ರೋಚಕವಾಗಿ ಪ್ಲೇ ಆಫ್ ಪ್ರವೇಶಿಸಿದ ಆರ್ಸಿಬಿ

ಬೆಂಗಳೂರು: ರೋಚಕ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಆರ್ಸಿಬಿ ಪ್ಲೇಆಫ್ ಪ್ರವೇಶಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 27 ರನ್ಗಳ ಗೆದ್ದು ಬೀಗಿದೆ. ಸತತ 6 ಪಂದ್ಯಗಳನ್ನು ಗೆದ್ದಿದೆ. ಚೆನ್ನೈ ಟೂರ್ನಿಯಿಂದ ಹೊರಬಿದ್ದಿದೆ.
ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಚೆನ್ನೈ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು.
ಕೊನೆಯ ಓವರ್ನಲ್ಲಿ ಚೆನ್ನೈ ತಂಡಕ್ಕೆ ಗೆಲ್ಲಲು 17ರನ್ ಬೇಕಿತ್ತು. ಮೊದಲ ಎಸೆತವನ್ನು ಧೋನಿ ಸಿಕ್ಸರ್ಗೆ ಅಟ್ಟಿದರು.
ಎರಡನೆ ಎಸೆತದಲ್ಲಿ ಧೋನಿ ಸ್ವಪ್ನಿಲ್ ಸಿಂಗ್ಗೆ ಕ್ಯಾಚ್ ನೀಡಿ ಹೊರನಡೆದರು. ಇದರೊಂದಿಗೆ ಧೋನಿ ಐಪಿಎಲ್ಗೆ ಗುಡ್ ಬೈ ಹೇಳಿದರು.ಧೋನಿ ಔಟ್ ಆಗಿದ್ದು ಪಂದ್ಯಕ್ಕೆ ದೊಡ್ಡ ತಿರುವು ನೀಡಿತು.ನಂತರ ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ 1 ರನ್ ಹೊಡೆಯುವಲ್ಲಿ ಮಾತ್ರ ಶಕ್ತರಾದರು. ಕೊನೆಯ ಎರಡು ಎಸೆತಗಳಲ್ಲಿ ಜಡೇಜಾ ರನ್ ಹೊಡೆಯದೇ ವಿಫಲರಾದರು.ಆರ್ಸಿಬಿ ಆಟಗಾರರು ಸಂಭ್ರಮಿಸಿದರು. ಎಡಗೈ ವೇಗಿ ಯಶ್ ದಯಾಳ್ ಅದ್ಬುತ ಬೌಲಿಂಗ್ ಮೂಲಕ ಗಮನ ಸೆಳೆದರು.
ಚೆನ್ನೈ ಪರ ನಾಯಕ ಋತುರಾಜ್ ಗಾಯ್ಕ್ವಾಡ್ 0,ರಚಿನ್ ರವೀಂದ್ರ 61, ಡ್ಯಾರಿಲ್ ಮಿಚೆಲ್ 4,ಅಜಿಂಕ್ಯ ರಹಾನೆ 33,ಶಿವಂ ದುಬೆ 7, ರವೀಂದ್ರ ಜಡೇಜಾ 42, ಸ್ಯಾಂಟ್ನರ್ 3, ಧೋನಿ 25,ಶಾರ್ದೂಲ್ ಠಾಕೂರ್ ಅಜೇಯ 1 ರನ್ ಗಳಿಸಿದರು.
ಆರ್ಸಿಬಿ ಪರ ಗ್ಲೇನ್ ಮ್ಯಾಕ್ಸ ವೆಲ್ 25ಕ್ಕೆ 1, ಯಶ್ ದಯಾಳ್ 42ಕ್ಕೆ 2,ಸಿರಾಜ್ 35ಕ್ಕೆ 1, ಫರ್ಗ್ಯೂಸ್ನ್ 39ಕ್ಕೆ 1.ಗ್ರೀನ್ 18ಕ್ಕೆ 1
ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಆರ್ಸಿಬಿಗೆ ನಾಯಕ ಫಾಫ್ ಡುಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ‘ ಮೊದಲ ವಿಕೆಟ್ಗೆ 78 ರನ್ ಹೊಡೆದರು. ಮಳೆ ಬಂದಿದ್ದರಿಂದ ಪಂದ್ಯ ಕೆಲ ಕಾಲ ಸ್ಥಗಿತಗೊಂಡಿತ್ತು.
ನಂತರ ಸ್ಯಾಂಟ್ನರ್ ದಾಳಿಗಿಳಿದು ವಿರಾಟ್ ಕೊಹ್ಲಿ (47ರನ್) ಮತ್ತು ಫಾಫ್ ಡುಪ್ಲೆಸಿಸ್ಗೆ (54ರನ್) ಅವರುಗಳನ್ನು ಪೆವಿಲಿಯನ್ಗೆ ಅಟ್ಟಿದರು.ರಜತ್ ಪಾಟಿಧಾರ್ 41, ಕ್ಯಾಮಾರಾನ್ ಗ್ರೀನ್ 38, ದಿನೇಶ್ ಕಾರ್ತಿಕ್ 14,
ಗ್ಲೇನ್ ಮ್ಯಾಕ್ಸ್ ವೆಲ್ 16 ರನ್ ಗಳಿಸಿದರು.
ಚೆನ್ನೈ ಪರ ಶಾರ್ದೂಲ್ ಠಾಕೂರ್ 61ಕ್ಕೆ 2, ತುಷಾರ್ ದೇಶಪಾಂಡೆ 49ಕ್ಕೆ 1, ಸ್ಯಾಂಟ್ನರ್ 23ಕ್ಕೆ 1 ವಿಕೆಟ್ ಪಡೆದರು.