ರೋಗಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ

ಬೀದರ್:ಏ.05: ಜಿಲ್ಲಾ ಆಂಬುಲನ್ಸ್ ಮಾಲೀಕರ ಹಾಗೂ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪೀಟರ್ ಶ್ರೀಮಂಡಲ್ ಹಾಗೂ ಪ್ರಭು ಮೆಡಿಕಲ್ ಮಾಲೀಕ ಪ್ರಭಾಕರ ಮೈಲಾಪುರೆ ಅವರು ಇಲ್ಲಿಯ ಬ್ರಿಮ್ಸ್ ಆಸ್ಪತ್ರೆ ಎದುರು ರೋಗಿಗಳು ಹಾಗೂ ಸಾರ್ವಜನಿಕರಿಗೆ ತಂಪಾದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.
ಬೇಸಿಗೆ ಕಾರಣ ದೇಹಕ್ಕೆ ಪದೇ ಪದೇ ನೀರಿನ ಅವಶ್ಯಕತೆ ಇರುತ್ತದೆ. ಮಾನವೀಯ ನೆಲೆಯಲ್ಲಿ ಜನರ ಬಾಯಾರಿಕೆ ನೀಗಿಸಲು ಆರು ಬೃಹತ್ ರಂಜಣಗಿಗಳನ್ನು ಇಡಲಾಗಿದೆ ಎಂದು ಪೀಟರ್ ಶ್ರೀಮಂಡಲ್ ಹೇಳಿದರು.
ಬೇಸಿಗೆ ಮುಗಿಯುವವರೆಗೂ ಉಚಿತ ಕುಡಿಯುವ ನೀರಿನ ಸೇವೆ ಮುಂದುವರಿಯಲಿದೆ ಎಂದು ಪ್ರಭಾಕರ ಮೈಲಾಪುರೆ ತಿಳಿಸಿದರು.
ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ ಶೆಟಕಾರ, ಶಶಿ ಪಾಟೀಲ ಚೌಳಿ, ಸ್ಯಾಮಸನ್ ಚಿಲ್ಲರ್ಗಿ, ಪೀಟರ್ ಚಿಟಗುಪ್ಪ, ಸೈಮನ್ ಚಿಲ್ಲರ್ಗಿ, ಜಗನ್ನಾಥ ಕೌಠಾ, ಯಾಕೂಬ್ ಶ್ರೀಮಂಡಲ್ ಇದ್ದರು.