ರೋಗಿಗಳಿಗೆ ಆ್ಯಪ್‍ನಲ್ಲಿ ವೈದರ ಸಲಹೆ ಇ-ಸಂಜೀವಿನಿ: ಜಿಲ್ಲೆಯ 14 ಸಾವಿರ ಮಂದಿಗೆ ಆರೋಗ್ಯ ಸೇವೆ


ಚಿತ್ರದುರ್ಗ,ಮಾ.20: ಕೋವಿಡ್-19ರ ಸಂಕಷ್ಟದ ಸಂದರ್ಭದಲ್ಲಿ ಜನ ಸಾಮಾನ್ಯರ ಆರೋಗ್ಯ ಸಮಸ್ಯೆಗಳಿಗೆ ಉಚಿತವಾಗಿ ತುರ್ತು ವೈದ್ಯಕೀಯ ಸೇವೆ ಒದಗಿಸಲು ಕೇಂದ್ರ ಸರ್ಕಾರದ ಇ-ಸಂಜೀವಿನಿ ಟೆಲಿಕನ್ಸಲ್ಟೇಷನ್ ಸೇವೆಗೆ ಉತ್ತಮ ಸ್ಪಂದನೆ ದೊರೆತಿದ್ದು, ಜಿಲ್ಲೆಯ 14 ಸಾವಿರ ಮಂದಿ ಆರೋಗ್ಯ ಸೇವೆ ಪಡೆದಿದ್ದಾರೆ.
ಕೋವಿಡ್-19 ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದರಿಂದ ರೋಗಿಗಳು ವೈದ್ಯಕೀಯ ಸಲಹೆ ಅಥವಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ನೀಡಲು ಭಯಬೀತರಾಗಿರುವುದನ್ನು ಮನಗಂಡ ಸರ್ಕಾರ ರೋಗಿಗಳಿಗೆ ಈ ಸೇವೆಯನ್ನು ಉಚಿತವಾಗಿ ನೀಡಲು ಮುಂದಾಗಿತ್ತು.
ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದರೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ “ಟೆಲಿಕನ್ಸಲ್ಟೇಷನ್” ಸೇವೆಯನ್ನು ಮುಂದುವರೆಸಲಾಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ ಹಾಗೂ ಇ-ಸಂಜೀವಿನಿ ಟೆಲಿಕನ್ಸಲ್ಟೇಷನ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಸಿ.ವಿ. ಕಂಬಾಳಮಠ್ ಮನವಿ ಮಾಡಿದ್ದಾರೆ.  
ಏನಿದು ಟೆಲಿಕನ್ಸಲ್ಟೇಷನ್ ಸೇವೆ: ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗೆ ಬರಲು ಆಗದಿದ್ದವರಿಗೆ ವೈದ್ಯರ ಸಲಹೆ ಲಭ್ಯವಾಗಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಇ-ಸಂಜೀವಿನಿ ಕಾರ್ಯಕ್ರಮದಡಿ ಸಾಮಾನ್ಯ ಕಾಯಿಲೆಗಳಿಗೆ ಮನೆಯಲ್ಲಿಯೆ ಕುಳಿತು ತಮ್ಮ ಅಂತರ್ಜಾಲ ಸಂಪರ್ಕ ಹೊಂದಿರುವ ಆ್ಯಂಡ್ರಾಯಿಡ್ ಮೊಬೈಲ್ ಬಳಸಿ ಟೆಲಿಕನ್ಸಲ್ಟೇಷನ್ ವೈದ್ಯಕೀಯ ಸಲಹಾ ಸೌಲಭ್ಯ ಪಡೆಯಬಹುದಾಗಿದೆ.
ಟೆಲಿಕನ್ಸಲ್ಟೇಷನ್ ಸೇವೆ ಪಡಯುವ ವಿಧಾನ: ಮೊದಲಿಗೆ ಆ್ಯಂಡ್ರಾಯಿಡ್ ಮೊಬೈಲ್‍ನಿಂದ ಪ್ಲೇಸ್ಟೋರ್‍ನಲ್ಲಿ ಈ ಸಂಜೀವಿನಿ ಆ್ಯಪ್‍ನ್ನು ಡೌನ್‍ಲೋಡ್ ಮಾಡಿ ಇನ್ ಸ್ಟಾಲ್ ಮಾಡಬೇಕು. ನಂತರ ರೋಗಿಯ ಮೊಬೈಲ್ ನಂಬರ್‍ನ್ನು ಎಂಟರ್ ಮಾಡಿದರೆ ರೋಗಿಯ ಮೊಬೈಲ್‍ಗೆ ಒಟಿಪಿ ಬರುತ್ತದೆ. ನಂತರ ಪೂರ್ಣ ಮಾಹಿತಿಯನ್ನು ದಾಖಲಿಸಬೇಕು. ನಂತರ ಸೆಲೆಕ್ಟ್ ಜೆನರಲ್ ಓಟಿಪಿ ಅಥವಾ ಸ್ಪೆಷಾಲಿಟಿ ಓಟಿಪಿ ಆಯ್ಕೆ ಮಾಡಿ ಆರೋಗ್ಯ ದಾಖಲೆಗಳನ್ನು ಅಪ್‍ಲೋಡ್ ಮಾಡಿ ಟೋಕನ್ ಜನರೇಟ್ ಮಾಡಬೇಕು. (ಜನರೇಟ್ ಆದ ಟೋಕನ್‍ನ್ನು ಅದೇ ದಿನ ಬೆಳಿಗ್ಗೆ 8 ರಿಂದ ರಾತ್ರಿ 9 ಗಂಟೆವರೆಗೆ ಯಾವುದೇ ಸಮಯದಲ್ಲಿ ಉಪಯೋಗಿಸಬಹುದು) ನಂತರ ಮೊಬೈಲ್ ನಂಬರ್ ಮತ್ತು ಟೋಕನ್ ನಂಬರನ್ನು ಎಂಟ್ರಿ ಮಾಡಿ ಲಾಗಿನ್ ಆಗಬೇಕು. ರೋಗಿಗಳು ತಮ್ಮ ಸರದಿಯಾನುಸಾರ ಛಿಚಿಟಟ ಟಿoತಿ buಣಣeಟಿ ಛಿಟiಛಿಞ ಮಾಡಿದ ಮೇಲೆ ವಿಡಿಯೋ ಕಾಲ್ ಶುರುವಾಗುತ್ತದೆ. ಇದರಿಂದ ರೋಗಿಯು ತಜ್ಞ ವೈದ್ಯರೊಂದಿಗೆ ಸಮಾಲೋಚಿಸಿ ಉಚಿತವಾಗಿ ವೈದ್ಯಕೀಯ ಸಲಹೆ ಮತ್ತು ಸೇವೆಗಳನ್ನು ಪಡೆಯಬಹುದಾಗಿದೆ.
ಲಭ್ಯವಿರುವ ತಜ್ಞ ವೈದ್ಯರು ವಿಡಿಯೋ ಕಾಲ್ ಮೂಲಕ ರೋಗಿಯ ಆರೋಗ್ಯ ಸಮಸ್ಯೆಗಳನ್ನು ಆಲಿಸಿ ಸೂಕ್ತ ಚಿಕಿತ್ಸೆ ಸೂಚಿಸುವರು. “ಟೆಲಿ ಕನ್ಸ್‍ಲ್ಟೇಷನ್ ಮುಗಿದ ಮೇಲೆ ರೋಗಿಯ ಮೊಬೈಲ್‍ಗೆ Pಡಿesಛಿಡಿiಠಿಣioಟಿ ಐiಟಿಞ ಬರುತ್ತೆ ಅಗತ್ಯವಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಈ ಸೇವೆಯು ಪ್ರತಿ ದಿನ ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಲಭ್ಯವಿದ್ದು, ಜನಸಾಮಾನ್ಯರು ಈ ಸೇವೆಯನ್ನು ಸದ್ಭಳಕೆ ಮಾಡಿಕೊಳ್ಳಬಹುದಾಗಿದೆ.