ರೋಖಡಾ ಮಾರುತಿ ದೇವಸ್ಥಾನದಲ್ಲಿ ಹನುಮಾನ ಜನ್ಮೋತ್ಸವ

ಕಲಬುರಗಿ,ಏ 7: ನಗರದ ಬ್ರಹ್ಮಪುರ ಬಡಾವಣೆಯ ಪುರಾತನ ರೋಖಡಾ ಮಾರುತಿ ದೇವಸ್ಥಾನದಲ್ಲಿ ಹನುಮಾನ ಜನ್ಮೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಪವಮಾನ ಸೂಕ್ತದಿಂದ ಜಾಗೃತ ಮೂರ್ತಿ ರೋಖಡೇಶನಿಗೆ ಪಂಚಾಮೃತ ಅಭಿಷೇಕ, ತೊಟ್ಟಿಲೋತ್ಸವ, ಪವಮಾನ ಹೋಮ,ಪಾರಾಯಣ ಸಂಘದಿಂದ ಅನೇಕ ಸ್ತೋತ್ರಗಳ ಪಾರಾಯಣ, ಅಲಂಕಾರ,ನೈವೇದ್ಯ ಮಹಾಮಂಗಳಾರತಿ,ನಂತರ ತೀರ್ಥಪ್ರಸಾದ ಮತ್ತು ಸಾಯಂಕಾಲದಲ್ಲಿ ಭಜನೆ ಮುಂತಾದ ಕಾರ್ಯಕ್ರಮಗಳು ಜರುಗಿದವು.
ಇಲ್ಲಿನ ದೇವಸ್ಥಾನಕ್ಕೆ ಆಗಮಿಸುವಂತಹ ಅನೇಕ ಭಕ್ತರ ಕಷ್ಟ,ತಾಪತ್ರಯಗಳನ್ನು ಜಾಗೃತ ಮೂರ್ತಿ ರೋಖಡೇಶ ದೂರ ಮಾಡುತ್ತಾನೆ ಎಂಬ ಭಕ್ತರ ಅಪಾರ ನಂಬಿಕೆ ಇಲ್ಲಿದೆ.ಉತ್ಸವದಲ್ಲಿ ಸಮೀರ್ ಸಾವಳಗಿ, ಸುರೇಶ್ ರಾವ್ ಬಾಗೇವಾಡಿ, ಜಯತೀರ್ಥ ಕುಲಕರ್ಣಿ, ಪ್ರಹ್ಲಾದ ಮುತಕೋಡ್ ,ಉಡುಪಿ ಅವಧಾನಿ ಅವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.