ರೋಟರಿ ಕ್ಲಬ್ :ಅಧ್ಯಕ್ಷ, ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭ

ರಾಯಚೂರು,೧೫- ರೋಟರಿ ಕ್ಲಬ್ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭ ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಸಿಲ್ವರ್ ಜುಬಿಲಿ ಹಾಲಿನಲ್ಲಿ ರೋಟರಿ ಕ್ಲಬ್ ರೈಚೂರ್ ಸೆಂಟ್ರಲ್ ರೋಟರಿ ಕ್ಲಬ್ ಕೃಷ್ಣ ತುಂಗೆ ರೋಟರಿ ಕ್ಲಬ್ ದೇವದುರ್ಗ ಡೈಮಂಡ್ಸ್ ಮೂರು ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಕ್ಲಬ್ಗಳ ನೂತನ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ಪದಗ್ರಹಣ ನಡೆಯಿತು.
ಈ ಸಂದರ್ಭದಲ್ಲಿ ಪಿಡಿಜಿ ತಿರುಪತಿ ನಾಯ್ಡು ಪಿಡಿ ಜಿ ಚೆನ್ನಪ್ಪ ರೆಡ್ಡಿ ಪಿಡಿಜೆ ಶ್ರೀ ರಾಮಮೂರ್ತಿ ರೋಟರಿ ಕ್ಲಬ್ ಮಹಾಲಕ್ಷ್ಮಿ ಜೊನ್ನ ನೂತನ ಡಿ ಜಿ ಆದ ಓಮಿನಿ ಸತೀಶ್ ಅವರು ಮಾತನಾಡಿ ಉತ್ತಮ ಯೋಜನೆಗಳನ್ನು ಯೋಜನೆಗಳನ್ನು ಕೈಗೊಂಡು ಸಮಾಜಕ್ಕೆ ಮಾದರಿಯಾಗೋಣ ಎಂದರು.
ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಪ್ರಮೋದ್ ಕುಮಾರ್ ಕಾರ್ಯದರ್ಶಿಗಳಾಗಿ ಶರಣ ಬಸವ ಪಾಟೀಲ್ ಜೋಳದಡಗಿ ರೋಟರಿ ಕ್ಲಬ್ ಕೃಷ್ಣ ತುಂಗೆ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಗಣೆಕಲ್ ಕಾರ್ಯದರ್ಶಿಗಳಾಗಿ ತಿರುಮಲ ರೆಡ್ಡಿ ದೇವದುರ್ಗ ಡೈಮಂಡ್ಸ್‌ನ ಅಧ್ಯಕ್ಷರಾಗಿ ಶುಭಾಷ್ ಪಾಟೀಲ್ ಕಾರ್ಯದರ್ಶಿಗಳಾಗಿ ಶರಣಬಸವ ಪದಗ್ರಹಣ ಮಾಡಿ ೨೨ ೨೩ನೇ ಸಾಲಿನ ಯೋಜನೆಗಳನ್ನು ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಮಹಾಲಕ್ಷ್ಮಿ ಜೂನ್ ಎಜಿ ರೊಟೋರಿಯನ್ ಯಶವಂತ್, ರಾಘವೇಂದ್ರ ಜೋನ್ ರಂಗಲಿಂಗನಗೌಡ ರೋಟೋರಿಯನ್ ತ್ರಿವಿಕ್ರಂ ಜೋಶಿ, ನಿಜಾನಂದ ರೆಡ್ಡಿ, ಎಸ್ ಬಿ ಪಾಟೀಲ್ ಶರಣಗೌಡ ಹಿರೇಗೌಡು, ಮಂಜುನಾಥ್ ಪಾಟೀಲ್ ವಟಗಲ್, ಲಕ್ಷ್ಮಿಕಾಂತ್ ರೆಡ್ಡಿ, ವಿರುಪನಗೌಡ, ಯುವರಾಜ್ ಗೌಡ, ಶರಣಬಸು ಆಶಾಪುರ್, ವಿರುಪಾಕ್ಷಿ ,ಚಂದ್ರಶೇಖರ್ ನರಸಪ್ಪ ಮತ್ತು ರೋಟರಿ ಕ್ಲಬ್‌ನ ಸದಸ್ಯರು ಹಾಜರಿದ್ದರು.