ರೈಸ್ ಮಿಲ್ ಮಾಲೀಕರ ವಿರುದ್ಧ ಕ್ರಮಕ್ಕೆ ಆಗ್ರಹ

ರಾಯಚೂರು, ನ.೧೪- ನಗರದ ವಾರ್ಡ್ ನಂ.೧೩,೧೪,೧೫ ವಾರ್ಡ್‌ಗಳಿಗೆ ಸಂಬಂದಪಟ್ಟ ಪುರಾತನ ರಾಜುಕಾಲುವೆಯನ್ನು ಮುಚ್ಚಿ ರೈಸ್ ಮಿಲ್ ಮಾಲೀಕರು ಅಕ್ರಮವಾಗಿ ಮಳಿಗೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಕನ್ನಡಿಗರ ಪ್ರಗತಿಪರ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ನಗರದ ವಾರ್ಡ್ ನಂ. ೧೩,೧೪,೧೫ ರ ವಾರ್ಡ್‌ಗಳಿಗೆ ಸಂಬಂಧಪಟ್ಟ ಪುರಾತನ ರಾಜುಕಾಲುವೆಯನ್ನು ಅತಿಕ್ರಮಣ ಮಾಡಿ ರೈಸ್ ಮಿಲ್ ಮಾಲೀಕರು ಕಾನೂನು ಬಾಹಿರವಾಗಿ ಹಾಗೂ ನಗರಸಭೆಯ ನಿಯಮಗಳನ್ನು ಉಲ್ಲಂಘಿಸಿ ಕಾಲುವೆಯ ಮೇಲೆ ಮಳಿಗೆಗಳನ್ನು ನಿರ್ಮಾಣ ಮಾಡಲು ಸ್ಕ್ಯಾಬ್ ಹಾಕಿದ್ದಾರೆ ಎಂದು ಆರೋಪಿಸಿದರು.
ರಾಜುಕಾಲುವೆ ಮುಖಾಂತರ ಹರಿದು ಹೋಗುವ ಚರಂಡಿ ಹಾಗೂ ಮಳೆ ನೀರು ಅಕ್ಕಪಕ್ಕದ ಮನೆಗಳಿಗೆ ನುಗ್ಗಿ ತೀರಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ.ಚರಂಡಿ ನೀರು ಮನೆಗಳ ಅಂಗಳದಲ್ಲಿ ಮತ್ತು ರಸ್ತೆಯ ಮೇಲೆ ನಿಂತು ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಬಡಾವಣೆಗಳ ಅರರಿಗೆ ಸರಳ ರೋಗಗಳು ಹರಡುವ ಬೀತಿ ನಿರ್ಮಾಣವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಸ್ಥಳ ಪರಿಶೀಲನೆ ಮಾಡಿ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಭೀಮೇಶ, ವಿರೇಶ, ಭೀಮರಾಯ, ಬಾಬು, ರಾಜೇಶ್ ಮತ್ತು ಭರತ ಇದ್ದರು.