ರೋಗ ಲಕ್ಷಣ ಬಂದರೆ ಪರೀಕ್ಷೆಗೆ ಒಳಪಡಿ: ಡಿ.ಸಿ ಸೂಚನೆ

ಚಿಕ್ಕಬಳ್ಳಾಪುರ,ಏ.೩೦- ಜ್ವರ, ಕೆಮ್ಮು, ಶೀತ ಹೀಗೆ ಏನೇ ರೋಗ ಲಕ್ಷಣಗಳು ಕಾಣಿಸಿಕೊಂಡರೂ ತಕ್ಷಣವೇ ಕೋವಿಡ್ ಪರೀಕ್ಷೆ ಮಾಡಿಕೊಳ್ಳುವುದರಿಂದ ಮುಂದಾ ಗುವ ಅನಾಹುತಗಳನ್ನು ತಪ್ಪಿಸ ಬಹುದು ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದರು.
ಅವರು ಗುರುವಾರ ತಾಲೂ ಕಿನ ಮಂಚನಬಲೆ ಗ್ರಾಮದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಖುದ್ದು ಗ್ರಾಮಕ್ಕೆ ಭೇಟಿ ನೀಡಿ ಟಾಸ್ಕ್ ಪೋರ್ಸ್ ಸಮಿತಿಗಳ ಕಾರ್ಯ ವೈಖರಿಯನ್ನು ಪರಿಶೀಲಿಸಿದರು ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.
ನಾವು ವಯಸ್ಸಿನಲ್ಲಿ ಚಿಕ್ಕವರಿದ್ದೇವೆ. ಕೋವಿಡ್ ಏನೂ ಮಾಡಲ್ಲ ಕೋವಿಡ್ ಅನ್ನು ತಡೆದುಕೊಳ್ಳುತ್ತೇವೆಂದು ಕೋವಿಡ್ ಗಂಟಲು ದ್ರವ ಪರೀಕ್ಷೆ ಮಾಡಿಸಿ ಕೊಳ್ಳದೇ ನಿರ್ಲಕ್ಷ ವಹಿಸುವು ದರಿಂದ ಸಾವು ಸಂಭವಿಸುತ್ತವೆ. ಪ್ರಸ್ತುತ ಈ ಸಂಕಷ್ಟದ ಅವಧಿಯಲ್ಲಿ ಪ್ರತಿಯೊಂದು ದಿನವೂ ಮಹತ್ವ ವಾಗಿದ್ದು, ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೊಂಕು ದೃಢ ಪಟ್ಟು ಯಾವುದೇ ರೋಗ ಲಕ್ಷಣಗಳಿದ್ದಲ್ಲಿ ನಮ್ಮ ಆರೋಗ್ಯ ಅಧಿಕಾರಿಗಳು ಅಥವಾ ಟಾಸ್ಕ್ ಪೋರ್ಸ್ ಸಮಿತಿಗಳ ಸದಸ್ಯರನ್ನು ಸಂಪರ್ಕಿಸಿ ಕೋವಿಡ್ ಕೇರ್ ಕೇಂದ್ರಗಳಲ್ಲಿ ಕ್ವಾರಂಟೈನ್ ಇರಬಹುದು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಹತ್ತಿರದ ಕೋವಿಡ್ ಆಸ್ಪತ್ರೆಗಳಲ್ಲಿ ದಾಖಲಾಗಬಹುದು ಎಂದರು.
ಪ್ರಕರಣ ದಾಖಲಿಸಲು ಸೂಚನೆ: ಕೋವಿಡ್ ಸೊಂಕು ದೃಢ ಪಟ್ಟು ಯಾವುದೇ ಮಾಸ್ಕ್ ಧರಿಸದೇ ಹಾಗೂ ಕೋವಿಡ್ ಮಾರ್ಗ ಸೂಚಿಗಳನ್ನು ಉಲ್ಲಂಘಿಸಿ ಮಂಚನಬಲೆ ಗ್ರಾಮ ವ್ಯಾಪ್ತಿಯ ಈತಮಾಕಲಹಳ್ಳಿಯಲ್ಲಿ ಕೆಲವರು ಬೇಕಾಬಿಟ್ಟಿಯಾಗಿ ಒಡಾಡುತ್ತಿರುವ ಬಗ್ಗೆ ಆಶಾ ಕಾರ್ಯಕರ್ತೆಯರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಸ್ಪಂಧಿಸಿದ ಡಿಸಿ ಅವರು, ಅಂತಹವರ ಮೇಲೆ ಕೂಡಲೇ ಪ್ರಕರಣ ದಾಖಲಿಸಿ ಕೋವಿಡ್ ಕೇರ್ ಸೆಂಟರ್ ಗೆ ಸೇರಿಸುವಂತೆ ಸ್ಥಳದಲ್ಲೇ ಪೊಲೀಸ್ ಅಧಿಕಾರಿಗಳಿಗೆ ಹಾಗೂ ತಾಲೂಕು ಕೋವಿಡ್ ನೋಡಲ್ ಅಧಿಕಾರಿ ಗಳಿಗೆ ಆದೇಶಿಸಿದರು. ಅಲ್ಲದೆ, ಕೋವಿಡ್ ನಿಯಮಗಳನ್ನು ಉಲ್ಲಂ ಘಿಸುವವರನ್ನು ತರಾಟೆಗೆ ತೆಗೆದು ಕೊಂಡರು. ಕೋವಿಡ್ ಕರ್ತವ್ಯ ನಿರ್ವಹಿಸುತ್ತಿರುವ ಟಾಸ್ಕ್ ಪೋರ್ಸ್ ಸಮಿತಿಯ ಸದಸ್ಯರು ಗಳಿಗೆ ಆಶಾ ಕಾರ್ಯಕರ್ತೆಯರಿಗೆ ಗೌರವ ಕೊಟ್ಟು ಕೋವಿಡ್ ಕರ್ತವ್ಯ ನಿರ್ವಹಿಸಲು ಸ್ಫೂರ್ತಿ ನೀಡಬೇಕು. ಅವರ ಕರ್ತವ್ಯಗಳಿಗೆ ಅಡ್ಡಿ ಪಡಿಸಿ ದರೆ ಮುಲಾಜಿಲ್ಲದೇ ಕಾನೂನು ಶಿಸ್ತುಕ್ರಮ ಜರುಗಿಸಬೇಕು ಎಂದರು.
ಆರ್ಟಿಪಿಸಿಆರ್ ಪರೀಕ್ಷೆ ಯಲ್ಲಿ ಕೋವಿಡ್ ನೆಗೆಟೀವ್ ವರದಿ ಬಂದಿದ್ದು, ಕೋವಿಡ್ ರೋಗ ಲಕ್ಷಣಗಳಿದ್ದಲ್ಲಿ ಅವರನ್ನು ಸಹ ಕೋವಿಡ್ ರೋಗಿಗಳೆಂದು ಭಾವಿಸಿ ಚಿಕಿತ್ಸೆ ನೀಡಬೇಕೆಂದು ಸರ್ಕಾರ ಆದೇಶಿಸಿದ್ದು, ಅದರಂತೆ ಆರೋಗ್ಯ ಇಲಾಖೆಯ ಅಧಿಕಾರಿ ಗಳು ಕ್ರಮ ವಹಿಸಬೇಕು. ಒಟ್ಟಾರೆ, ಯಾರೊಬ್ಬರೂ ಚಿಕಿತ್ಸೆ ಸಿಗದೇ ಸಾವು ಸಂಭವಿಸದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಭೇಟಿಗೆ ಶ್ಲಾಘನೆ: ಮಾನ್ಯ ಜಿಲ್ಲಾಧಿಕಾರಿಗಳು ಸರಣಿಯೋಪಾಧಿಯಲ್ಲಿ ಗ್ರಾಮಾ ಂತರ ಪ್ರದೇಶಗಳ ಪ್ರತಿ ಹಳ್ಳಿಗಳಿಗೆ ಹಾಗೂ ನಗರ ಪ್ರದೇಶಗಳ ಪ್ರತಿ ವಾರ್ಡ್ ಗಳಿಗೆ ಖುದ್ದು ಭೇಟಿ ನೀಡಿ ಕೋವಿಡ್ ಸೊಂಕಿತರನ್ನು ಹಾಗೂ ಸೊಂಕಿನಿಂದ ಗುಣಮುಖ ರಾಗಿ ಹೋಂ ಐಸೊಲೇಷನ್ ನಲ್ಲಿ ಇರುವವರನ್ನು ಭೇಟಿ ಮಾಡಿ, ವಿಡಿಯೋ ಸಂವಾದದ ಮೂಲಕ ಅವರ ಯೋಗ ಕ್ಷೇಮ ವಿಚಾರಿಸು ತ್ತಿದ್ದಾರೆ. ಅದರಂತೆ ೨೮ ಸಕ್ರಿಯ ಪ್ರಕರಣಗಳಿರುವ ನಮ್ಮ ಗ್ರಾಮ ಪಂಚಾಯಿತಿಗೆ ಇಂದು ಭೇಟಿ ನೀಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಕೋವಿಡ್ ಜಾಗೃತಿ ಮೂಡಿಸಿರುವುದು ನಮ್ಮ ಟಾಸ್ಕ್ ಪೋರ್ಸ್ ಸಮಿತಿಗೆ ಧೈರ್ಯಬಂದಿದೆ. ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಅನುಸರಿಸಿ ನಮ್ಮ ಗ್ರಾ.ಪಂ ಯಿಂದ ಕೋವಿಡ್ ನಿರ್ಮೂಲನೆ ಮಾಡು ವುದಾಗಿ ಮಂಚನಬಲೆ ಗ್ರಾಪಂಯ ಉಪಾಧ್ಯಕ್ಷರಾದ ಶ್ರೀಧರ್ ಅವರು ತಿಳಿಸಿ, ಜಿಲ್ಲಾಧಿಕಾರಿಗಳ ಭೇಟಿಗೆ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ತಾಲೂಕು ನೋಡಲ್ ಅಧಿಕಾರಿ ಭಾಸ್ಕರ್, ಗ್ರಾಪಂ ಅಧ್ಯಕ್ಷರಾದ ಗಾಯತ್ರಮ್ಮ ಮತ್ತು ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿಗಳು ಹಾಗೂ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.