ರೋಟರಿ ಕ್ಲಬ್ ಆಫ್ ಬೀದರ ಸಿಲ್ವರ್ ಸ್ಟಾರ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ

ಬೀದರ,ಏ.22:ರೋಟರಿ ಕ್ಲಬ್ ಆಫ್ ಬೀದರಸಿಲ್ವರ್ ಸ್ಟಾರ ವತಿಯಿಂದ ನಗರದ ಮಹಾತ್ಮ ಜ್ಯೋತಿಭಾ ಫುಲೆ ಸಿನಿಯರ್ ಸಿಟಿಜನ್ ಹೋಮ್ ಬೀದರನಲ್ಲಿ ಉಚಿತ ಆರೋಗ್ಯ ಶಿಬಿರ ಹಾಗೂ ಹಲ್ಲು ಮತ್ತು ಕಣ್ಣು ತಪಾಸಣೆ ಗುದಗೆ ಆಸ್ಪತ್ರೆ ಸಹಯೋಗದೊಂದಿಗೆ ನೇರವೆರಿತು.
ಅಲ್ಲದೇ ಗುದಗೆ ಆಸ್ಪತ್ರೆಯ ವತಿಯಿಂದ ಶನಿವಾರ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿದ್ದ ವೃದ್ಧರ ಜೊತೆಗೆ ಸಮಾಲೋಚನೆ ನಡೆಸಿ ಎಲ್ಲರ ರಕ್ತ ಪರೀಕ್ಷೆ ಮಾಡಿದರು. ರವಿವಾರದಂದು ವೃದ್ಧಾಶ್ರಮದಲ್ಲಿ 25 ಜನರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿ, ಅವರೆಲ್ಲರಿಗೂ ಒಳ್ಳೆಯ ಆರೋಗ್ಯ ಸಲುವಾಗಿ ಪ್ರಖ್ಯಾತ ವೈದ್ಯರಾದ ಡಾ. ಸಚೀನ್ ಗುದಗೆ, ಡಾ. ವೈಭವ ಬದಬದೆ, ಡಾ. ಗೋವಿಂದರಾಜ ಬಚ್ಚಾ, ಡಾ. ವಿಕ್ರಮ ನಿಂಬೂರ, ಡಾ. ಸಂಗಮೇಶ ವಡಗಾಂವೆ ಅವರಿಂದ ತಪಾಸಣೆ ಮಾಡಲಾಯಿತು. ವೃದ್ಧರ ದಿನಬಳಕೆಗೆ ಬೇಕಾಗುವ ಸಾಮಾಗ್ರಿ ಹಾಗೂ ಎಲ್ಲಾ ವೃದ್ಧರ ಚಿಕಿತ್ಸೆಗೆ ಬೇಕಾಗುವ ಔಷಧಿಗಳನ್ನು ಪುನಿತ್‍ಸಿಂಗ್ ಹಾಗೂ ಆನಂದ ಕೊಟರ್ಕಿ ಅವರ ವತಿಯಿಂದ ಕೊಡಲಾಗಿದೆ.
ಈ ಸಂದರ್ಭದಲ್ಲಿಬೀದರಿನ ಸಿಲ್ವರ್ ಸ್ಟಾರ್ ಕ್ಲಬ್‍ನ ಸಲಹೆಗಾರರಾದ ಬಸವರಾಜ ಧನ್ನೂರ, ಅಧ್ಯಕ್ಷರಾದ ಸರದಾರ್ ಪುನೀತ್‍ಸಿಂಗ್, ಉಪಾಧ್ಯಕ್ಷರಾದ ಆದೀಶ ಆರ್. ವಾಲಿ, ಕಾರ್ಯದರ್ಶಿ ಪೂಜಾ ಜಾರ್ಜ್ ಸ್ಯಾಮುವೆಲ್, ಜಂಟಿ ಕಾರ್ಯದರ್ಶಿ ಸ್ಪೂರ್ತಿ ಧನ್ನೂರ, ಖಜಾಂಚಿಯಾದ ಸಿ.ಎ.ಅಮೆ ಸಿಂದೋಲ್, ಸಾರಜೆಂಟ್ ಎಟ್ ಆಮ್ರ್ಸ್ ಡಾ.ಸಂಗಮೇಶ ವಡಗಾಂವೆ, ನಿರ್ದೇಶಕರಾದ ಸಹನಾ ಪಾಟೀಲ, ಪೂಜಾ ಕೊಂಡಿ, ಮಂಜುನಾಥ ಹೂಗಾರ, ಸದಸ್ಯರಾದ ಆನಂದ ಕೊಟರ್ಕಿ, ನವೀನ ಗೋಯಲ್, ಮನೋಜ ರಬ್ಗರ್, ಅಶೋಕ ಹೆಬ್ಬಾಳೆ, ಕಿರಣ ಸ್ಯಾಮುವೆಲ್, ಮಂಜುನಾಥ ಖೂಬಾ, ಮಹೇಶ ಚಿಮಕೋಡೆ, ಸುರೇಂದ್ರ ಸಿಂದೋಲ್ ಉಪಸ್ಥಿತರಿದ್ದರು.