ರೋಟರಿ ಕ್ಲಬ್‍ನಿಂದ ವಿಜಯ ಗುನ್ನಳ್ಳಿಗೆ ಸನ್ಮಾನ

ಬೀದರ: ನ.16:ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ನಿರ್ದೇಶಕರಾಗಿ ಮೂರನೇ ಬಾರಿಗೆ ಆಯ್ಕೆಯಾದ ವಿಜಯ ಗುನ್ನಳ್ಳಿ ಅವರನ್ನು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ನಗರದಲ್ಲಿ ಸನ್ಮಾನಿಸಲಾಯಿತು.

ಕ್ಲಬ್ ಪದಾಧಿಕಾರಿಗಳು ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಗೌರವಿಸಿದರು.

ವಿಜಯ ಗುನ್ನಳ್ಳಿ ಅವರು ಉದ್ಯಮದ ಜತೆಗೆ ಶಿಕ್ಷಣ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಸದಸ್ಯರೂ ಆಗಿರುವ ಅವರು ಕ್ಲಬ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು ನುಡಿದರು.

ಕ್ಲಬ್ ಕಾರ್ಯದರ್ಶಿ ಸುಧೀಂದ್ರ ಸಿಂದೋಲ್, ಖಜಾಂಚಿ ಕಾಮಶೆಟ್ಟಿ ಚಿಕ್ಕಬಸೆ, ನಿಕಟಪೂರ್ವ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ, ಉಮೇಶ ಮೂಲಿಮನಿ, ಡಾ. ಶರಣ ಬುಳ್ಳಾ, ಸಚ್ಚಿದಾನಂದ ಚಿದ್ರೆ, ಚೇತನ ಮೇಗೂರ, ಭದ್ರಪ್ಪ ಮಿರಕಲ್, ಶಿವಕುಮಾರ ಪಾಖಲ್, ಡಾ. ರಿತೇಶ ಸುಲೆಗಾಂವ, ಡಾ. ಕಪಿಲ್ ಪಾಟೀಲ ಇದ್ದರು.