
ಕಲಬುರಗಿ,ಜು 10: ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು,ಮೊಟ್ಟೆ ಉಪಹಾರವನ್ನು ಕಡ್ಡಾಯವಾಗಿ ನೀಡಲು
ಕರವೇ,ಕಾವಲುಪಡೆ ರಾಜ್ಯ ವಕ್ತಾರ ಮಂಜುನಾಥ ನಾಲವಾರಕರ್ ಮನವಿ ಮಾಡಿದ್ದಾರೆ.
ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು,ಮೊಟ್ಟೆ ಸೇರಿದಂತೆ ಉಪಹಾರ ಊಟ ಸರಿಯಾಗಿ ರೀತಿಯಲ್ಲಿ ವಿತರಣೆ ಮಾಡುತ್ತಿಲ್ಲ.ಆದ್ದರಿಂದ ಕೂಡಲೇ ಇದರ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.