ರೊಕ್ಕ ಹಂಚಿಕೆ ಆರೋಪ; ಬಿಜೆಪಿಕಾರ್ಯಕರ್ತನ ವಿರುದ್ಧ ಪ್ರಕರಣ

ಕಲಬುರಗಿ,ಮೇ 9: ಬಹಿರಂಗ ಮತ ಯಾಚನೆಯ ಅವಧಿ ಮುಗಿದ ಬೆನ್ನಲ್ಲೇ ಮನೆಮನೆಗೆ ತೆರಳಿ ಮತದಾರರಿಗೆ ಹಣ ಹಂಚುತ್ತಿದ್ದ ಆರೋಪದ ಮೇರೆಗೆ ಬಿಜೆಪಿಕಾರ್ಯಕರ್ತನೊಬ್ಬನ ವಿರುದ್ಧ ಇಲ್ಲಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಕಳೆದ ತಡರಾತ್ರಿ ಪ್ರಕರಣ ದಾಖಲಾಗಿದೆ.
ಇಲ್ಲಿನ ವಿದ್ಯಾನಗರ ಬಡಾವಣೆಯಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡಲಾಗುತ್ತಿದೆ ಎಂಬ ಕುರಿತು ಸ್ವತಃ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಅವರಿಗೆ ಮಾಹಿತಿಲಭಿಸಿದ್ದರಿಂದ ಪೊಲೀಸ್ ಕಮಿಷನರ್ ಚೇತನ್ ಅವರೊಂದಿಗೆ ತಕ್ಷಣ ಸ್ಥಳಕ್ಕೆಧಾವಿಸಿದ್ದಾರೆ. ಈ ವೇಳೆ, ಹಣ ಹಂಚಿಕೆ ಮಾಡುತ್ತಿದ್ದ ಶಿವಾನಂದ ಹುಲಿ ಎಂಬಾತನನ್ನುವಶಕ್ಕೆ ಪಡೆಯಲಾಗಿದ್ದು, ಆರೋಪಿಯ ವಿಚಾರಣೆ ಕೈಗೊಂಡ ಬಳಿಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಘಟನೆಯ ವಿವರ:
ಸೋಮವಾರ ರಾತ್ರಿ ಸುಮಾರು 11.30ರ ವೇಳೆಯಲ್ಲಿ ಶಂಕರ ತಂದೆ
ಶಾಂತಪ್ಪ ಹರಳಯ್ಯ ಎಂಬಾತ ಸಂಗಮೇಶ್ವರ ನಗರ ಬಡಾವಣೆಯಲ್ಲಿ
ಮನೆಯ ಕಡೆಗೆ ಹೋಗುತ್ತಿದ್ದಾಗ ಕೆಲವರು ಬೀದಿ ದೀಪಗಳನ್ನು ಆರಿಸಿ
ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದನ್ನು ಗಮನಿಸಿದ್ದಾರೆ. ಸೂಕ್ಷ್ಮವಾಗಿ
ಗಮನಿಸಿದಾಗ ಚುನಾವಣೆಯ ಕಾರಣಕ್ಕಾಗಿ ಬಿಜೆಪಿ ಕಾರ್ಯಕರ್ತರು ಹಣ ಹಂಚಿಕೆಮಾಡುತ್ತಿರುವುದನ್ನು ಅವರು ಖಾತ್ರಿಪಡಿಸಿಕೊಂಡಿದ್ದಾರೆ. ಬಳಿಕ ಜಿಲ್ಲಾಧಿಕಾರಿಯಶವಂತ ಗುರುಕರ್ ಅವರಿಗೆ ಮೊಬೈಲ್ ಮೂಲಕ ಸಂಪರ್ಕಿಸಿದಾಗ, ಅವರುತಕ್ಷಣ ಮೊಬೈಲ್‍ನಲ್ಲಿ ಲೈವ್ ಲೊಕೇಷನ್ ಕಳಿಸುವಂತೆ ಸಲಹೆ ನೀಡಿದ್ದಾರೆ. ಲೈವ್‍ಲೊಕೇಷನ್ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಜಿಲ್ಲಾಧಿಕಾರಿ ಗುರುಕರ್ ಹಾಗೂಪೊಲೀಸ್ ಕಮಿಷನರ್ ಚೇತನ್ ಸ್ಥಳಕ್ಕೆ ಆಗಮಿಸಿದ್ದಲ್ಲದೆ, ಸ್ವತಃಜಿಲ್ಲಾಧಿಕಾರಿಗಳು ಹಣ ಹಂಚುತ್ತಿದ್ದ ವ್ಯಕ್ತಿಗಳನ್ನು ಹಿಡಿಯಲು ಯತ್ನಿಸಿದ್ದಾರೆ.
ಈ ವೇಳೆ, ಸ್ಥಳದಿಂದ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಗಳ ಪೈಕಿ
ಶಿವಾನಂದ ಹುಲಿ ಎಂಬಾತನನ್ನು ಸ್ಥಳೀಯರ ಸಹಾಯದಿಂದ ಸ್ವತಃ ಡಿ.ಸಿ.
ಗುರುಕರ್ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆಯ ಬಳಿಕ ಸಂಗಮೇಶ್ವರ ನಗರ ಮತ್ತು ವಿದ್ಯಾನಗರ ಬಡಾವಣೆಯ
ಮನೆಗಳಲ್ಲಿ ತಪಾಸಣೆ ನಡೆಸಿದಾಗ ಹಣ ಮತ್ತು ಮದ್ಯದ ಬಾಟಲಿಗಳು
ದೊರೆತಿವೆ ಎನ್ನಲಾಗಿದೆ.ಘಟನೆ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.