ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ಅಸ್ತಿತ್ವಕ್ಕೆ

ಬೀದರ್: ಫೆ.25:ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ಅಸ್ತಿತ್ವಕ್ಕೆ ಬಂದಿದೆ.
ರೋಟರಿ ಸೆವೆನ್ ಏರಿಯಾಸ್ ಆಫ್ ಫೆÇೀಕಸ್ ಜಿಲ್ಲಾ ಅಧ್ಯಕ್ಷ ಬಸವರಾಜ ಧನ್ನೂರ ಅವರ ಪ್ರೇರಣೆ ಫಲವಾಗಿ 67 ಸದಸ್ಯರನ್ನೊಳಗೊಂಡ ನೂತನ ಕ್ಲಬ್ ರಚನೆಗೊಂಡಿದೆ.
ಕ್ಲಬ್ ಪದಾಧಿಕಾರಿಗಳು:
ಸರ್ದಾರ್ ಪುನೀತ್ ಸಿಂಗ್ (ಚಾರ್ಟರ್ ಅಧ್ಯಕ್ಷ), ಆದೀಶ್ ಆರ್. ವಾಲಿ (ಉಪಾಧ್ಯಕ್ಷ), ಪೂಜಾ ಜಾರ್ಜ್ ಸ್ಯಾಮುವೆಲ್ (ಕಾರ್ಯದರ್ಶಿ), ಸ್ಫೂರ್ತಿ ಧನ್ನೂರ (ಸಹ ಕಾರ್ಯಧರ್ಶಿ), ಅಮಯ್ ಸಿಂದೋಲ್ (ಖಜಾಂಚಿ), ಡಾ. ಸಂಗಮೇಶ ವಡಗಾವೆ (ಸಾಜೆರ್ಂಟ್ ಎಟ್ ಆಮ್ರ್ಸ್), ಸಹನಾ ಪಾಟೀಲ (ಆಡಳಿತಾಧಿಕಾರಿ), ಮಂಜುನಾಥ ಹೂಗಾರ (ಸದಸ್ಯತ್ವ ಸಮಿತಿ ಅಧ್ಯಕ್ಷ), ಪೂಜಾ ಕೊಂಡಿ (ಪಬ್ಲಿಕ್ ಇಮೆಜ್ ಸಮಿತಿ ಅಧ್ಯಕ್ಷೆ), ಕೀರ್ತಿ ವಾಲೆ (ಕ್ಲಬ್ ಬುಲೆಟಿನ್ ಸಮಿತಿ ಅಧ್ಯಕ್ಷೆ), ಅಭಿಷೇಕ ಚಿಂತಾಮಣಿ (ಸರ್ವಿಸ್ ಪ್ರಾಜೆಕ್ಟ್ ಸಮಿತಿ ಅಧ್ಯಕ್ಷ), ಲವನೀತ್ ಸಿಂಗ್ (ಯುವ ಸಮಿತಿ ಅಧ್ಯಕ್ಷ), ಭಾವೇಶಕುಮಾರ (ರೋಟರಿ ಫೌಂಡೇಷನ್ ಅಧ್ಯಕ್ಷ) ಹಾಗೂ ಗುರು ಸಿಂದೋಲ್ (ಸೆವೆನ್ ಏರಿಯಾಸ್ ಆಫ್ ಫೆÇೀಕಸ್ ಅಧ್ಯಕ್ಷ).
ಕ್ಲಬ್ ಉದ್ಘಾಟನೆ: ನಗರದ ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನ ಗುರುನಾನಕ ಭವನದಲ್ಲಿ ಕ್ಲಬ್ ಅನ್ನು ಉದ್ಘಾಟಿಸಲಾಯಿತು.
ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಗವರ್ನರ್ ಮಾಣಿಕ ಎಸ್. ಪವಾರ್ ಅವರು ಕ್ಲಬ್ ನೂತನ ಅಧ್ಯಕ್ಷರಿಗೆ ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ಪ್ರಮಾಣ ಪತ್ರ ವಿತರಿಸಿದರು.
ರೋಟರಿ ಸಂಸ್ಥೆಯ ರವಿ ವಾದ್ಲಮನಿ, ಹೈದರಾಬಾ???ನ ಸಿ. ಸುರೇಶ, ಮೋಹನ್ ಪಾಲೇಶಾ ಪುಣೆ, ರೋಟರಿ ಸೇವೆನ್ ಏರಿಯಾಸ್ ಆಫ್ ಫೆÇೀಕಸ್ ಜಿಲ್ಲಾ ಅಧ್ಯಕ್ಷ ಬಸವರಾಜ ಧನ್ನೂರ, ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ನಿವೃತ್ತ ಗವರ್ನರ್ ಕೆ.ಸಿ. ಸೇನನ್, ರೋಟರಿ ಕಲ್ಯಾಣ ಝೋನ್ ಅಸಿಸ್ಟಂಟ್ ಗವರ್ನರ್ ಡಾ. ವಸಂತ ಪವಾರ್, ರೋಟರಿ ಕ್ಲಬ್ ಆಫ್ ಬೀದರ್ ಫೆÇೀರ್ಟ್ ಅಧ್ಯಕ್ಷ ಸಂಗಮೇಶ ಆಣದೂರೆ, ಕಾರ್ಯದರ್ಶಿ ಗುಂಢಪ್ಪ ಘೋದೆ, ಗುರುನಾನಕ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಬಲಬೀರಸಿಂಗ್, ಉಪಾಧ್ಯಕ್ಷೆ ರೇಷ್ಮಾ ಕೌರ್, ಶಿವಶರಣಪ್ಪ ವಾಲಿ, ಡಾ. ಚಂದ್ರಕಾಂತ ಗುದಗೆ, ಬಿ.ಎಲ್. ಸಿಂದೋಲ್, ಬಿ.ಜಿ. ಶೆಟಕಾರ್, ಪೂರ್ಣಿಮಾ ಜಾರ್ಜ್ ಮತ್ತಿತರರು ಇದ್ದರು.


ಸಮಾನ ವಯಸ್ಕ, ಸಮಾನ ಮನಸ್ಕ ಹಾಗೂ ಪ್ರಗತಿಪರ ವಿಚಾರಧಾರೆ ಉಳ್ಳ ಯುವ ಜನರನ್ನು ಸೇರಿಸಿ ಕ್ಲಬ್ ರಚಿಸಲಾಗಿದೆ. ರೋಟರಿ ಸಂಸ್ಥೆಯಲ್ಲಿನ 25 ವರ್ಷಗಳ ಅನುಭವ ಹಿನ್ನೆಲೆಯಲ್ಲಿ ಕ್ಲಬ್ ರಚನೆಗೆ ಅಗತ್ಯ ಮಾರ್ಗದರ್ಶನ ಹಾಗೂ ಸಹಕಾರ ನೀಡಿರುವೆ. ಕ್ಲಬ್ ಬರುವ ದಿನಗಳಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದೆ. ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಲಿದೆ.

ಬಸವರಾಜ ಧನ್ನೂರ
ರೋಟರಿ ಸೆವನ್ ಏರಿಯಾಸ್ ಆಫ್ ಫೆÇೀಕಸ್ ಜಿಲ್ಲಾ ಅಧ್ಯಕ್ಷ


ಕ್ಲಬ್ ಚಾರ್ಟರ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ನನ್ನ ಕೃತಜ್ಞತೆ ಸಲ್ಲಿಸುವೆ. ನನ್ನ ಅವಧಿಯಲ್ಲಿ ಶಿಕ್ಷಣ, ಆರೋಗ್ಯ, ಪರಿಸರ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಕೊಡುಗೆ ನೀಡುವ ಗುರಿ ಹೊಂದಿರುವೆ.

ಸರ್ದಾರ್ ಪುನೀತ್ ಸಿಂಗ್
ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ಅಧ್ಯಕ್ಷ