ರೈಸ್ ಮಿಲ್: ರೈತರಿಗೆ ಮೋಸ


ರಾಯಚೂರು.ಜೂ.೦೧- ರೈಸ್ ಮಿಲ್ ಮಾಲೀಕರಿಂದ ಜಿಲ್ಲೆಯ ರೈತರಿಗೆ ಆಗುತ್ತಿರುವ ಮೋಸವನ್ನು ನಿಲ್ಲಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ರೈತರು ಬೆಳೆಯುತ್ತಿರುವ ಭತ್ತವನ್ನು ರೈಸ್ ಮಿಲ್ ಮಾಲೀಕರು ಖರೀದಿಸುವಾಗ ಖಾಲಿ ಚೀಲವನ್ನು ರೈತರಿಂದ ತರಿಸಿಕೊಂಡು ಚೀಲ ಸಮೇತವಾಗಿ ರೈಸ್ ಮಿಲ್ ನವರೆ ತೆಗೆದುಕೊಳ್ಳುತ್ತಿದ್ದರೆ ಇದರಿಂದಾಗಿ ರೈತರಿಗೆ ಪ್ರತಿ ಚೀಲಕ್ಕೆ ೩೦ರಿಂದ ೪೦ ರೂ ನಷ್ಟವಾಗುತ್ತದೆ. ಇದನ್ನು ತಕ್ಷಣ ನಿಲ್ಲಿಸಿ ರೈಸ್ ಮಿಲ್ ನವರು ಖಾಲಿ ಚೀಲದ ಹಣವನ್ನು ರೈತರಿಗೆ ಮರುಪಾವತಿಸಬೇಕು ಕೊಡಲೇ ರೈತರು ಬೆಳೆದ ಬೆಳೆಯನ್ನು ಸರ್ಕಾರಿ ಉಗ್ರಾಣದಲ್ಲಿ ಶೇಖರಣೆ ಮಾಡಬೇಕು, ಎಪಿಎಂಸಿ ಖರೀದಿ ಕೇಂದ್ರದಲ್ಲಿ ರೈತರು ನೋಡಾಯಿಸಲು ಜೂ.೩೦ ರವರೆಗೆ ಅವಧಿ ವಿಸ್ತರಣೆ ಮಾಡಬೇಕು,ವಿದ್ಯುತ್ ಕಣ್ಣಾಮುಚ್ಚಾಲೆ ಆಟವನ್ನು ಸರಿಪಡಿಸಬೇಕು, ಖಾಸಗಿ ರಸಗೊಬ್ಬರ ಅಂಗಡಿಗಳನ್ನು ಬೆಳಿಗ್ಗೆ ೬ರಿಂದ೧೦ಗಂಟೆಯ ವರೆಗೆ ಸಮಯ ನಿಗದಿ ಮಾಡಬೇಕು ಎಂದು ಒತ್ತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎನ್.ಲಕ್ಷಣಗೌಡ ಕದಗ್ಮದೊಡ್ಡಿ,ದೇವರಾಜ ನಾಯಕ್, ರಮೇಶ್, ಖಾಸಿಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.