ರೋಜ್ಗಾರ್ ದಿವಸ್ ಆಚರಣೆ

ಸೇಡಂ, ಮೇ,17: ತಾಲೂಕಿನ ಬಟಗೇರಾ.ಬಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಾಲ್ಕು ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿಯೇ ನರೇಗಾ ಕೂಲಿ ಕಾರ್ಮಿಕರು ಹಾಗೂ ತಾಪಂ ನರೇಗಾ ಅಧಿಕಾರಿಗಳ ನೇತೃತ್ವದಲ್ಲಿ ರೋಜ್ಗಾರ್ ದಿವಸ್ ಆಚರಣೆ ಮಾಡಲಾಯಿತು. ಈ ವೇಳೆಯಲ್ಲಿ ನರೇಗಾ ಕೂಲಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ನರೇಗಾ ಅಧಿಕಾರಿ ಸಂತೋಷ್ ಪಾಟೀಲ್ ಅವರು ಹೊಸ ಕೂಲಿ ಮೊತ್ತ, ವೈಯಕ್ತಿಕ ಕಾಮಗಾರಿ ಕೃಷಿ ಹೋಂಡಾ, ಬದು ನಿರ್ಮಾಣ ರೇಷ್ಮೆ ತೋಟಗಾರಿಕೆ ಕೆಲಸಗಳ ಹಾಗೂ ಈಶ್ರಮಾ, ಲೇಬರ್ ಕಾರ್ಡ್ ಹಾಗೂ ಉನ್ನತಿ ಯೋಜನೆ ಅಡಿ ನೂರು ದಿನಗಳು ಪೂರ್ಣಗೊಳಿಸಿದ ದವರಿಗೆ ಹೈನುಗಾರಿಕೆ, ಕುರಿ ಸಾಕಾಣಿಕೆ ತರಬೇತಿ ನೀಡಲಾಗುವುದು ಇವುಗಳ ಸದುಪಯೋಗ ಪಡೆಯಲು ಕೂಲಿ ಕಾರ್ಮಿಕರಿಗೆ ತಿಳಿಸಿದರು.