ರೋಟರಿ ಕ್ಲಬ್ ಗುಲಬರ್ಗಾನಾರ್ಥ ವತಿಯಿಂದ, ಡಾಕ್ಟರ್ಸಡೇ ಸಿ.ಎ.ಡೇ ಆಚರಣೆ

ಕಲಬುರಗಿ:ಜು.23: ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ, ಸಾವಿರಾರು ಜನರಿಗೆ ಉಚಿತ ವೈದ್ಯಸೇವೆ ಸಲ್ಲಿಸಿ, ಜನರ ದೇವರೆಂದೇ ಖ್ಯಾತರಾದ, ಡಾ. ಬಿ.ಸಿ. ರಾಯ್ ರವರ ಜನ್ಮ ದಿನವನ್ನೇ ಭಾರತದಲ್ಲಿ ವೈದ್ಯರ ದಿನವೆಂದು ಆಚರಿಸಲಾಗುತ್ತದೆ ಎಂದು ಖ್ಯಾತ ಮಕ್ಕಳ ತಜ್ಞ ಡಾ. ನಾಗನಾಥ ಗಚ್ಚಿನಮನಿಯವರು ರೋಟರಿ ಕ್ಲಬ್, ಗುಲಬರ್ಗಾ ಉತ್ತರ ವಲಯ, ಪಬ್ಲಿಕ್ ಗಾರ್ಡನ್‍ನ ರೋಟರಿ ಶಾಲೆಯ ಫಾಲ್ ಹ್ಯಾರಿಸ್ ಸಭಾಂಗಣದಲ್ಲಿ ಆಯೋಜಿಸಿದ ಡಾಕ್ಟರ್ಸ ಡೇ ಮತ್ತು ಚಾರ್ಟಡ್ ಅಕೌಂಟೆಂಟ್ ಡೇ ಆಚರಣೆಯ ನಿಮಿತ್ಯೆ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ಕೆಬಿಎನ್ ಮೆಡಿಕಲ್ ಕಾಲೇಜಿನ ಡೀನರಾದ ಡಾ. ಸಿದ್ದೇಶ್ ಶಿರವಾರರವರು ಮಾತನಾಡುತ್ತ, ಭಾರತದಲ್ಲಿ ಜುಲೈ-01 ರಂದು ಡಾ. ಬಿ.ಸಿ.ರಾಯ್ ರವರ ಜನ್ಮ ದಿನವನ್ನು ವೈದ್ಯರ ದಿನವೆಂದು ಆಚರಿಸುತ್ತೇವೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಸ್ಥಾಪಿಸಿದ ಮೂಲಪುರುಷ, ವೈದ್ಯೋ ನಾರಾಯಣ ಹರಿ ಎಂಬ ಮಾತಿಗೆ ಮಾದರಿಯಾದ ಡಾ.ಬಿ.ಸಿ. ರಾಯ್ ರವರು. ಅಂತಹವರ ಸೇವೆಯನ್ನು ನಾವು ಅವರ ಮಾರ್ಗದಲ್ಲಿ ಸಾಗಬೇಕು ಎಂದು ನುಡಿದರು.

ಹೆಲ್ತ ಇಸ್ ವೆಲ್ತ್ ಎಲ್ಲರಿಗೂ ತಿಳಿದ ವಿಷಯ ಹೆಲ್ತ ಕಾಪಾಡಲು ಡಾಕ್ಟರ್ ಬೇಕು ವೆಲ್ತ್ ಕಾಪಾಡಲು ನಾವು ಚಾರ್ಟಟೆಡ್ ಅಕೌಂಟೆಂಟ್ ಬೇಕು ನಮ್ಮನ್ನು ಸನ್ಮಾನಿಸಿದ ರೋಟರಿ ಕ್ಲಬ್ ಗುಲಬರ್ಗಾ ನಾರ್ಥನ ಪದಾಧಿಕಾರಿಗಳಿಗೆ ಧನ್ಯವಾದಗಳು ಎಂದು ಖ್ಯಾತ ಚಾರ್ಟಟೆಡ್ ಅಕೌಂಟೆಂಟ್ ಆನಂದ ಪಲ್ಲೊದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಹಿರಿಯ ಉದ್ಯಮಿ ಶ್ರೀ ರಾಘವೇಂದ್ರ ಮೈಲಾಪೂರ, ಶ್ರೀನಿವಾಸ ಅಮ್ಮಣ, ಜಗದೀಶ್ ಪಾಟೀಲ್, ಸಂಜು ಮಾನಕರ್ ರವರನ್ನು ಹೊಸ ಸದಸ್ಯರಾಗಿ ಪ್ರಮಾಣ ಸ್ವೀಕರಿಸಿದರು.

ಈ ಕಾರ್ಯಕ್ರಮದಲ್ಲಿ ಹಿರಿಯ ಟ್ಯಾಕ್ಸ ಪ್ರಾಕ್ಟೀಷನರ್ ವಿಜಯಕುಮಾರ ಚಿಟಗುಪ್ಪರ್, ಆನಂದ ಪಲ್ಲೂರ್, ಡಾ.ನಾಗನಾಥ ಗಚ್ಚಿನಮನಿ, ಡಾ. ಸಿದ್ದೇಶ ಶಿರವಾರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಆಫ್ ಗುಲಬರ್ಗಾ ನಾರ್ಥನ ಅಧ್ಯಕ್ಷರಾದ ದೇವೆಂದ್ರ ಸಿಂಗ್ ಚವ್ಹಾಣ ಸ್ವಾಗತಿಸಿದರು. ಕಾರ್ಯದರ್ಶಿ ಸುಹಾಸ್ ಖಣಗೆ ನಿರೂಪಿಸಿದರು. ಜಂಟಿ ಕಾರ್ಯದರ್ಶಿಗಳಾದ ನೌಶಾದ್ ಇರಾನಿ ವಂದಿಸಿದರು. ಕಾರ್ಯಕ್ರಮದಲ್ಲಿ ವಾಸ್ತುಶಿಲ್ಪಿ ಬಸವರಾಜ ಖಂಡೇರಾವ್, ರವೀಂದ್ರ ಮಾದಾಮ್ ಶೆಟ್ಟಿ, ರಾಮಕೃಷ್ಣ ಬೋರಾಳ್ಕರ್, ಆನಂದ ದಂಡೋತಿ, ರಾಮ ಶ್ಯಾನಬೋಗ, ಚಿತ್ರಶೇಖರ ಕಂಟಿ, ಶಿವಾನಂದ ಬೇಲೂರೆ, ಸಂಜೀವ ಗುಪ್ತಾ, ಶ್ಯಾಮ್ ಜೋಷಿ, ದೀಪಕ್ ಕವಲಗಿಕರ್ ಹಾಗೂ ಡಾ.ಬಾಬುರಾವ್ ಶೇರಿಕಾರ್ ಉಪಸ್ಥಿತರಿದ್ದರು.