ರೋಗಿಗಳಿಗೆ ಉಚಿತ ಪ್ರಸಾದ ಸೇವೆ

ಬಾದಾಮಿ,ಮೇ18: ತಾಲೂಕಿನ ಕಾಟಾಪೂರ ಗ್ರಾಮದ ಶ್ರೀ ಸಾಯಿ ರಾಮ್ ಮತ್ತು ಸಾಯಿ ಬಾಬಾ ಮಂದಿರ ಇವರ ಸಹಯೋಗದಲ್ಲಿ ನಗರದ ಸರಕಾರಿ ತಾಲೂಕಾಸ್ಪತ್ರೆಯ ರೋಗಿಗಳಿಗೆ, ಕೋವಿಡ್ ರೋಗಿಗಳಿಗೆ, ಆಸ್ಪತ್ರೆಯ ಸಿಬ್ಬಂದಿಗಳಿಗೆ ಉಚಿತ ವಿಭೂತಿ ಮತ್ತು ಪ್ರಸಾದ(ಊಟ) ಸೇವೆಯನ್ನು ನೀಡಿ ಮಾನವೀಯತೆ ಮೆರೆದರು. ಇಡಿ ಜಗತ್ತಿನಲ್ಲಿ ಆವರಿಸಿರುವ ಕೊರೊನ ರೋಗ ಬೇಗ ಗುಣಮುಖರಾಗಲಿ, ಜಗತ್ತಿನಲ್ಲಿ ಆವರಿಸಿರುವ ಕೊರೊನ ಮುಕ್ತರಾಗಬೇಕು ಮತ್ತು ಆಸ್ಪತ್ರೆಯ ಸಿಬ್ಬಂದಿಗಳಿಗೆ ಯಾವುದೇ ಸಮಸ್ಯೆಯಾಗಬಾರದು ಎಂದು ದೇವರಲ್ಲಿ ಪ್ರಾರ್ಥನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಾಯಿ ಬಾಬಾ ಮಂದಿರದ ಭಕ್ತರಾದ ಪ್ರೇಮ ಕಲಾಲ, ಸಂಜಯ ಬರಗುಂಡಿ ಮತ್ತು ಕಲಾಲ ಕುಟುಂಬದವರು, ಯುವಕ ಮಿತ್ರರು ಹಾಜರಿದ್ದರು.