ರೋಗಿಗಳ ಪಾಲಿನ ಆಪ್ತರಕ್ಷಕ ರಕ್ತದಾನಿ: ಮೈಬೂಬ್ ಖುರೇಶಿ

ವಡಗೇರಾ:ಜೂ.15: ವಿಶ್ವ ರಕ್ತದಾನಿಗಳ ದಿನಾಚರಣೆ ನಿಮಿತ್ ಪಟ್ಟಣದ ರಕ್ತ ದಾನಿ ಮಹೆಬೂಬ್ ಖುರೇಶಿ ಕುರಿತು ಈ ಲೇಖನ ಈತನು ಮಹಿಳೆಯರ ಹೆರಿಗೆ ಸಮಯ ಮತ್ತು ಅಪಘಾತವಾದಾಗ ಯಾರಿಗಾದರೂ ರಕ್ತದ ಸಮಸ್ಯೆ ಅಂತ ಕರೆ ಬಂದರೆ ಸಾಕು ಹಿಂದೂ ಮುಸ್ಲಿಂ ಅಂತ ಇಂದು ಮುಂದೆ ನೋಡದೆ ಆಸ್ಪತ್ರೆಗೆ ತೆರಳಿ ಉಚಿತ ರಕ್ತದಾನ ಮಾಡಿ ಬರುತ್ತಾನೆ ಒಂದು ರೂಪಾಯಿ ಕೂಡ ಅವರಿಂದ ತೆಗೆದುಕೊಳ್ಳುವುದಿಲ್ಲ ಸುಮಾರು ಇಲ್ಲಿಯವರೆಗೆ 20.ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದೇನೆ . ನಾನು ಚಿಕ್ಕ ವಯಸ್ಸಿನಿಂದಲೂ ಕೂಡ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಎಲ್ಲರೊಂದಿಗೆ ಬೆರೆತು ಎಲ್ಲಾ ಸಮಾಜದ ಬಂಧುಗಳೊಂದಿಗೆ ಪ್ರೀತಿ ವಿಶ್ವಾಸದಿಂದ ಇರುತ್ತೇನೆ ಕಷ್ಟ ಅಂತ ಯಾರೆ ಬಂದರು ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ ರಕ್ತ ಒಬ್ಬ ವ್ಯಕ್ತಿಯ ಜೀವ ಉಳಿಸುವಂತಹ ಸಂಜೀವಿನಿ ಅದು ಆದರೆ ರಕ್ತದಾನ ಮಾಡಲು ಬಹಳಷ್ಟು ಜನ ಹಿಂದೇಟು ಹಾಕುತ್ತಾರೆ ಅದು ತಪ್ಪು ಕಲ್ಪನೆ ರಕ್ತದಾನ ಮಾಡುವುದರಿಂದ ಮನುಷ್ಯನ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಯಾವುದೇ ಪ್ರೀತಿಯ ಕಾಯಿಲೆಗಳು ಹರಡುವುದಿಲ್ಲ ಮನುಷ್ಯನು ಆರೋಗ್ಯವಂತನಾಗಿರುತ್ತಾನೆ ಆದ್ದರಿಂದ ಪ್ರತಿಯೊಬ್ಬರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದಾಗಬೇಕು ನಾನು ಕೂಡಾ ತುರ್ತಾ ಅಪಘಾತ ಹೇರಿಗೆ ಸಮಯದಲ್ಲಿ ಉಚಿತವಾಗಿ ರಕ್ತದಾನ ಮಾಡಿ ಬರುತ್ತೇನೆ ಎಂದು ತಮ್ಮ ಸಮಾಜಮುಖಿ ಕೆಲಸದ ಕುರಿತು ಪತ್ರಿಕೆಯೊಂದಿಗೆ ಮುಕ್ತವಾಗಿ ಹಂಚಿಕೊಂಡರು. ಮೈಬೂಬ್ ಖುರೇಶಿ. ವಡಗೇರಾ. ಮೊಬೈಲ್ ಸಂಖ್ಯೆ.9980534785