ರೊದ್ದ ಶ್ರೀನಿವಾಸರಾವ್ ಅವರ ಪುಣ್ಯತಿಥಿ ಆಚರಣೆ

ಧಾರವಾಡ,ಆ4 : `ಕರ್ನಾಟಕ’ ಹೆಸರಿನ ಪಿತಾಮಹ ಎಂದೇ ಪ್ರಸಿದ್ಧಿಯಾದ ರೊದ್ದ ಶ್ರೀನಿವಾಸರಾವ್ ಅವರ 93 ನೇ ಪುಣ್ಯತಿಥಿಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು.
ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ, ರೊದ್ದ ಶ್ರೀನಿವಾಸರಾವ್ ಅವರು ಕನ್ನಡ-ಕರ್ನಾಟಕತ್ವಕ್ಕೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ, ಮಾಡಿದ ಹೋರಾಟ, ಕೊಡುಗೆಗಳನ್ನು ಸ್ಮರಿಸಿಕೊಂಡರು.
ಸಂಘದ ಪದಾಧಿಕಾರಿಗಳಾದ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು. ಸಂಘದ ಪದಾಧಿಕಾರಿಗಳಾದ ಶಿವಾನಂದ ಭಾವಿಕಟ್ಟಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ಗುರು ಹಿರೇಮಠ, ವಿಶ್ವೇಶ್ವರಿ ಬ. ಹಿರೇಮಠ ಮತ್ತು ಡಾ. ಧನವಂತ ಹಾಜವಗೋಳ, ಡಾ. ಮಹೇಶ ಧ. ಹೊರಕೇರಿ ಹಾಗೂ ನಿಂಗಣ್ಣ ಕುಂಟಿ ಕುಂಟಿ, ಡಾ. ಲಿಂಗರಾಜ ಅಂಗಡಿ, ಪ್ರೊ. ಕೆ. ಎಸ್. ಕೌಜಲಗಿ ಸಂಘದ ಸಿಬ್ಬಂದಿಗಳಾದ ಶಿ. ಮ. ರಾಚಯ್ಯನವರ, ಎನ್.ಎಸ್. ಕಾಶಪ್ಪನವರ ಮುಂತಾದವರು ಪಾಲ್ಗೊಂಡಿದ್ದರು.