ರೊಟ್ಟಿ ಮಾಡುವ ಸಲಾಕೆಯಿಂದ ತಿವಿದು ವ್ಯಕ್ತಿ ಕೊಲೆ

ಚಿಂಚೋಳಿ,ಆ.6-ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ರೊಟ್ಟಿ ಮಾಡುವ ಸಲಾಕೆಯಿಂದ ಗಂಟಲಿಗೆ ತಿವಿದು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ಸುಲೇಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಡ್ಡಳ್ಳಿ ಗ್ರಾಮದಲ್ಲಿ ನಡೆದಿದೆ.
ರಾಮಪ್ಪ ತಂದೆ ಚಂದ್ರಪ್ಪ ಗೋಟೂರ (35) ಕೊಲೆಯಾದವರು.
ಪತ್ನಿ ಸುನಿತಾ ಸಹಾಯದಿಂದ ಮಲ್ಲಪ್ಪ ಕೋನಿ, ಸಾಯಿಬಣ್ಣ ಪೂಜಾರಿ ಮತ್ತು ಬಸಪ್ಪ ಗೋಟೂರ ಎಂಬುವವರು ಸೇರಿ ಕೊಲೆ ಮಾಡಿ ಶವವನ್ನು ಗೋಣಿ ಚೀಲದಲ್ಲಿ ಹಾಕಿಕೊಂಡು ಬೈಕ್ ಮೇಲೆ ತೆಗೆದುಕೊಂಡು ಹೋಗುತ್ತಿದ್ದಾಗ ಭಾಗ್ಯವಂತ ಎಂಬಾತ ಮತ್ತು ಮೃತನ ಮಗ ಸಾಹಿತ್ಯ ನೋಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಪತ್ನಿ ಸುನಿತಾ ಮತ್ತು ಬಸಪ್ಪ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಸುಲೇಪೇಟ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದ್ದು, ತನಿಖೆ ನಡೆದಿದೆ.