ರೊಮ್ಯಾಂಟಿಕ್ ಶೈಲಿಯ ನಿಶ್ಚಿತಾರ್ಥ: ರಾಜಕುಮಾರ್ ರಾವ್ ಅವರಿಂದ ಮೊಣಕಾಲೂರಿ ಕೂತು ಪತ್ರಲೇಖಾ ಅವರಲ್ಲಿ ವಿವಾಹಕ್ಕಾಗಿ ಪ್ರಪೋಸ್, ಸೋಶಲ್ ಮೀಡಿಯಾದಲ್ಲಿ ವೀಡಿಯೋ ವೈರಲ್

ಬಾಲಿವುಡ್ ಆ?ಯಕ್ಟರ್ ರಾಜಕುಮಾರ್ ರಾವ್ ಮತ್ತು ನಟಿ ಪತ್ರಲೇಖಾ ನವಂಬರ್ ಹದಿನಾಲ್ಕರಂದು ವಿವಾಹ ಬಂಧನದಲ್ಲಿ ಸಿಲುಕಿದರು .ಇವರ ವಿವಾಹವು ’ದ ಅಬೆರಾಯ್ ಸುಖವಿಲಾಸ್ ಸ್ಪಾ ರಿಸಾರ್ಟ್’ ನ್ಯೂ ಚಂಡೀಗಡ್ ದಲ್ಲಿ ನಡೆಯಿತು.
ಶನಿವಾರದಂದು ಇವರಿಬ್ಬರು ಒಂದು ಪ್ರೈವೇಟ್ ಸೆರೆಮನಿ ಹಮ್ಮಿಕೊಂಡು ಎಂಗೇಜ್ಮೆಂಟ್ ಕಾರ್ಯಕ್ರಮ ಪೂರೈಸಿದರು. ಅದರ ಕೆಲವು ಫೋಟೋಗಳು ವೈರಲ್ ಆಗಿವೆ. ಇದರಲ್ಲಿ ರಾಜಕುಮಾರ್ ಅವರು ಮೊಣಕಾಲೂರಿ ಕೂತು ಪತ್ರಲೇಖಾರಿಗೆ ವಿವಾಹದ ಪ್ರಪೋಸ್ ಮಾಡುತ್ತಿರುವ ದೃಶ್ಯವಿದೆ.
ರಾಜಕುಮಾರ್ ಆ ವೀಡಿಯೋದಲ್ಲಿ ಮೊಣಕಾಲೂರಿ ಕೂತು ಕೈಯಲ್ಲಿ ಉಂಗುರವನ್ನು ಹಿಡಿದು ಪತ್ರಲೇಖಾ ಅವರಲ್ಲಿ ಕೇಳುತ್ತಾರೆ-
“ಪತ್ರಲೇಖಾ ನೀವು ನನ್ನನ್ನು ವಿವಾಹ ಆಗುತ್ತೀರಾ”
ಅದಕ್ಕೆ ಪತ್ರಲೇಖಾ ಕೂಡ ಮೊಣಕಾಲೂರಿ ಕೂತು ಹೇಳುತ್ತಾರೆ -“ಹೌದು, ನಾನು ವಿವಾಹ ಮಾಡಿಕೊಳ್ಳುತ್ತೇನೆ.”
ಮೊದಲು ರಾಜಕುಮಾರ್ ರಾವ್ ಅವರಿಗೆ ಪತ್ರಲೇಖಾ ಉಂಗುರ ಹಾಕಿದರು. ನಂತರ ಇಬ್ಬರೂ ನೃತ್ಯಮಾಡಿದರು. ರಾಜಕುಮಾರ್ ರಾವ್ ಮತ್ತು ಪತ್ರಲೇಖಾ ೧೧ ವರ್ಷಗಳಿಂದ ರಿಲೇಶನ್ ನಲ್ಲಿದ್ದಾರೆ.ಲವ್ ಸೆಕ್ಸ್ ಔರ್ ದೋಖಾ ಫಿಲ್ಮ್ ನಲ್ಲಿ ಮೊದಲಬಾರಿಗೆ ರಾಜಕುಮಾರ್ ರಾವ್ ರನ್ನು ಪತ್ರಲೇಖಾ ನೋಡಿದ್ದರು .ಮೊದಲ ಸಲವೇ ರಾಜಕುಮಾರ್ ರಾವ್ ಪತ್ರಲೇಖಾ ಅವರಿಗೆ ಇಷ್ಟವಾಗಿ ವಿವಾಹ ಮಾಡಿಕೊಳ್ಳುವ ಮನೋಭಾವ ಬಂತಂತೆ. ಪತ್ರಲೇಖಾ ಮತ್ತು ರಾಜಕುಮಾರ್ ೨೦೧೦ರಿಂದ ಪರಿಚಿತರಿದ್ದಾರೆ. ೨೦೧೪ ರಲ್ಲಿ ಫಿಲ್ಮ್ “ಸಿಟಿ ಲೈಟ್” ನಲ್ಲಿ ಜೊತೆಯಾಗಿ ಅಭಿನಯಿಸಿದ್ದರು.

ಕಂಗನಾ ರಣಾವತ್ ಅವರ “ಸ್ವಾತಂತ್ರ್ಯ ಭಿಕ್ಷೆ ಯಲ್ಲಿ ದೊರೆತಿದ್ದು” ಎಂಬ ಹೇಳಿಕೆಗೆ ಹಿರಿಯ ನಟ ವಿಕ್ರಮ್ ಗೋಖಲೆಯವರ ಒಪ್ಪಿಗೆ

ಕಂಗನಾ ರಣಾವತ್ ಅವರಿಗೆ ಕೊನೆಗೂ ಒಬ್ಬರು ಹಿರಿಯ ನಟರ ಬೆಂಬಲ ದೊರೆತಿದೆ. ಅವರು ಮರಾಠಿ ಮತ್ತು ಬಾಲಿವುಡ್ ನ ಹಿರಿಯ ನಟ ವಿಕ್ರಮ್ ಗೋಖಲೆ .ಅವರನ್ನು ಫಿಲ್ಮ್ ರಂಗದಲ್ಲಿ ತನ್ನ ಅಭಿನಯದ ಕಾರಣ ಲೋಹ ಮಾನವ ಎನ್ನುತ್ತಾರೆ.
ವಿಕ್ರಮ್ ಗೋಖಲೆ ಅವರ ಪ್ರಕಾರ ಕಂಗನಾ ರಣಾವತ್ ದೇಶದ ಸ್ವಾತಂತ್ರ್ಯದ ವಿಷಯದಲ್ಲಿ ಏನು ಹೇಳಿದ್ದಾರೆಯೋ ಆ ವಿವಾದಿತ ಹೇಳಿಕೆಗೆ ನನ್ನ ಒಪ್ಪಿಗೆ ಇದೆ ಎಂದಿದ್ದಾರೆ.


ಕಂಗನಾ ರಣಾವತ್ ಅವರು “೧೯೪೭ ರಲ್ಲಿ ದೊರೆತ ಸ್ವಾತಂತ್ರ್ಯ ಭಿಕ್ಷೆಯಾಗಿತ್ತು. ಆದರೆ ದೇಶದ ಅಸಲಿ ಸ್ವಾತಂತ್ರ್ಯ ದೊರೆತದ್ದು ೨೦೧೪ ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ” ಎಂದು ಹೇಳಿಕೆ ನೀಡಿದ್ದು ಪರ ವಿರೋಧ ಚರ್ಚೆ ಶುರುವಾಗಿದೆ.
ವಿಕ್ರಮ್ ಗೋಖಲೆ ಮುಂದೆ ಹೇಳುತ್ತಾರೆ -“ನಾನು ಕಂಗನಾ ರಣಾವತ್ ಅವರ ಮಾತಿಗೆ ಸಹಮತ ಇದ್ದೇನೆ .ನಮಗೆ ಸ್ವಾತಂತ್ರ್ಯವನ್ನು ನೀಡಲಾಗಿತ್ತು .ಬ್ರಿಟಿಷ್ ಆಡಳಿತದ ಸಂದರ್ಭದಲ್ಲಿ ಸ್ವಾತಂತ್ರ್ಯ ಸೇನಾನಿಗಳಿಗೆ ಫಾಶೀ ಸಜೆ ನೀಡಲಾಗಿತ್ತು. ಆಗ ಜನರು ಮೂಖಪ್ರೇಕ್ಷಕರಾಗಿ ಇದ್ದರು .ಈ ಮೂಕ ಪ್ರೇಕ್ಷಕರಲ್ಲಿ ಅನೇಕ ವರಿಷ್ಠ ನಾಯಕರೂ ಇದ್ದರು. ಸ್ವಾತಂತ್ರ್ಯ ಸೇನಾನಿಗಳನ್ನು ಅಪಾಯದಿಂದ ಪಾರಾಗಿಸಲು, ಉಳಿಸಲು ಅವರಿಂದ ಆಗಿಲ್ಲ “
ಇಷ್ಟು ಪ್ರತಿಕ್ರಿಯಿಸಿದ ನಂತರ ಕೊನೆಗೆ ಹೇಳುತ್ತಾರೆ -ದೇಶದ ಉತ್ತಮ ಆಡಳಿತಕ್ಕಾಗಿ ಬಿಜೆಪಿ ಮತ್ತು ಶಿವಸೇನೆಯು ಜೊತೆಯಾಗಿ ರಾಜಕೀಯ ರಂಗದಲ್ಲಿ ಮತ್ತೆ ಬರಬೇಕಾಗಿದೆ. ಭಾಜಪ ಸಹಿತ ಯಾವುದೇ ಪಾರ್ಟಿ ಆಗಲಿ ವಿವಾದಗಳಿಂದ ರಾಜಕೀಯ ಲಾಭವನ್ನು ನೋಡುವ ಪ್ರಯತ್ನವನ್ನು ಮಾಡುತ್ತಾ ಬಂದಿದೆ ಎಂಬ ಮಾತನ್ನೂ ಹೇಳಲು ಮರೆಯಲಿಲ್ಲ.

ಸಲ್ಮಾನ್ ಖಾನ್ ರನ್ನು ಕಂಡು ಭಾವುಕರಾದ ಸಿದ್ಧಾಂತ ಚತುರ್ವೇದಿ, ಬಿಗ್ ಬಾಸ್ ಸೆಟ್ ಗೆ ಬಂದ ರಾಣಿಮುಖರ್ಜಿ ತಂಡ

ಬಿಗ್ ಬಾಸ್ ೧೫ ರ ಫ್ಯಾನ್ಸ್ ಗಳಿಗೆ ಪ್ರತೀವಾರ ವೀಕೆಂಡ್ ನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ನಿರೀಕ್ಷೆ ಇರುತ್ತದೆ .ಕೊನೆಯ ದಿನ ಶೋ ದಲ್ಲಿ ಸೆಲೆಬ್ರಿಟಿಗಳು ಬಂದೇ ಬರ್ತಾರೆ. ಇತ್ತೀಚೆಗೆ ರವಿವಾರದ ಎಪಿಸೋಡ್ ಪ್ರೋಮೋ ಶೇರ್ ಮಾಡಿದ್ದಾರೆ. ಆ ಶೋ ದಲ್ಲಿ ಸ್ಪೆಷಲ್ ಗೆಸ್ಟ್ ನ ರೂಪದಲ್ಲಿ ರಾಣಿ ಮುಖರ್ಜಿ ತನ್ನ ಅಪ್ ಕಮಿಂಗ್ ಫಿಲ್ಮ್ ’ಬಂಟಿ ಅವರು ಬಬ್ಲಿ ೨’ ಪ್ರಮೋಟ್ ಮಾಡಲು ಬಂದಿದ್ದರು.


ಅವರ ಜೊತೆ ನಟ ಸಿದ್ದಾಂತ ಚತುರ್ವೇದಿ ಮತ್ತು ಶರಾವರಿ ವಾಘ್ ಕೂಡಾ ಬಂದಿದ್ದರು. ಈ ಶೋ ದಲ್ಲಿ ಸಲ್ಮಾನ್ ಅವರನ್ನು ಕಂಡು ಸಿದ್ಧಾಂತ್ ಬಹಳ ಭಾವುಕರಾದರು.
ಸಿದ್ಧಾಂತ್ ಸ್ವಲ್ಪ ಗಾಬರಿಯಾಗಿರುವಂತೆ ಕಂಡಾಗ ರಾಣಿ ಮುಖರ್ಜಿ ಕೇಳಿದರು- ಇಷ್ಟೊಂದು ಭಯಪಡುತ್ತೀರಿ ಯಾಕೆ ?ಎಂದಾಗ-
ಸಿದ್ಧಾಂತ್ ಹೇಳಿದರು- “ಸಲ್ಮಾನ್ ಅವರನ್ನು ಕಂಡು ನಾನು ತುಂಬಾ ಭಾವುಕ ಆಗಿದ್ದೇನೆ”.
ಆಗ ಸಲ್ಮಾನ್ ಸೈಡ್ ನಿಂದ ಬಂದು ಸಿದ್ಧಾಂತ್ ರನ್ನು ಅಪ್ಪಿಕೊಂಡರು.
ಬಂಟಿ ಔರ್ ಬಬ್ಲೀ ೨ ಫಿಲ್ಮ್ ನವಂಬರ್ ೧೯ ರಂದು ಸಿನಿಮಾ ಟಾಕೀಸ್ ಗಳಲ್ಲಿ ಬಿಡುಗಡೆ ಆಗಲಿದೆ.