ಸಂಜೆವಾಣಿ ವಾರ್ತೆ
ಸಂಡೂರು :ಜು:17: 1905ರಲ್ಲಿ ಪ್ರಾರಂಭವಾದ ಈ ಸಂಸ್ಥೆ ದೇಶದಲ್ಲಿ ಇಂದಿಗೆ 118 ವರ್ಷಗಳಾಗಿದ್ದು, ಸಂಡೂರು ಸಂಸ್ಥೆ ಇಂದಿಗೆ 50 ವರ್ಷ ತುಂಬಿ ಫಲಪ್ರದ ಸೇವೆ ಸಲ್ಲಿಸುತ್ತಾ ಬಂದಿದೆ. 50 ವರ್ಷದಲ್ಲಿ ವಿ.ವೈ ಘೋರ್ಪಡೆ ಬಂಡೆ ಮ್ಯಾಗಳ ಕುಮಾರಸ್ವಾಮಿ ಚಿತ್ರಿಕಿ ಮೃತ್ಯಂಜಯಪ್ಪ ಜೆ.ಎಂ. ಬಸವರಾಜ ಪಿ.ವಿ. ಪೈ ಮಾರುತಿ ರಾವ್ ಎಂ. ಭೊಸ್ಲೆ ಅಂಕಮನಾಳ್ ಕೊಟ್ರೇಶ್ ಫಾರೂಕ್ ಅಹ್ಮದ್ ಎಚ್. ಈರಣ್ಣ ಮರಿಸ್ವಾಮಿ ಹಿರೇಮಠ ಬಿ. ನಾಗನಗೌಡರು ವಿ.ಟಿ.ಕಾಳೆ ಎಚ್.ಎಂ. ಕೊಟ್ರಮ್ಮ ಎಂ. ಆಶಾಲತಾ ಎಚ್.ಎಂ. ಕೊಟ್ರಯ್ಯ ಎಸ್.ಜೆ. ಗೋಪಾಲ ಕೃಷ್ಣ ಎಸ್.ಎಂ. ಅಪ್ಪನಗೌಡರು ಕೆ.ಎಸ್. ನಾಗರಾಜ ಡಾ|| ಬ್ರಿಜೇಶ್ ಬಳ್ಳಾರಿ ಇನ್ನುಳಿದ ಹಲವರು ಮಹಾನೀಯರು ಉತ್ತಮವಾದ ಸೇವೆಯನ್ನ ಸಲ್ಲಿಸಿದ್ದಾರೆ. ಬುಲೆಟ್ ಸೇವೆಯನ್ನ ಸಲ್ಲಿಸುವುದರ ಜೊತೆಗೆ ಈ ಸಂಸ್ಥೆಯಲ್ಲಿ ಬಸವರಾಜ ಮಸೂತಿಯವರು ಉತ್ತುಂಗಸ್ಥಾನಕ್ಕೆ ಏರಿದ್ದಾರೆ. ಎಚ್.ವೀರೇಶಿ ಸಮಾಜ ಸೇವಕಿ ರೂಪ ಲಾಡ್ ಸಿ.ಗೌರಿಶ ಸಿ.ಕೆ. ವಿಶ್ವನಾಥ ಜೆ.ಎಂ. ಅನ್ನದಾನಸ್ವಾಮಿ ಎಚ್.ಎಂ. ಶಿವಮೂರ್ತಿ ಸ್ವಾಮಿ ಎಸ್.ಜೆ. ಗೊಪಾಲ ಕೃಷ್ಣ ಧರ್ಮಾಪುರದ ಕೃಷ್ಣಪ್ಪ ಬಳಿಗಾರ ಶಿವಕುಮಾರ ಟಿ.ಜಿ. ಸುರೇಶ್ ಗೌಡರ ಸೇವೆ ಅಮೋಘವಾಗಿದ್ದು, ಈಗಿನ ಅಧ್ಯಕ್ಷ ಕೆ. ನಾಗರಾಜ ರವರು ಹಿರಿಯ ಮರ್ಗದರ್ಶನವನ್ನು ಅನುಸರಿಸಿ ಸಂಸ್ಥೆ ಬೆಳೆಸಬೇಕಾಗಿರುವುದ ಅತೀ ಅವಶ್ಯ ಎಂದು ರೋಟರಿ ಜಿಲ್ಲೆ ಗವರ್‍ನರ್ ಆರ್.ಐ.ವಿ. 3160 ಎಂ.ಕೆ. ರವೀಂದ್ರರವರು ತಿಳಿಸಿದರು.
ಅವರು ಪಟ್ಟಣದ ಕೆ.ಎಚ್.ಬಿ ಕಾಲೋನಿಯಲ್ಲಿರುವ ರೋಟರಿ ಬಾಲಭವನದಲ್ಲಿ ಪದಗ್ರಹಣ ಕಾರ್ಯಕ್ರಮ 50 ವರ್ಷದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಫಾರೂಕ್ ಅಹ್ಮದ್ ಅಂಕಮನಾಳ್ ಕೊಟ್ರೇಶ್ ಅಧ್ಯಕ್ಷ ಸ್ಥಾನಕ್ಕೆ ಕೆ. ನಾಗರಾಜ ಎಚ್.ಎಂ. ಶಿವಮೂರ್ತಿಯವರಿಗೆ ಹಸ್ತಾಂತಿರಿಸಿ ಮಾತನಾಡಿದರು. ರೋಟರಿ ಸಂಸ್ಥೆ 200ಕ್ಕೂ ಹೆಚ್ಚು ದೇಶದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆ. 1 ಲಕ್ಷ 15 ಸಾವಿರ ಮಕ್ಕಳ ಪೊಲಿಯೋ ತಡೆಹಿಡಿದು ಪೊಲೀಯೊ ನಿರ್ಮೂಲನಕ್ಕಾಗಿ ಶತಾಯಗತವಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಪಾಕಿಸ್ಥಾನದಲ್ಲಿ ಪೊಲಿಯೋ ನಿರ್ಮೂಲನೆ ಆಗಿಲ್ಲ. 7 ವರ್ಷಗಳಿಂದ 26% ಅನಕ್ಷರಸ್ತರನ್ನು ಅಕ್ಷರಸ್ತರನ್ನಾಘಿ ಮಾಡಲು ಶಿಕ್ಷಕರಿಗೆ ತರಬೇತಿ ನೀಡುವ ಕೆಲಸ ನಡೆದಿದೆ. ಶಲೆ ಬಿಟ್ಟು ಹೋಗಿರುವ ಮಕ್ಕಳನ್ನು ಕರೆ ತರುವ ಕೆಲಸವನ್ನು ಮಾಡಲು ಸಂತೋಷದ ಶಾಲೆ (ಹ್ಯಾಪಿ ಸ್ಕೂಲ್) ಮಾಡುತ್ತಿದ್ದೇವೆ. ವಯೋಮತ್ತೂರಿನಲ್ಲಿ 45 ದನಗಳಲಿ ರಾಯಪುರದಲ್ಲಿ ಸತ್ಯಸಹಾಹಿ ಆಸ್ಪತ್ರೆ ನಿರ್ಮಾಣವಾಗಿದೆ. ನೋ ಬಿಲ್ ಒನ್ಲಿ ದಿಲ ಎನ್ನುವ ನಾಮಾಂಕಿತದಲ್ಲಿ ಬರೆಯಲಾಗಿದೆ. ಸಿಗುವ ಅವಕಾಶಗಳನ್ನು ಸದುಪಯೋಗ ಪಡಸಿಕೊಳ್ಳಲು ತಿಳಿಸಿದರು.
ಮುಖ್ಯ ವೇದಿಕೆಯನ್ನ ಅಲಂಕರಿಸಿದ ಜೆ.ಎಂ. ಬಸವರಾಜ ಮಾತನಾಡಿ ನನ್ನ ಕರ್ತವ್ಯಕ್ಕೆ ರೋಟರಿ ಸಂಸ್ಥೆಯ ಸದಸ್ಯರ ಪ್ರೋತ್ಸಾಹ ಮಾರ್ಗದರ್ಶನ ಅತೀ ಅವಶ್ಯ. ಪ್ರತಿಯೊಂದು ಕೆಲಸಕ್ಕೆ ಸದಸ್ಯರ ಪ್ರೋತ್ಸಾಹವಿದ್ದರೆ ಮಾತ್ರ ಸಂಸ್ಥೆ ಬೆಳೆಯಲು ಸಾಧ್ಯ. ಸಂಡೂರು ಪಟ್ಟಣವು ಅಲ್ಲ. ಹಳ್ಳಿಯೂ ಅಲ್ಲ. ನಡುಬಾಗವಾದರು ಸಂಸ್ಥೆಯೂ ಉತ್ತಮ ಸೇವೆ ಸಲ್ಲಿಸಿದೆ. ಸಂಡೂರಿಜಹನಲ್ಲಿ ಅನೆಕ ಕ್ಲಬ್‍ಗಳು ಮುಚ್ಚಿಹೋಗಿವೆ. ಆದರೆ ರೋಟರಿ ಸಂಸ್ಥೆ 50 ವರ್ಷದ ಸಂಭ್ರಮ ಆಚರಿಸಲು ಸದಸ್ಯರ ಒಗ್ಗಟ್ಟೆ ಕಾರಣ ಎಂದು ತಿಳೀಸಿದರು. ಅಧ್ಯಕ್ಷ ನಾಗರಾಜ ಮಾತನಾಡಿ ಪ್ರತಿವರ್ಷ ಪದ್ದತಿಯಂತೆ ಸದಸ್ಯರ ಸಹಕಾರ ಮತ್ತು ಮಾರ್ಗದರ್ಶನದಿಂದ ಉತ್ತಮ ಕೆಲಸಗಳನ್ನು ಮಾಡುತ್ತೇವೆ. ಸಾರ್ವಜನಿಕರಿಗೆ ನ್ಯಾಯವಾಗಿ ಸೇವೆ ಒದಗಿಸುವುದು ನನ್ನ ಕರ್ತವ್ಯ ಎಂದು ತಿಳಿಸಿದರು. ಬಳೆಗಾರ್ ಶಿವಕುಮಾರ ಮತನಾಡಿ ಹಲವಾರು ಹಿರಿಯರು ಈ ಸಂಸ್ಥೆಗೆ ಉತ್ತಮ ಸೇವೆಯನ್ನ ಸಲ್ಲಿಸಿ ಬೆಳೆಸಿದ್ದಾರೆ. ರೋಟರಿ ಕ್ಲಬ್ ಮುಂಬರುವ ದಿನಗಳಲ್ಲಿ ಉತ್ತಮ ಯೋಜನೆ ಹಾಕಿಕೊಮಡಿದೆ. ಸರ್ವ ಸದಸ್ಯರ ಸಹಕಾರ ಅಗತ್ಯ ಎಂದು ತಿಳಿಸಿದರು. ರಾಧಿಕ ಮತ್ತು ವರ್ಷನ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವರದಿ ವಾಚನವನ್ನು ಅಂಕಮನಾಳ್ ಕೊಟ್ರೇಶಿ ಟಿ.ಜಿ. ಸುರೇಶ್ ಗೌಡ ವಂದನಾರ್ಪಣೆ ಎಚ್.ಎಮ್. ಶಿವಮೂರ್ತಿ ಸ್ವಾಮಿಯವರು ಸಲ್ಲಿಸಿದರು. ಈ ಸಂದರ್ಭದಲ್ಲಿ ಐಕಲ್ ಅರುಣ ಕುಮಾರ ನಿರಂಜನ .ಕೆ ಐರಾಣಿ ಮಠದ ಗಿರಿಜಮ್ಮ ಹಲವಾರು ಮಹಾನೀಯರು ಈ ಸಂದರ್ಭದಲ್ಲಿ ಉಪಸ್ತಿತರಿದ್ದರು. ಎಲ್. ಕುಮಾರಸ್ವಾಮಿ ರಾಜೇರ್ಶ ಜೈನ್ ಅವರ ಸೇವೆಯನ್ನು ಸಹ ಮರೆಯಲು ಸಾಧ್ಯವಿಲ್ಲ.