ರೋಗದ ಭಯದಿಂದ ಪಾರಾಗಲು ಹಾಸ್ಯ ಸಹಾಯಕ:ಡಾ. ಬಂಡಯ್ಯ ಸ್ವಾಮಿ

ಬೀದರಃಸೆ.5: sಸಾಹಿತಿಗಳ ಮತ್ತು ಸಾಧಕರ ಮನೆಗೆ ಬಂದು ಮನೆಯಂಗಳದಲ್ಲಿ ಮಾತು ಎಂಬ ಅಪ್ಪಟ ಜಾನಪದ ಆಡು ಭಾಷೆಯ ಸೊಬಗನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ವಿನೂತನ ಮತ್ತು ವಿಶಿಷ್ಠವಾಗಿದ್ದು, ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಈ ಕಾರ್ಯದಿಂದ ಮೂಲೆ ಮೂಲೆಯಲ್ಲಿರುವ ಅನೇಕ ಪ್ರತಿಭಾವಂತರು ಬೆಳಕಿಗೆ ಬರುತಿದ್ದಾರೆ. ಹಾಗಾಗಿ ಎಲ್ಲರ ಮೆಚ್ಚುಗೆಗೆ ಈ ಪಾತ್ರವಾಗುತ್ತಿದೆ. ಕೊರೋನಾದಂತ ಭಯ ಹುಟ್ಟಿಸುವ ರೋಗದಿಂದ ಸಹ ಪಾರಾಗಲು ಇವರ ಹಾಸ್ಯ ಪ್ರೇರಣೆಯಾಗಿದೆ ಎಂದು ಆರ್ ಆರ್ ಕೆ ಕಾಲೇಜಿನ ಪ್ರಾಚಾರ್ಯರಾದ ಡಾ. ಬಂಡಯ್ಯ ಸ್ವಾಮಿ ನುಡಿದರು.

ಅವರು ದಿನಾಂಕ 3-9-2022 ರಂದು ಉಪನ್ಯಾಸಕರು ಹಾಗೂ ಹಾಸ್ಯ ಕಲಾವಿದರಾದ ಬಸವರಾಜ ಮೂಲಗೆ ಅವರ ಮನೆಯಲ್ಲಿ ನಡೆದ 59ನೇ ಮನೆಯಂಗಳದಲ್ಲಿ ಮಾತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅವರು ಮುಂದುವರೆದು ಬಸವರಾಜ ಮೂಲಗೆಯವರು ಮೃದು ಸ್ವಭಾವದವರು ಸದಾ ನಗುತ್ತ ನಗಿಸುತ್ತಾ ಇರುವರು. ಕಳೆದ 30 ವರ್ಷಗಳಿಂದಲೂ ನಾವು ಅವರ ಗೆಳೆಯರಾಗಿದ್ದೇವು. ಇಂದು ಅವರ ಪ್ರತಿಭೆಗೆ ಕಂಡು ಪರಿಷತ್ತು ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಅಭಿನಂದನೆ ತಿಳಿಸಿದರು.

ಬಸವರಾಜ ಮೂಲಗೆಯವರ ಜನ್ಮಸ್ಥಳ- ಮೋರ್ಗಿ ತಾ|| ನಾರಾಯಣಖೇಡ್ ಜಿ|| ಸಂಗಾರೆಡ್ಡಿ ರಾಜ್ಯ ತೆಲಂಗಾಣ

ಶಿಕ್ಷಣ- 1-5 ಮೋರ್ಗಿ ಗ್ರಾಮದ ಸರ್ಕಾರಿ ಶಾಲೆ, 6-7 ಬೀದರ ಸರ್ಕಾರಿ ಶಾಲೆ ರಂಗರೇಜ್ ಗಲ್ಲಿ, 8-10 ಸರ್ಕಾರಿ ಪ್ರೌಢಶಾಲೆ ಬಾಲಕರ ಬೀದರ, ಪಿಯುಸಿ ಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಮತ್ತು ಪದವಿಯಲ್ಲಿ ಬಿಎ ಕರ್ನಾಟಕ ಕಾಲೇಜು ಬೀದರ. ಬಿಇಡಿ ಬಸವೇಶ್ವರ ಮಹಾವಿದ್ಯಾಲಯ ಬೀದರ, ಸ್ನಾತಕೋತ್ತರ ಪದವಿ ಕನ್ನಡ ವಿಷಯ ಕೋಲ್ಹಾಪೂರ್ ಶಿವಾಜಿ ವಿಶ್ವವಿದ್ಯಾಲಯ, ವೃತ್ತಿ- 2 ವರ್ಷ ಸಮಾಜ ವಿಜ್ಞಾನ ಶಿಕ್ಷಕನಾಗಿ ಗುರಯ್ಯ ಬಚ್ಚ ಪ್ರೌಢಶಾಲೆ ಬೀದರ.

1 ವರ್ಷ ಮಾತೋಶ್ರೀ ಅಹಲ್ಯಾ ಬಾಯಿ ಹೋಳ್ಕರ್ ಪ್ರೌಢ ಶಾಲೆ ಬೀದರ. ಪ್ರಸ್ತುತ ಸೈಂಟ್ ಜೋಸೆಫ್ ಸಂಯುಕ್ತ ಪ ಪೂ ಮಹಾವಿದ್ಯಾಲಯದಲ್ಲಿ ಕನ್ನಡ ಶಿಕ್ಷಕ ಹಾಗೂ ಕನ್ನಡ ಉಪನ್ಯಾಸಕನಾಗಿ 25 ವರ್ಷಗಳಿಂದ ಅಂದರೆ 06-08-1997 ರಿಂದ 06-08-2022 ರಜತ ಮಹೋತ್ಸವ ಸಮಾರಂಭ ಆಚರಿಸಿ ಮುಂದುವರಿಯುತ್ತಿದೆ…

ಹೆಂಡತಿ- ಸುನೀತಾ ಬಿಎಬಿ ಇಡಿ ಹಾಗೂ ಮಗಳು- ನೇಹಾ ಬಿಸಿಎ ಪದವಿಧರೇ ಮತ್ತು ಮಗ- ನಿಖಿಲ್ ಪಿಯುಸಿ ಮುಗಿಸಿ ಪದವಿ ಪ್ರವೇಶ ಹಂತದಲ್ಲಿದೆ. ನಾನು ತಂದೆಯವರ ಶಿಕ್ಷಕರಾದ ಕಾರಣ ನಾನು ಶಿಕ್ಷಕ ವೃತ್ತಿಗೆ ಬರಲು ಕಾರಣವಾಯಿತು. ನಮ್ಮವರು ಆಂದ್ರದಲ್ಲಿದ್ದರೂ ಕೂಡ ಸಂಪೂರ್ಣವಾಗಿ ಕನ್ನಡಮಯ ವಾತಾವರಣ ಇದ್ದ ಕಾರಣ ನಾನು ಕನ್ನಡ ಶಿಕ್ಷಕನಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು. ಇದಕ್ಕೆಲ್ಲ ಪೂಜ್ಯ ಭಾಲ್ಕಿಯ ಪೂಜ್ಯ ಡಾ. ಚನ್ನಬಸವಪಟ್ಟದ್ದೇವರ ಪ್ರೇರಣೆಯೇ ಕಾರಣವಾಗಿದೆ. ಪ್ರಾರಂಭದಿಂದಲೂ ನನ್ನೊಳಗಡೆ ಕುತೂಹಲವನ್ನು ಕೆರಳಿಸುವಂತಹ ಭಾವನೆಗಳು ಇದ್ದ ಕಾರಣ ನಾನು ಹಾಸ್ಯದ ಕಡೆ ಒಲವು ತೋರಿದೆ. ಕರೋನಾ ಸಂದರ್ಭದಲ್ಲಿ ಅನೇಕ ನನ್ನ ಮಿತ್ರರನ್ನು ಕಳೆದುಕೊಂಡಿದ್ದು, ಇನ್ನುಳಿದ ಮಿತ್ರರಿಗೆ ನನ್ನ ಬಂಧುಬಳಗದವರಿಗೆ ಕರೋನಾ ಭಯದಿಂದ ಹೊರಬರುವಂತೆ ಹಾಸ್ಯ ಕಾರ್ಯಕ್ರಮವನ್ನು ಹೆಂಡತಿ ಜೊತೆ ಸೇರಿ ಯೂಟೂಬ್ ಮೂಲಕ ರಂಜಿಸಿದ್ದೇ. ಅದೇ ಈಗ ನನಗೆ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ಹಿಂದಿನಿಂದ ನಾನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸೇವೆ ಮಾಡಿದ್ದರಿಂದ ಅನೇಕ ಸಂಘ-ಸಂಸ್ಥೆಗಳವರು ಸನ್ಮಾನ ಹಲವಾರು ಪ್ರಶಸ್ತಿಗಳು ನೀಡಿ ಸತ್ಕರಿಸಿವೆ. ಇಲ್ಲಿಯವರೆಗೆ ಸುಮಾರು 250 ಹಾಸ್ಯ ವಿಡಿಯೋಗಳು ಯೂಟ್ಯೂಬನಲ್ಲಿ ಬಿತ್ತರಿಸಲಾಗಿದೆ ಎಂದು ಸಂವಾದಕರಾದ ದೇವೇಂದ್ರ ಕರಂಜೆ ಮತ್ತು ನಾಗೇಶ ಸ್ವಾಮಿ ಮಸ್ಕಲ್ ಅವರ ಪ್ರಶ್ನೆಗಳಿಗೆ ಉತ್ತರಿಸಿದರು. ಇದೇ ಸಂದರ್ಭದಲ್ಲಿ ಮೂಲಗೆ ದಂಪತಿಯವರಿಗೆ ಪರಿಷತ್ತಿನಿಂದ ಸತ್ಕರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸುನೀತಾ ಬಸವರಾಜ ಮೂಲಗೆ ಮತ್ತು ಸಾಹಿತಿ ಕಾವ್ಯಶ್ರೀ ಮಹಾಗಾಂವಕರ್ ವೇದಿಕೆಯ ಮೇಲೆ ಉಪಸ್ಥಿತರಿದ್ದು ಮಾತನಾಡಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆಯವರು ಆಶಯ ನುಡಿ ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ತಾಲ್ಲೂಕು ಕಸಾಪ ಅಧ್ಯಕ್ಷ ಎಂ. ಎಸ್. ಮನೋಹರ ಅವರು ವಹಿಸಿದರು.

ರಾಘವೇಂದ್ರ ಮುತ್ತಂಗಿಕರ್ ಮೊದಲಿಗೆ ಸ್ವಾಗತಿಸಿರು. ಕಾರ್ಯಕ್ರಮದ ನಿರೂಪಣೆ ಸಿದ್ಧರೂಢ ಭಾಲ್ಕೆ ಮಾಡಿದರೆ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ವಂದಿಸಿದರು. ಕಾರ್ಯಕ್ರಮದಲ್ಲಿ ರಮೇಶ ಬಿರಾದಾರ, ಗಂಡಾ ಬಾಬುರಾವ, ಜಗನ್ನಾಥ ಕಮಲಾಪೂರೆ, ಗಣಪತಿ ಸೋಲಪೂರೆ, ಕಂಟೆಪ್ಪ ಎಣಕೆಮೂರೆ, ಸಿದ್ರಾಮ ಚಪಟೆ, ಮಲ್ಲಿಕಾರ್ಜುನ ಚಪಟೆ, ಜಗನ್ನಾಥ ಪಾಟೀಲ, ವೈಜಿನಾಥ ಪಾಟೀಲ ಶ್ರೀಕಾಂತ ಮೂಲಗೆ, ಸಂತೋಷ, ಸುರೇಖಾ ಶೆಟಕಾರ, ಶೋಭಾವತಿ, ಅರುಣಾದೇವಿ, ಸುವರ್ಣ, ಸರಸ್ವತಿ, ನಿರ್ಮಲಾ, ದೀಪಾ ಮಾಳಗೆ, ವಿದ್ಯಾವತಿ, ಅಂಬಿಕಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.