ರೊಹಿಂಗ್ಯಾ ಮುಸ್ಲಿಮರಿಗೆ ಯುಎಸ್ ಅನುದಾನ

ನ್ಯೂಯಾರ್ಕ್, ಸೆ.೨೩- ಬಾಂಗ್ಲಾದೇಶ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿರುವ ಮ್ಯಾನ್ಮಾರ್‌ನ ರೊಹಿಂಗ್ಯಾ ಮುಸ್ಲಿಮರಿಗೆ ಮಾನವೀಯ ನೆಲೆಯಲ್ಲಿ ಅಮೆರಿಕಾ ಆರ್ಥಿಕ ನೆರವನ್ನು ಮತ್ತಷ್ಟು ವಿಸ್ತರಿಸಿದೆ. ೧೭೦ ಮಿಲಿಯನ್ ಡಾಲರ್ ನೆರವನ್ನು ಘೋಷಿಸಿದೆ ಎಂದು ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ತಿಳಿಸಿದ್ದಾರೆ.
ಬಾಂಗ್ಲಾದೇಶ ಸರ್ಕಾರ ಮತ್ತು ರೋಹಿಂಗ್ಯಾ ಮುಸ್ಲಿಮರೊಂದಿಗೆ ಬಿಕ್ಕಟ್ಟಿಗೆ ಪರಿಹಾರಗಳನ್ನು ಹುಡುಕುವ ನಿಟ್ಟಿನಲ್ಲಿ ಅಮೆರಿಕಾ ಕೆಲಸ ಮಾಡುತ್ತಿದೆ. ಈ ಹೊಸ ನಿಧಿಯೊಂದಿಗೆ, ರೊಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟಿಗೆ ಪರಿಹಾರ ರೂಪವಾಗಿ ಆಗಸ್ಟ್ ೨೦೧೭ ರಿಂದ ನಾವು ಸುಮಾರು ೧.೯ ಬಿಲಿಯನ್ ಡಾಲರ್ ಆರ್ಥಿಕ ನೆರವನ್ನು ನೀಡಿದ್ದೇವೆ. . ಬಾಂಗ್ಲಾದೇಶದ ಕಾಕ್ಸ್ ಬಜಾರ್‌ಗೆ ಸುಮಾರು ೭೪೦,೦೦೦ ಕ್ಕೂ ಹೆಚ್ಚು ರೋಹಿಂಗ್ಯಾಗಳು ಸುರಕ್ಷತೆಗೆ ಪಲಾಯನ ಮಾಡಿದ ಸಮಯದಲ್ಲಿ ನಿಧಿ ಬಿಡುಗಡೆ ಮಾಡಲಾಗಿದೆ. ಹೊಸ ಸುತ್ತಿನ ಅಮೆರಿಕಾದ ಮಾನವೀಯ ನೆರವು ರಾಜ್ಯ ಇಲಾಖೆಯ ಮೂಲಕ $೯೩ ಮಿಲಿಯನ್‌ಗಿಂತಲೂ ಹೆಚ್ಚು ಮತ್ತು ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್‌ನ್ಯಾಶನಲ್ ಡೆವಲಪ್‌ಮೆಂಟ್ ಮೂಲಕ $೭೭ ಮಿಲಿಯನ್‌ಗಿಂತಲೂ ಹೆಚ್ಚು ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಮ್ಯಾನ್ಮಾರ್‌ನಿಂದ ವಲಸೆ ಬಂದಿರುವ ಮುಸ್ಲಿಮರು ನೆಲೆಸಿದ್ದು, ಇವರಿಗಾಗಿಯೇ ಸುಮಾರು ೧೩೮ ಮಿಲಿಯನ್ ಡಾಲರ್ ಮೊತ್ತ ಖರ್ಚು ಮಾಡಿದೆ.