ರೋಗಿಗಳಿಗೆ ಹಣ್ಣುಹಂಪಲುಗಳ ವಿತರಣೆ


ಜಗಳೂರು, ನ.08-ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲ್ಲೂಕಿನ ಹಿರಿಯ ರಾಜಕಾರಣಿ ಹಾಗು ಕೆಪಿಸಿಸಿ ಕಾರ್ಯದರ್ಶಿ ಅಸಗೋಡು ಜಯಸಿಂಹ ಅವರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಳಗದ ವತಿಯಿಂದ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.  ಈ ವೇಳೆ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ತಾಲ್ಲೂಕಿನ ಪಕ್ಷದ ಸಂಘಟನೆಗೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಅಸಗೋಡು ಜಯಸಿಂಹ ಅವರು ಸದಾ ಕೈ ಜೋಡಿಸುವ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ. ಅಲ್ಲದೆ, ತಾಲ್ಲೂಕಿನ ಬಡವರ್ಗದ ಜನರು ಬೆಂಗಳೂರಿಗೆ ಅನ್ಯ ಕೆಲಸ ಕಾರ್ಯಗಳ ನಿಮಿತ್ತ ತೆರಳಿದಾಗ ಸಾಕಷ್ಟು ಸಹಕಾರ ನೀಡಿದ್ದಾರೆ. ಇಂತಹ ಸಜ್ಜನ ರಾಜಕಾರಣಿಯವರಿಗೆ ದೇವರು ಆಯುಷ್ಯ ಆರೋಗ್ಯ ಕರುಣಿಸಲಿ ಎಂದು ಹೇಳಿದರು.ಇದಕ್ಕೂ ಮುನ್ನ ಎನ್‌ಜಿಓ ಕಚೇರಿಯಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಸಿ.ವೇಣುಗೋಪಾಲರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಮಾಜಿ ಅಧ್ಯಕ್ಷ ಟಿ.ತಿಪ್ಪೇಸ್ವಾಮಿಗೌಡ, ಪಾಲನಾಯಕನಕೋಟೆ ಓಬಣ್ಣ, ಎಸ್‌ಸಿ ಘಟಕದ ತಿಪ್ಪೇಸ್ವಾಮಿ ಸಿ.,  ಗಿರೀಶ್ ಒಡೆಯರ್, ತಿಮ್ಮಾರೆಡ್ಡಿ, ಮಾಜಿ ತಾಪಂ ಸದಸ್ಯ ಎಸ್.ಆರ್.ಪುಟ್ಟಣ್ಣ, ಅಭಿಮಾನಿ ಬಳಗದ ಮರುಳಸಿದ್ದಪ್ಪ, ಚಂದ್ರಮ್ಮ, ಶಿವಣ್ಣ, ಮಾದಿಹಳ್ಳಿ ಗೋಣೇಶ್, ರಾಜಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಅಸಗೋಡು ರವಿಕುಮಾರ್, ಮುಖಂಡರಾದ ಅಜಂವುಲ್ಲಾ, ಪ್ರಸನ್ನ, ವಿಜಯ್, ಸುಧಾಕರ್ ರೆಡ್ಡಿ,  ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.