ರೋಗಿಗಳಿಗೆ ಹಾಲು, ಹಣ್ಣು ವಿತರಣೆ

ಬಾಗಲಕೋಟೆ, ಜೂ1: ಜಿಲ್ಲೆಯಲ್ಲಿ ಸಾರ್ವಜನಿಕರ ಆರೋಗ್ಯ ಸುಧಾರಣೆಗಾಗಿ ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರ ಕೊಡುಗೆ ಅನನ್ಯವಾದದ್ದು. ಬಡವರಿಗೆ ಮತ್ತು ಅಸಾಹಾಯಕರಿಗೆ ಕೈಗೆಟಕುವ ದರದಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸುವ ಉದ್ದೇಶದೊಂದಿಗೆ ಸ್ಥಾಪಿಸಿದ ಕುಮಾರೇಶ್ವರ ಆಸ್ಪತ್ರೆ ಆರೋಗ್ಯ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸುಪರ್ ಸ್ಪೆಷಾಲಿಟಿಯಂಥ ವೈದ್ಯಕೀಯ ಸೌಲಭ್ಯ ಬಾಗಲಕೋಟೆಯಲ್ಲಿ ದೊರೆಯಲು ಪ್ರತ್ಯೇಕ ಸುಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುತ್ತಿರುವುದು ಡಾ.ವೀರಣ್ಣ ಚರಂತಿಮಠ ಅವರ ಕ್ರಿಯಾಶೀಲತೆಗೊಂದು ದೃಷ್ಟಾಂತವಾಗಿದೆ’ ಎಂದು ಬಿ.ವಿ.ವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ) ಅವರು ಹೇಳಿದರು.
ಜುಲೈ 31 ರಂದು ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರ ಜನ್ಮದಿನದ ಪ್ರಯುಕ್ತ ಕುಮಾರೇಶ್ವರ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಹಾಲು ಮತ್ತು ಬ್ರೆಡ್ ವಿತರಿಸಿದ ಅಶೋಕ ಸಜ್ಜನ (ಬೇವೂರ) ‘ಡಾ.ವೀರಣ್ಣ ಚರಂತಿಮಠ ಅವರ ಅವಿರತ ಶ್ರಮದ ಪರಿಣಾಮ ಕುಮಾರೇಶ್ವರ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಎಲ್ಲ ಪ್ರಕಾರದ ವೈದ್ಯಕೀಯ ಸೌಲಭ್ಯ ದೊರೆಯುವಂತಾಗಿದೆ. ಆಸ್ಪತ್ರೆಯ ಇಂದಿನ ಬೆಳವಣಿಗೆಯ ಹಿಂದೆ ಡಾ.ವೀರಣ್ಣ ಚರಂತಿಮಠ ಅವರ ನಿರಂತರ ಪ್ರಯತ್ನ, ಅಪಾರ ಶ್ರಮ ಮತ್ತು ಮಾರ್ಗದರ್ಶನವಿದೆ. ಅವರ ಸಾಮಾಜಿಕ ಕಾಳಜಿ ಬಾಗಲಕೋಟೆಯಲ್ಲಿ ಆರೋಗ್ಯ ಧಾಮದ ರೂಪದಲ್ಲಿ ಸಾಕಾರಗೊಂಡಿದೆ. ಜನ್ಮದಿನದ ಈ ಶುಭ ಸಂದರ್ಭ ದೇವರು ಅವರಿಗೆ ಆಯುರಾರೋಗ್ಯವನ್ನು ನೀಡಲೆಂದು ಪ್ರಾರ್ಥಿಸುತ್ತೇವೆ’ ಎಂದು ನುಡಿದರು.
ಈ ಸಂದರ್ಭದಲ್ಲಿ ಬಿ.ವಿ.ವಿ ಸಂಘದ ಹಾಸ್ಟಲ್ ಕಮಿಟಿ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ (ಚಿತ್ತರಗಿ), ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ, ಡೆಂಟಲ್ ಕಾಲೇಜ್ ಪ್ರಾಚಾರ್ಯ ಡಾ.ಶ್ರೀನಿವಾಸ ವನಕಿ, ನರ್ಸಿಂಗ್ ಕಾಲೇಜ್ ಪ್ರಾಚಾರ್ಯ ಡಾ.ಜಯಶ್ರೀ ಇಟ್ಟಿ ಮತ್ತು ಡಾ.ಪ್ರವೀಣ ಪಾಟೀಲ, ವೈದ್ಯರಾದ ಡಾ.ಕಲಬುರ್ಗಿ, ಡಾ.ಕೋರಾ, ಡಾ.ಪೆÇಳ, ಡಾ.ಮುತಾಲಿಕ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.