ರೋಗಗಳ ತಡೆಗಟ್ಟುವ ಕ್ರಮಗಳ ಕುರಿತು ಜಾಗೃತಿ ಜಾಥಾ

ವಿಜಯಪುರ, ಎ.8-ಪ್ರಸ್ತುತ ದಿನಗಳಲ್ಲಿ ಉಲ್ಬಣವಾಗುತ್ತಿರುವ ರೋಗಗಳ ಜಾಗೃತಿ ಹಾಗೂ ತಡೆಗಟ್ಟುವ ಕ್ರಮಗಳ ಕುರಿತು ಜನರಲ್ಲಿ ತಿಳಿವಳಿಕೆ ಅಗತ್ಯತೆ ಕುರಿತು ವಿಶ್ವ ಆರೋಗ್ಯ ದಿನಾಚರಣೆಯಂದು ಬಿ.ಎಲ್.ಡಿ.ಇ ಸಂಸ್ಥೆಯ ವಿವಿಧ ಕಾಲೇಜುಗಳಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ತಿಕೋಟಾದ ನರ್ಸಿಂಗ್ ಕಾಲೇಜಿನಲ್ಲಿ ಸ್ನಾತಕೋತ್ತರ ಕಾಲೇಜು ಪ್ರಾಚಾರ್ಯ ಡಾ.ಎಸ್.ಟಿ.ಮದ್ರೆಕರ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಎಲ್ಲರಿಗೂ ಆರೋಗ್ಯಕರ ಜಗತ್ತನ್ನು ನಿರ್ಮಿಸುವ ಹಾಗೂ ಉತ್ತಮ ಪರಿಸರ ನಿರ್ಮಾಣ ಮಾಡುವದರಿಂದ ಮಾನವನ ಶರೀರಕ್ಕೆ ಆಗುವ ಲಾಭಗಳ ಕುರಿತು ತಿಳಿಸಿದರು.
ನಂತರ ನರ್ಸಿಂಗ್ ವಿದ್ಯಾರ್ಥಿಗಳ ಬಳಗ ವಿಶ್ವಆರೋಗ್ಯ ದಿನಾಚರಣೆಯಂದು ಜಾಗೃತಿ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಪ್ರಾಧ್ಯಾಪಕರಾದ ಮಂಜುನಾಥ ಪಾಟೀಲ, ನವನಾಥ ಆಜೂರ, ಆಕಾಶ ಜಾಧವ, ರಾನುಬಾಯಿ ಸುರ್ಯವಂಶಿ, ಭುವನೇಶ್ವರ ಪಾಟೀಲ, ಸಿದ್ದು ತಡಲಗಿ ಸೇರಿದಂತೆ ನರ್ಸಿಂಗ್ ವಿದ್ಯಾರ್ಥಿಗಳು ಈ ಜಾಥಾದಲ್ಲಿ ಉಪಸ್ಥಿತರಿದ್ದರು.