡಾ.ಶಂಕರನಾಯ್ಕ್ ಹಾಗೂ ಯೋಜನೆ ದಾನಿ ವಿ.ತಿರುಪತಿ ನಾಯ್ಡು ಪಾಲ್ಗೊಳ್ಳಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್.ದಾದಾಪೀರ್, ವಿಜಯ ಸಿಂದಗಿ, ಅಲಿಭಾಷಾ ಪಾಲ್ಗೊಂಡಿದ್ದರು.

One attachment • Scanned by Gmail