ರೋಗಿಗಳಿಗೆ ಹಣ್ಣುಹಂಪಲ ಮಾಸ್ಕ್, ಸ್ಯಾನಿಟೈಸರ್ ವಿತರಣೆ

ಬೀದರ:ಮೇ.21: ಇಂದು ಬೀದರ ಬಿಜೆಪಿ ನಗರ ಮಂಡಳಿ ವತಿಯಿಂದ ಬಿಡಿಎ ಅಧ್ಯಕ್ಷರಾದ ಬಾಬು ವಾಲಿಯವರ 52ನೇ ಹುಟ್ಟುಹಬ್ಬವನ್ನು ಕೊರೊನಾ ಮಹಾಮಾರಿಯ ಬಗ್ಗೆ ಜಾಗೃತಿ ಮೂಡಿಸುವುದರ ರೀತಿಯಲ್ಲಿ ಆಚರಿಸಲಾಯಿತ್ತು. ವಿಶೇಷವಾಗಿ ಸಾಯಿ ಕಾಲೋನಿಯ ಸಾಯಿ ಮಂದಿರದಲ್ಲಿ ಪೂಜೆ ಮಾಡಲಾಯಿತು. ತದ ನಂತರ ಸ್ಪರ್ಶ ಆಸ್ಪತ್ರೆಗೆ ಹೋಗಿ ಡಾ.ಲೋಕೇಶ್‍ರವರ ಉಪಸ್ಥಿತಿಯಲ್ಲಿ 50 ರೋಗಿಗಳಿಗೆ ಹಣ್ಣು-ಹಂಪಲು, ಸ್ಯಾನಿಟೈಸರ್ ಹಾಗೂ ಮಾಸ್ಕ್‍ಗಳನ್ನು ನಗರಾಧ್ಯಕ್ಷ ಹಣಮಂತ ಬುಳ್ಳಾ ವಿತರಿಸಿದರು.
ಈ ಸಂದರ್ಭದಲ್ಲಿ ನಗರ ಪ್ರಾಧಿಕಾರ ಕಾರ್ಯದರ್ಶಿ ಸುನೀಲ ಗೌಳಿ, ಕಾರ್ಯದರ್ಶಿ ನರೇಶ ಗೌಳಿ, ದೇವೆಂಂದ್ರ ಎಮೆಕರ್, ಹೇಮಂತ್ ಜೋಶಿ, ವಿಶಾಲ ಅತ್ತಿವಾಳೆ, ಕಲ್ಯಾಣರಾವ ಬಿರಾದರ್, ನಿತೀನ್ ನವಲಕ್ಕೆ, ನಿತೀನ ಕರ್‍ಪೂರ್, ಭೂಷಣ್ ಪಾಟಖ್, ಪವನ ಕುಂಡೆ ಇತರರಿದ್ದರು.