ರೋಗಿಗಳಿಗೆ ಕಿಟ್ ವಿತರಣೆ

ಬಾದಾಮಿ,ಮೇ 31: ಪುರಸಭೆ ವ್ಯಾಪ್ತಿಯಲ್ಲಿ ಬರುವ ಕೋವಿಡ್ ರೋಗಿಗಳಿಗೆ ಮತ್ತು ಹೋಮ್ ಐಸೋಲೇಶನ್ ರೋಗಿಗಳಿಗೆ ಸರಕಾರ ಕೊಡ ಮಾಡಿದ ಔಷಧೋಪಚಾರ ಕಿಟ್ ಗಳನ್ನು 750 ಜನರಿಗೆ ಇದುವರೆಗೆ ವಿತರಿಸಲಾಗಿದೆ ಎಂದು ಹಿರಿಯ ಆರೋಗ್ಯಾಧಿಕಾರಿ ರವಿಗೌಡ ಹೊತ್ತಗಿಗೌಡರ ಹೇಳಿದರು.
ಅವರು ಈಚೆಗೆ ನಗರ ಪ್ರದೇಶದ ಕೋವಿಡ್ ಲಕ್ಷಣವಿರುವ ಮತ್ತು ಲಕ್ಷಣರಹಿತ ರೋಗಿಗಳಿಗೂ ಈ ಔಷಧಿ ಕಿಟ್ ನ್ನು ವಿತರಿಸಿ ಮಾತನಾಡಿ ಇಂತಹ ರೋಗಿಗಳನ್ನು ಗುರುತಿಸಿ ಅಂಗನವಾಡಿ ಕಾರ್ಯಕರ್ತರ ಮೂಲಕ ಮನೆ ಮನೆಗೆ ತೆರಳಿ ವಿತರಿಸಲಾಗುತ್ತದೆ ಎಂದು ತಿಳಿಸಿದರು. ಮುಖ್ಯ ಆರೋಗ್ಯಾಧಿಕಾರಿ ಡಾ.ಬಿ.ಎಚ್.ರೇವಣಸಿದ್ದಪ್ಪ ಮಾತನಾಡಿ ಕೋವಿಡ್ ರೋಗಕ್ಕೆ ಭಯಪಡುವ ಅವಶ್ಯಕತೆ ಇಲ್ಲ ಈ ರೋಗವನ್ನು ನಿಯಂತ್ರಿಸಲು ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸಲಹೆ ನೀಡಿದರು. ಅಂಗನವಾಡಿ ಅಧಿಕ್ಷಕಿ ಲಲಿತಾ ಮಿಟ್ಟಲಕೋಡ, ಔಷಧಿ ಅಧಿಕಾರಿ ಚೆನ್ನವೀರ ಶ್ಯಾವಿ ಸೇರಿದಂತೆ ಕಾರ್ಯಕರ್ತೆಯರು ಭಾಗವಿಸಿದ್ದರು.