ರೋಟರಿ ಕ್ಲಬ್ : ಈಸ್ಟ್ ಅನುಸ್ಥಾಪನ – ಪದಗ್ರಹಣ

ರಾಯಚೂರು.ಜು.೨೬- ರೋಟರಿ ಕ್ಲಬ್ ರಾಯಚೂರು ಈಸ್ಟ್ ಅನುಸ್ಥಾಪನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಡಿಜಿಈ ಮಾಣಿಕ್ ಪವಾರ್ ಅವರು ಇನ್ಸ್ಟಲ್ಲೇಶನ್ ಆಫೀಸರ್ ಆಗಮಿಸಿ ಹೊಸ ವರ್ಷದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರನ್ನು ಅನುಸ್ಥಾಪನೆ ಮಾಡಿದರು. ಅಧ್ಯಕ್ಷರಾಗಿ ಶ್ಯಾಮ್ ಕುಮಾರ್ ರೆಡ್ಡಿ ಮತ್ತು ಕಾರ್ಯದರ್ಶಿಗಳಾಗಿ
ಬಿ.ಹನುಮಂತರೆಡ್ಡಿ ಪದಗ್ರಹಣ ಮಾಡಿದರು. ಈ ಕಾರ್ಯಕ್ರಮವನ್ನು ಡಿಜಿಈ ಮಾಣಿಕ್ ಪವಾರ್ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಸದಸ್ಯರುಗಳನ್ನು ಉದ್ದೇಶಿಸಿ ಮಾತನಾಡಿ, ರೋಟರಿಯ ಹಲವಾರು ವಿಷಯಗಳನ್ನು ಹಂಚಿಕೊಂಡರು.
ರೋಟರಿ ಕ್ಲಬ್ ಈಸ್ಟ್ ತಂಡ ಮಾಡಿದ ೨೦೨೧ – ೨೨ ಕಂಪ್ಯೂಟರ್ ವಿತರಣೆ, ಬೆಂಚು ವಿತರಣೆ, ಸಿವಿಂಗ್ ಮಷಿನ, ಹೀಗೆ ಈ ಭಾಗದ ಜನರಿಗೆ ತುಂಬಾ ಅನುಕೂಲಕರವಾದ ಕಾರ್ಯಕ್ರಮಗಳನ್ನು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ
ರಂಗ ಲಿಂಗನಗೌಡ ಅಸಿಸ್ಟೆಂಟ್ ಗವರ್ನರ್ ಮತ್ತು ಶರಣಗೌಡ ಹಿರೇಗೌಡ ಜಿಲ್ಲಾ ತರಬೇತಿದಾರರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಚಂದ್ರಕಾಂತ್, ರವಿಕುಮಾರ್, ಶಾಮರಾವ್ ಲೋಕಂಡೆ, ಮುಕುನಗೌಡ ಪಾಟೀಲ್, ಸದಾಶಿವಪ್ಪ, ಶಾಂತಕುಮಾರ್, ಕಿರಣ್ ಲೋಕರಿ, ಸೋಮ ಶ್ರೀನಿವಾಸ ಗೌಡ, ಡಾ.ಶಾಮಣ್ಣ ವಾಚನೂರ್, ರವೀಂದ್ರ ಕುರಿ, ಅಪ್ಪಣ್ಣ ಮತ್ತು ಹೊಸ ಸದಸ್ಯರಾಗಿ ಚೇತನ್ ಕುಮಾರ್, ಕವಿತಾ ಚಂದ್ರಕಾಂತ್, ರೂಪ, ಪಾವನಿ, ಮುಖನ ಗೌಡ್ರು, ಅಪ್ಪಣ್ಣ ಇವರೆಲ್ಲರಿಗೂ ರಂಗ ಲಿಂಗನಗೌಡ್ರು ಪದಗ್ರಹಣ ಮಾಡಿದರು.