ರೋಗಿಗಳು ಆರೋಗ್ಯ ಕಾಳಜಿ ವಹಿಸುವ ಅಗತ್ಯ – ಡಾ. ವೆಂಕಟೇಶ ನಾಯಕ

ಗುಣಮುಖರಾದ ರೋಗಿಗಳಿಗೆ ವೈದ್ಯಕೀಯ ಕಿಟ್ ವಿತರಣೆ
ರಾಯಚೂರು.ಜೂ.೧೦- ತಾಲೂಕಿನ ಸಿಂಗನೊಡಿ ಮತ್ತು ಚಂದ್ರಬಂಡಾ ಗ್ರಾಮದಲ್ಲಿ ನಿಮಗಾಗಿ ನಾವು ( ಗಿ೪U) ಸಂಸ್ಥೆ ವತಿಯಿಂದ ಕೋವಿಡ ಗುಣಮುಖ ಹೊಂದಿದ ರೋಗಿಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥಗಳು ಹಾಗೂ ವೈದ್ಯಕೀಯ ಕಿಟ್ ವಿತರಿಸಲಾಯಿತು.
ಡಾ. ವೆಂಕಟೇಶ ನಾಯಕ ಮಾತನಾಡಿ, ಕೋವಿಡ ಗುಣಮುಖ ಹೊಂದಿದ ರೋಗಿಗಳಲ್ಲಿ ಅಡ್ಡ ಪರಿಣಾಮಗಳು ಆಗುತ್ತಿದ್ದು, ರೋಗಿಗಳು ಆರೋಗ್ಯದ ಕಾಳಜಿ ವಹಿಸುವುದು ಮುಖ್ಯವಾಗಿದೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥಗಳ ಜೊತೆಯಲ್ಲಿ ಮಾತ್ರೆಗಳು, ಪ್ರೋಟಿನ್ ಪೌಡರ್ ಗಳ ಸೇವಿಸಬೇಕು ಎಂದರು.
ನಿಮಗಾಗಿ ನಾವು ( ಗಿ೪U) ಸಂಸ್ಥೆಯು ಕೋವಿಡ ಸಂಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುತ್ತಿದ್ದು, ರೋಗಿಗಳು ಹಾಗೂ ಸಂಬಂಧಿಕರಿಗೆ ಪ್ರತಿನಿತ್ಯ ಆಸ್ಪತ್ರೆಗಳಲ್ಲಿ ಉಚಿತವಾಗಿ ಉಪಹಾರ ಉಟದ ವ್ಯವಸ್ಥೆ ಮಾಡುತ್ತಿದೆ. ರೋಗಿಗಳಿಗೆ ಸಹಾಯಕ್ಕಾಗಿ ಕಾಲ್ ಸೆಂಟರ್,ಉಚಿತವಾಗಿ ತಜ್ಞ ವೈದ್ಯರೊಂದಿಗೆ ಸಮಾಲೋಚನೆ,ಅಲ್ಲದೆ ಕೋವಿಡನಿಂದ ಮೃತಪಟ್ಟವರನ್ನು ಕೂಡ ಈ ಸಂಸ್ಥೆಯ ಸದಸ್ಯರು ತಾವೆ ಮುಂದೆ ನಿಂತು ಶವ ಸಂಸ್ಕಾರ ಮಾಡಿದ್ದಾರೆ, ಇಂತಹ ಸೇವಾಕಾರ್ಯ ಇನ್ನೊಬ್ಬರಿಗೆ ಪ್ರೇರಣಾದಾಯಕವಾಗಿದೆ ಎಂದರು.
ಇದೇ ವೇಳೆ ಕೋವಿಡ ಗುಣಮುಖ ಹೊಂದಿದ ರೋಗಿಗಳಿಗೆ, ಐರನ್ ಟಾನಿಕ್, ಸ್ಯಾನಿಟೈಜರ್, ಮಾಸ್ಕ್ ಪ್ರೋಟಿನ್ ಪೌಡರ್ ಹೊಂದಿರುವ ವೈದ್ಯಕೀಯ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾ ಪಂಅಧ್ಯಕ್ಷ ಕೃಷ್ಣಪ್ಪ ನಾಯಕ,ಉಪಾಧ್ಯಕ್ಷರು, ಸಂಸ್ಥೆಯ ಕೇಂದ್ರ ಸಂಚಾಲಕರಾದ ರಾಜೇಂದ್ರ ಕುಮಾರ್ ಶಿವಾಳೆ
ಸಂಚಾಲಕರಾದ ಸಂದೀಪ ಸಿಂಗನೊಡಿ, ರಂಗರಾವ್ ಕುಲಕರ್ಣಿ, ಸಂಧ್ಯಾ, ವೆಂಕಟೇಶ, ಮಹೇಶ, ಎಂ.ಎಲ್.ಹೆಚ್.ಪಿ ಹಾಗೂ ಅಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.