ರೈಸ್ ಪುಲ್ಲಿಂಗ್ ಮಿಷಿನ್ ಹೆಸರಲ್ಲಿ ಕೋಟಿಗಟ್ಟಲೇ ವಂಚನೆ ಮೂವರು ಸೆರೆ

ಬೆಂಗಳೂರು,ಏ.೧೭-ರೈಸ್ ಪುಲ್ಲಿಂಗ್ ಮಿಷಿನ್ ನೀಡುವುದಾಗಿ ಹೇಳಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ಕಡೆದು ವಂಚನೆ ನಡೆಸಿದ್ದ ಮೂವರು ಖತರ್ನಾಕ್ ಖದೀಮರನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಸಿಸಿಬಿ ಪೊಲೀಸರು ನಗದು,ಬೆಂಚ್ ಜೊತೆಗೆ ಮೂರು ದುಬಾರಿ ಕಾರುಗಳು ಸೇರಿ ೨.೮೮ಕೋಟಿ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.ನಟೇಶ್ ಅಲಿಯಾಸ್ ವೆಂಕಟರಮಣ(೪೪)ವೆಂಕಟೇಶ್(೪೭) ಹಾಗೂ ಸೋಮಶೇಖರ್ ( ೪೭) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಎಸ್ .ಡಿ.ಶರಣಪ್ಪ ಅವರು ತಿಳಿಸಿದ್ದಾರೆ.ಬಂಧಿತರಿಂದ ೨೮ ಲಕ್ಷ ನಗದು,ಬೆಂಚ್,ಸ್ಕಾರ್ಪಿಯೋ, ಫಾರ್ಚೂನ್ ಸೇರಿ ಮೂರು ಕಾರುಗಳು,೧ಕೆಜಿ ೩೩೨ ಗ್ರಾಂ ಚಿನ್ನಾಭರಣಗಳು ಸೇರಿ ೨.ಕೋಟಿ ೮೮ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಲಾಗಿದೆ ಎಂದರು.ಬಂಧಿತ ಆರೋಪಿಗಳು ಸಾರ್ವಜನಿಕರಿಗೆ ತಮ್ಮ ಬಳಿ ತುಂಬಾ ಬೆಲೆ ಬಾಳುವ ರೈಸ್ ಪುಲ್ಲಿಂಗ್ ಮೆಷಿನ್ ಇದ್ದು,ಅದು ಕೊಟ್ಯಾಂತರ ರೂ ಬೆಲೆ ಬಾಳಲಿದೆ ಎಂದು ಸಾರ್ವಜನಿಕರಿಗೆ ನಂಬಿಸಿ ಅದನ್ನು ಮಾರಾಟ ಮಾಡುವ ನೆಪ ಮಾಡಿ ಕೋಟ್ಯಾಂತರ ರೂ ಹಣವನ್ನು ಪಡೆದುಕೊಂಡು ಪಡೆದು ಯಾವುದೇ ರೈಸ್ ಪುಲ್ಲಿಂಗ್ ಮಿಷನ್ ಅನ್ನು ಕೊಡದೆ ಮೋಸ ಮಾಡಿ ಹಣವನ್ನು ತಮ್ಮ ಸ್ವಂತಕ್ಕೆಉಪಯೋಗಿಸಿಕೊಳ್ಳುತ್ತಿದ್ದರು.
ಇದೇ ರೀತಿ ಸಾರ್ವಜನಿಕರಿಗೆ ರೈಸ್‌ಪುಲ್ಲಿಂಗ್ ಹೆಸರಿನಲ್ಲಿ ವಂಚನೆ ಮಾಡಿರುವ ಸಂಬಂಧ ಆರೋಪಿಯಾದ ನಟೇಶ್ ಈತನ ವಿರುದ್ದ ನಂಜನಗೂಡು ಟೌನ್ ಠಾಣೆ,೪೨೦, ೩೪ ಐಪಿಸಿ, ಕೋಣನಕುಂಟೆ ಠಾಣೆಯಲ್ಲಿ ೧೨೦ಬಿ, ೪೨೦, ೪೬೫, ೪೬೮, ೪೭೧, ೪೭೨ ರೆ/ವಿ ೩೪ ಐಪಿಸಿ, ಹಾಗೂ ಮಾದನಾಯಕನಹಳ್ಳಿ ಠಾಣೆಯಲ್ಲಿ -೩೬೪ಎ, ೩೪೨, ೩೮೪, ೩೨೩, ೩೨೪, ೫೦೪, ೫೦೬, ೧೪೯ ಆಮ್ರ್ಸ್ ಸೆಕ್ಷನ್ ಗಳನ್ವಯ ಪ್ರಕರಣ ದಾಖಲಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.ರೈಸ್ ಪುಲ್ಲಿಂಗ್ ಮೆಷಿನ್ ಇದ್ದು,ಅದು ಕೊಟ್ಯಾಂತರ ರೂ ಬೆಲೆ ಬಾಳಲಿದೆ ಎಂದು ಸಾರ್ವಜನಿಕರಿಗೆ ನಂಬಿಸಿ ಮಾರಾಟ ಮಾಡುವ ನೆಪ ಮಾಡಿ ಕೋಟ್ಯಾಂತರ ರೂ ವಂಚನೆ ಮಾಡುತ್ತಿದ್ದ ಮಾಹಿತಿಯನ್ನು ಬೆನ್ನತ್ತಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಡಿಸಿಪಿ ಯತೀಶ್ ಚಂದ್ರ ಮತ್ತವರ ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.