ರೊಸೆಲಿನ್ ಜೋಸೆಫ್‍ಗೆ ಪಿಎಚ್‍ಡಿ

ಬೀದರ್: ಜು.15:ಇಲ್ಲಿಯ ಬಿಲಾಲ್ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ಸಹ ಪ್ರಾಧ್ಯಾಪಕಿ ರೊಸೆಲಿನ್ ಜೋಸೆಫ್ ಅವರ ಪ್ರೌಢ ಪ್ರಬಂಧಕ್ಕೆ ಮಧ್ಯಪ್ರದೇಶದ ಭೋಪಾಲ್‍ನ ಶ್ರೀ ಸತ್ಯ ಸಾಯಿ ತಾಂತ್ರಿಕ ಹಾಗೂ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯವು ಪಿಎಚ್‍ಡಿ ಪದವಿ ನೀಡಿದೆ.

ಡಾ. ಮೀನಾಕ್ಷಿ ಪಾತಾಕ್ ಅವರ ಮಾರ್ಗದರ್ಶನದಲ್ಲಿ ‘ಯುಸಿಂಗ್ ಬಾಕ್ಸಿಂಗ್ ಇನ್ ಸೋಷಿಯಲ್ ಗ್ರೂಪ್ ವರ್ಕ್ ವಿತ್ ಹೈ ರಿಸ್ಕ್ ಆ್ಯಂಡ್ ಆಫೆಂಡೆರ್ ಯುತ್ ಟು ರೆಡ್ಯುಸ್ ವಾಯೋಲೆನ್ಸ್’ ಕುರಿತು ಅವರು ಮಂಡಿಸಿದ ಪ್ರೌಢ ಪ್ರಬಂಧವನ್ನು ಪಿಎಚ್‍ಡಿಗೆ ಮಾನ್ಯ ಮಾಡಿದೆ.